ಕೆಪಿಎಸ್‍ಸಿ: 1203 ಹುದ್ದೆಗೆ ಅರ್ಜಿ ಆಹ್ವಾನ

Date:

ಕರ್ನಾಟಕ ಲೋಕ ಸೇವಾ ಆಯೋಗವು ಗ್ರೂಪ್ ಎ ತಾಂತ್ರಿಕ, ಗ್ರೂಪ್ ಬಿ ತಾಂತ್ರಿಕ ಮತ್ತು ತಾಂತ್ರಿಕೇತರ ಹಾಗೂ ಗ್ರೂಪ್ ಸಿ ತಾಂತ್ರಿಕ ವೃಂದದ ಹುದ್ದೆಗಳನ್ನು ಭರ್ತಿ ಮಾಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದ್ದು ಒಟ್ಟು 1203 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಡಿಸೆಂಬರ್ 17 ರಿಂದ ಜನವರಿ 15ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಅಂಚೆ ಕಛೇರಿಯಲ್ಲಿ ಶುಲ್ಕ ಪಾವತಿಸಲು ಜನವರಿ 16ರವರೆಗೆ ಕಾಲಾವಕಾಶ ನೀಡಲಾಗಿದೆ. ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕವಾಗಿಯೂ ಕೂಡ ಶುಲ್ಕ ಪಾವತಿ ಮಾಡಬಹುದು ಎಂದು ತಿಳಿಸಿದೆ. ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಅರ್ಜಿ ಸಲ್ಲಿಸಲು ಬಯಸಿದರೆ ಆಯಾ ಹುದ್ದೆಗೆ ಸಂಬಂಧಿಸಿದ ವಿವರಗಳನ್ನು ಭರ್ತಿ ಮಾಡಿ, ಒಂದು ಹುದ್ದೆಗಳಿಗೆ ಮಾತ್ರ ಶುಲ್ಕ ಪಾವತಿ ಮಾಡಿದರೆ ಸಾಕು. ಸ್ಪರ್ಧಾತ್ಮಕ ಪರೀಕ್ಷೆಯ ಶೇ. 12.5 ಅಂಕವನ್ನು ಸಂದರ್ಶನಕ್ಕಾಗಿ ಮೀಸಲಿಟ್ಟಿದ್ದು, ನಿಗದಿತ ಅನುಪಾತದಲ್ಲಿ ಕರೆಯಲಾಗುವುದು.


ಯಾವ ಹುದ್ದೆಗೆ ಎಷ್ಟು ಪೋಸ್ಟ್..?
ಗ್ರೂಪ್ ಎ ಹುದ್ದೆಗಳು- 63
ಗ್ರೂಪ್ ಬಿ ಹುದ್ದೆಗಳು- 842
ಗ್ರೂಪ್ ಸಿ ಹುದ್ದೆಗಳು- 298
ಒಟ್ಟು ಹುದ್ದೆ- 1203
ಅರ್ಜಿ ಶುಲ್ಕ
ಪ್ರವರ್ಗ 2(ಎ), 3(ಎ), (ಬಿ)- 150ರೂ
ಪರಿಶಿಷ್ಟ ಜಾತಿ/ಪಂಗಡ, ಪ್ರವರ್ಗ,1 ಅಂಗವಿಕಲ ಮತ್ತು ಮಾಜಿ ಸೈನಿಕ ಅಭ್ಯರ್ಥಿ- 25ರೂ
ವಯೋಮಿತಿ
ಸಾಮಾನ್ಯ ವರ್ಗ- 35 ವರ್ಷ
2(ಎ), 3(ಎ), (ಬಿ)- 38 ವರ್ಷ
ಪರಿಶಿಷ್ಟ ಜಾತಿ/ಪಂಗಡ, ಪ್ರವರ್ಗ,1- 40 ವರ್ಷ
ಪ್ರಶ್ನೆ ಪತ್ರಿಕಾ ವಿಧಾನ
ಸಾಮಾನ್ಯ ಪತ್ರಿಕೆ 200 ಅಂಕ. 1 ಗಂಟೆ 30 ನಿಮಿಷ
ನಿದಿಷ್ಟ ಪತ್ರಿಕೆ 200 ಅಂಕ. 2 ಗಂಟೆ
ಬಹು ಆಯ್ಕಾ ಮಾದರಿ ಪ್ರಶ್ನೆ ಪತ್ರಿಕೆಯಾಗಿದ್ದು ತಪ್ಪು ಉತ್ತರಕ್ಕೆ 0.25ರಷ್ಟು ಕಡಿತಗೊಳಿಸಲಾಗುತ್ತೆ.

click here Download notification : http://bit.ly/2h20VkM

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಕೆಲವೇ ದಿನಗಳಲ್ಲಿ ಬೆಂಗಳೂರಲ್ಲೂ ಸಂಚರಿಸಲಿದೆ ಸಬ್ ಅರ್ಬನ್ ರೈಲು..!

ನಿಮ್ಮ ಖಾತೆಯಲ್ಲಿ 2 ಲಕ್ಷ ರೂ. ಜಮಾ ಆಗಿದ್ಯಾ..? ಹಾಗಾದ್ರೆ ನಿಮ್ಗೆ ಕಾದಿದೆ ಗಂಡಾಂತರ..!

ಆರ್‍ಟಿಇ ಪ್ರವೇಶ: ಜನವರಿ 15ರಿಂದ ಅರ್ಜಿ ಸ್ವೀಕೃತಿ, ಆಧಾರ್ ಕಡ್ಡಾಯ

Share post:

Subscribe

spot_imgspot_img

Popular

More like this
Related

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌

ಬಾನು ಮುಷ್ತಾಕ್‌ ಆಯ್ಕೆ ಪ್ರಶ್ನಿಸಿ ಸಲ್ಲಿಸಿದ್ದ PIL ವಜಾ ಮಾಡಿದ ಹೈಕೋರ್ಟ್‌ ಬೆಂಗಳೂರು:...

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...