ವ್ಯಾಪಾರದ ಹೆಸರಲ್ಲಿ ತಣ್ಣಗಿದ್ದ ಕೊಡಗು ಜಿಲ್ಲೆಯಲ್ಲಿ ಧರ್ಮ ಸಂಘರ್ಷ ಮತ್ತೆ ಹೊಗೆಯಾಡುತ್ತಿದೆ. ಪೊನ್ನಂಪೇಟೆ ತಾಲೂಕಿನ ಹರಿಹರ ಸುಬ್ರಹ್ಮಣ್ಯ ದೇವಾಲಯದಲ್ಲಿ ಅನ್ಯಧರ್ಮೀಯರ ವ್ಯಾಪಾರಕ್ಕೆ ನಿರ್ಬಂಧ ಹೇರಲಾಗಿದೆ. ದೇಗುಲ ವಾರ್ಷಿಕೋತ್ಸವದಲ್ಲಿ ಹಿಂದೂಗಳ ವ್ಯಾಪಾರಕ್ಕೆ ಮಾತ್ರ ಅವಕಾಶ ಇದೆ ಎಂದು ವಿಶ್ವ ಹಿಂದೂ ಪರಿಷತ್, ಭಜರಂಗದಳದ ಟಿ ಶೆಟ್ಟಿಗೇರಿ ಘಟಕ ವತಿಯಿಂದ ಬ್ಯಾನರ್ ಪ್ರದರ್ಶಿಸಲಾಗಿದೆ. ಇನ್ನ ನಿರ್ಬಂಧ ಮೀರಿ ವ್ಯಾಪಾರ ಮಾಡಿದ್ರೆ ತಕ್ಕ ಪ್ರತ್ಯುತ್ತರ ನೀಡಬೇಕಾದೀತು ಎಂದು ಭಜರಂಗದಳ ಘಟಕದ ಸಂಚಾಲಕ ಸಂತೋಷ್ ಎಚ್ಚರಿಕೆ ನೀಡಿದ್ದಾರೆ. ನವೆಂಬರ್ 29 ಮತ್ತು 30ರಂದು ಹರಿಹರ ಸುಬ್ರಹ್ಮಣ್ಯ ದೇವಾಲಯದ ವಾರ್ಷಿಕೋತ್ಸವ ನಡೆಯಲಿದ್ದು, ಹಿಂದೂ ಸಂಘಟನೆ ಪ್ರಮುಖರು ಅನ್ಯಕೋಮಿನ ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿರುವ ವಿಡಿಯೋ ವೈರಲ್ ಆಗಿದೆ.
-=====================================
ಕೊಡಗು ಜಿಲ್ಲೆಯಲ್ಲಿ ಧರ್ಮ ಸಂಘರ್ಷ
Date: