ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ2 ಯಶಸ್ಸಿನ ನಂತರ ಕಿಚ್ಚ ಹಾಗೂ ನಿರ್ಮಾಪಕ ಸೂರಪ್ಪ ಬಾಬು ಕಾಂಬಿನೇಶನ್ ನಲ್ಲಿ ಕೋಟಿಗೊಬ್ಬ3 ಸಿನಿಮಾ ಬರುತ್ತಿದೆ.
ಈ ಸಿನಿಮಾ ಸೆಟ್ಟೇರಿ ಈಗಾಗಲೇ ಎರಡು ತಿಂಗಳಾಯ್ತು. ಆದ್ರೆ,ನಾಯಕಿ ಮಾತ್ರ ಇನ್ನೂ ಫಿಕ್ಸ್ ಆಗಿಲ್ಲ.
ಸುದೀಪ್ ಕೂಡ ಇನ್ನು ಚಿತ್ರೀಕರಣದಲ್ಲಿ ಪಾಲ್ಗೊಂಡಿಲ್ಲ. ಆದ್ದರಿಂದ ನಾಯಕ-ನಾಯಕಿ ಇಲ್ಲದೇ ಚಿತ್ರೀಕರಣ ನಡೀತಾ ಇದೆ. ನಾಯಕ ಮತ್ತು ನಾಯಕಿ ಇಲ್ಲದ ದೃಶ್ಯಗಳ ಚಿತ್ರೀಕರಣ ನಡೀತಿದೆ.
ಈ ಸಿನಿಮಾಕ್ಕೆ ಸುದೀಪ್ ಕಥೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತವಿದೆ. ಕ್ಯಾಮರಮನ್ ಆಗಿ ಶೇಖರ್ ಚಂದ್ರ ಕಾರ್ಯನಿರ್ವಹಿಸ್ತಿದ್ದಾರೆ.