ಮುನಿಯಪ್ಪನವರು ನಮ್ಮ ಪಕ್ಷ ಸೇರ್ತಾರೆ ಅಂತ ಆಶಾದಾಯಕವಾಗಿದ್ದೇವೆ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಮುನಿಯಪ್ಪ ಅವರ ಜತೆ ರಾಜಕೀಯ ಹೊರತಾದ ಸ್ನೇಹ ಇದೆ. ಅವರು ನಮ್ಮ ಕುಟುಂಬದ ಸ್ನೇಹಿತರು. ಯಾವುದೋ ಬೇರೆ ವಿಚಾರಕ್ಕೆ ಅವರು ಭೇಟಿ ಮಾಡಿದ್ದಾರೆ. ಮುನಿಯಪ್ಪನವರು ನಮ್ಮ ಪಕ್ಷ ಸೇರ್ತಾರೆ ಅಂತ ಆಶಾದಾಯಕವಾಗಿದ್ದೇವೆ. ಮುನಿಯಪ್ಪನವರಷ್ಟೇ ಅಲ್ಲ ಕಾಂಗ್ರೆಸ್ನ ಬೇರೆ ಬೇರೆ ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಸುಳಿವು ನೀಡಿದರು. ಇನ್ನೂ ಕಾಂಗ್ರೆಸ್ ಹಿರಿಯ ಮುಖಂಡ ಕೆ ಹೆಚ್ ಮುನಿಯಪ್ಪ ಬಿಜೆಪಿ ಸರ್ಪಡೆಯಾಗುವ ಬಗ್ಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಸುಳಿವು ನೀಡಿದ್ದಾರೆ. ಇಂದು ಕೆ ಹೆಚ್ ಮುನಿಯಪ್ಪ ಸದಾಶಿವನಗರದಲ್ಲಿನ ಸಚಿವ ಡಾ ಕೆ ಸುಧಾಕರ್ ನಿವಾಸಕ್ಕೆ ಭೇಟಿ ನೀಡಿರುವುದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಇತ್ತೀಚೆಗಷ್ಟೇ ಸುಧಾಕರ್ ಅವರು ಕೆ ಹೆಚ್ ಮುನಿಯಪ್ಪ ನಿವಾಸಕ್ಕೆ ಭೇಟಿ ನೀಡಿದ್ದರು. ಇಂದು ಮತ್ತೆ ಸುಧಾಕರ್ ಭೇಟಿ ಮಾಡಿ ಅಚ್ಚರಿ ಹುಟ್ಟಿಸಿದ್ದಾರೆ.
ಬಿಜೆಪಿ ಸೇರ್ತಾರಾ ಮುನಿಯಪ್ಪ ?
Date: