No menu items!
8 C
Munich
Saturday, May 2, 2026

ಮನೆಯಲ್ಲೇ ನಕಲಿ ನೋಟು ತಯಾರಿಸುತ್ತಿದ್ದ ಡಾಕ್ಟರ್..!

Must read

ನೋಟು ಅಮಾನ್ಯಗೊಂಡ ನಂತ್ರ ದೇಶದಲ್ಲಿ ಐಟಿ ದಾಳಿಯಿಂದ ಕೋಟ್ಯಾಂತರ ರೂಪಾಯಿ ಕಪ್ಪುಹಣ ಹೊರ ಬಂದ ಬೆನ್ನಲ್ಲೆ ಹೊಸ ನೋಟುಗಳನ್ನು ನಕಲಿ ಮಾಡುವವರ ಹಾವಳಿ ಕೂಡ ಅಷ್ಟೆ ವೇಗವಾಗಿದೆ..! ಇನ್ನು ಮಾರುಕಟ್ಟೆ ಪ್ರವೇಶ ಮಾಡಿರೊ ಹೊಸ 2000ರೂ. ನೋಟುಗಳನ್ನು ನಕಲು ಮಾಡುತ್ತಿದ್ದ ವೈದನೊಬ್ಬ ಈಗ ಪೊಲೀಸ್ ಅಥಿತಿಯಾಗಿದ್ದಾನೆ..! ಮಹಾರಾಷ್ಟ್ರ ಕೊಲ್ಲಾಪುರ ನಿವಾಸಿಯಾದ ವೈದ್ಯ ಸುಧೀರ್ ಎಂಬಾತ 2 ಸಾವಿರ ರೂ ಮುಖಬೆಲೆಯ ನಕಲಿ ನೋಟುಗಳನ್ನು ಬಳಸಿ ಚಪ್ಪಲಿ ಖರೀದಿ ಮಾಡಿದ್ದಾನೆ. ಆದರೆ ಆತ ನೀಡಿದ ನೋಟಿನ ಮೇಲೆ ಸಂಶಯಗೊಂಡ ವ್ಯಾಪಾರಿ ಸೀದ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ. ಕೂಡಲೇ ವೈದ್ಯನನ್ನು ವಶಕ್ಕೆ ಪಡೆದುಕೊಂಡ ಪೊಲೀಸರು ಆತನಿಂದ ಕೆಲ ಮಾಹಿತಿಯನ್ನು ಹೊರ ಹಾಕಿದ್ದಾರೆ. ಕಂಪ್ಯೂಟರ್ ಹಾಗೂ ಕಲರ್ ಪ್ರಿಂಟ್ ಬಳಸಿ ಈತನೇ ಹೊಸ ನೋಟು ತಯಾರು ಮಾಡ್ತಾ ಇದ್ದ ಎಂಬ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ..! ಅಷ್ಟೆ ಅಲ್ಲ ಈತ 20, 50, ಹಾಗೂ 100ರೂ ನಕಲಿ ನೋಟುಗಳನ್ನು ಪ್ರಿಂಟ್ ಮಾಡ್ತಾ ಇದ್ದ ಎಂದು ತಿಳಿದು ಬಂದಿದ್ದು. ನಕಲಿ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಕೆಲವೇ ದಿನಗಳಲ್ಲಿ ಬೆಂಗಳೂರಲ್ಲೂ ಸಂಚರಿಸಲಿದೆ ಸಬ್ ಅರ್ಬನ್ ರೈಲು..!

ನಿಮ್ಮ ಖಾತೆಯಲ್ಲಿ 2 ಲಕ್ಷ ರೂ. ಜಮಾ ಆಗಿದ್ಯಾ..? ಹಾಗಾದ್ರೆ ನಿಮ್ಗೆ ಕಾದಿದೆ ಗಂಡಾಂತರ..!

ಆರ್‍ಟಿಇ ಪ್ರವೇಶ: ಜನವರಿ 15ರಿಂದ ಅರ್ಜಿ ಸ್ವೀಕೃತಿ, ಆಧಾರ್ ಕಡ್ಡಾಯ

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article