KSRTC ಇನ್ನು ನೆನಪು ಮಾತ್ರ: ಕರ್ನಾಟಕಕ್ಕೆ ಸೋಲು!

0
47

ಕೆ ಎಸ್ ಆರ್ ಟಿ ಸಿ.. ಈ ಹೆಸರು ಕೇಳಿದ ಕೂಡಲೆ ಎಲ್ಲರಿಗೂ ನೆನಪಾಗುತ್ತದೆ ಕರ್ನಾಟಕ ರಾಜ್ಯದ ಸರ್ಕಾರಿ ಸಾರಿಗೆ ವಾಹನಗಳು. ಇದೇ ರೀತಿ ಕೇರಳ ರಾಜ್ಯದ ಸರ್ಕಾರಿ ಬಸ್ಸುಗಳಿಗೋ ಸಹ ಕೆ ಎಸ್ ಆರ್ ಟಿ ಸಿ ಎಂದೇ ಹೆಸರನ್ನು ಇಡಲಾಗಿತ್ತು. ಎರಡೂ ರಾಜ್ಯಗಳು ಸಹ ಒಂದೇ ಅನ್ವರ್ಥನಾಮವನ್ನು ಬಳಸುತ್ತಿದ್ದ ಕಾರಣ ಎರಡೂ ರಾಜ್ಯಗಳು ಯಾರಿಗೆ ಆ ಹೆಸರು ಸೇರಬೇಕೆಂದು ತೀರ್ಮಾನಿಸಿಕೊಳ್ಳಲು 27 ವರ್ಷಗಳ ಹಿಂದೆ ದೂರನ್ನು ದಾಖಲು ಮಾಡಿಕೊಂಡಿದ್ದವು.

 

ಇದೀಗ ಸತತ 27 ವರ್ಷಗಳ ಸುದೀರ್ಘ ಹೋರಾಟದ ನಂತರ ತೀರ್ಪು ಹೊರಬಿದ್ದಿದ್ದು ಕೆಎಸ್ ಆರ್ ಟಿಸಿ ಎಂಬ ಹೆಸರನ್ನು ಕೇರಳ ಬಸ್ಸುಗಳು ಮಾತ್ರ ಬಳಸಬಹುದು ಎಂದು ತೀರ್ಮಾನಿಸಲಾಗಿದೆ. ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಇಲಾಖೆಯು ಈ ತೀರ್ಪನ್ನು ನೀಡಿದ್ದು ಮುಂದಿನ ದಿನಗಳಲ್ಲಿ ಕರ್ನಾಟಕ ರಾಜ್ಯದ ಬಸ್ಸುಗಳಿಗೆ ಕೆಎಸ್ಆರ್ಟಿಸಿ ಎಂಬ ಹೆಸರನ್ನು ಬಳಸುವಂತಿಲ್ಲ.

ಎಲ್ಲಾ ಬಸ್ಸುಗಳ ಮೇಲಿರುವ ಕೆಎಸ್ಆರ್ಟಿಸಿ ಲೋಗೋಗಳನ್ನು ಕೂಡ ತೆರವುಗೊಳಿಸಿ ಹೊಸ ಹೆಸರನ್ನು ಹುಡುಕಿಕೊಂಡು ಬಳಸಿಕೊಳ್ಳಬಹುದು ಎಂದು ಟ್ರೇಡ್ ಮಾರ್ಕ್ ರಿಜಿಸ್ಟ್ರಿ ಕರ್ನಾಟಕಕ್ಕೆ ಸೂಚನೆ ನೀಡಿದೆ. ಒಟ್ಟಿನಲ್ಲಿ 27 ವರ್ಷಗಳ ಹೋರಾಟದ ಬಳಿಕ ಕರ್ನಾಟಕ ಕೆಎಸ್ ಆರ್ ಟಿಸಿ ಹೆಸರನ್ನ ಕಳೆದುಕೊಂಡಿದೆ.

LEAVE A REPLY

Please enter your comment!
Please enter your name here