ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ, ಮುನಿರತ್ನ ನಿರ್ಮಾಣದ ‘ಕುರುಕ್ಷೇತ್ರ’ ಸಿನಿಮಾದ ಆಡಿಯೋ ಈ ತಿಂಗಳ ಕೊನೆಯಲ್ಲಿ ಬಿಡುಗಡೆಯಾಗಲಿದೆ.
ಪೌರಾಣಿಕ ಸಿನಿಮಾವಾದ ಕುರುಕ್ಷೇತ್ರದ ಆಡಿಯೊ ಹಕ್ಕು ಬಹು ದೊಡ್ಡ ಮೊತ್ತಕ್ಕೆ ಲಹರಿ ಕಂಪನಿಗೆ ಮಾರಾಟವಾಗಿದೆ. ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಸಿದ್ಧತೆ ನಡೆದಿದ್ದು, ಶೀಘ್ರದಲ್ಲೇ ರಿಲೀಸ್ ಆಗಲಿದೆ.
ವಿ. ಹರಿಕೃಷ್ಣ ಸಂಗೀತ ನಿರ್ದೇಶಿಸಿದ್ದು, ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ಶ್ಲೋಕ ಹಾಗೂ ಸ್ಕಂದ ಪದ್ಯಗಳಿರೋ ನಾಲ್ಕು ಹಾಡುಗಳಿವೆ.
3ಡಿ ಗ್ರಾಫಿಕ್ಸ್ ನಿಂದ ಹೆಚ್ಚು ಸಮುವಾಗುತ್ತಿದ್ದು, ಬೆಂಗಳೂರು, ಮುಂಬೈ, ಹೈದರಾಬಾದಿನ ತಂತ್ರಜ್ಞರು ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.