ಇಂದು ಲಾಲ್ ಬಹುದ್ದೂರ್ ಶಾಸ್ತ್ರೀಜಿ ಜನ್ಮದಿನ ಪಾಕಿಸ್ತಾನವನ್ನು ಹೆಡೆಮುರಿ ಕಟ್ಟಿದ್ದ ಧೀಮಂತ ನಾಯಕನ ನೆನಪು..

Date:

ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡಿದ್ದ ಹುಡುಗ ಮುಂದೆ ದೇಶದ ಪ್ರಧಾನಿಯಾದ..!
ಅವತ್ತು ಮಕ್ಕಳು ಶಾಲೆ ಮುಗಿಸಿ ಮನೆಗೆ ಹೊರಟಿದ್ದರು..! ದಾರಿಯಲ್ಲಿ ಬರುತ್ತಿರಬೇಕಾದರೆ ಮಾವಿನ ತೋಪು ಕಾಣುತ್ತೆ..! ದಿನಾ ಅದೇ ದಾರಿಯಲ್ಲಿ ಬರುವಾಗ ಆ ಮಾವಿನ ತೋಪಿನ ಮಾವುಗಳನ್ನು ನೋಡಿ ಬಾಯಿಯಲ್ಲಿ ನೀರು ಸುರಿಸಿ ಸುರಿಸಿ ಬೇಜಾರಾಗಿತ್ತು ಅನಿಸುತ್ತೆ..! ಪಾಪ, ಆ ಹುಡುಗರು ಮಾವಿನ ತೋಪಿಗೆ ಮುಗಿ ಬಿದ್ದೇ ಬಿಟ್ಟರು..! ಮರವೇರಿ ಮಾವಿನ ಹಣ್ಣನ್ನು ಕೀಳಲಾರಂಭಿಸಿಯೇ ಬಿಡ್ತಾರೆ..! ಆದರೆ ಅವರಲ್ಲಿ ಒಬ್ಬ ಪಾಪದ ಹುಡುಗ ಮರದ ಕೆಳಗೆ ನಿಂತು ಮಾವಿನ ಹಣ್ಣು ಕೀಳುತ್ತಿದ್ದ ಸ್ನೇಹಿತರನ್ನೇ ನೋಡುತ್ತಾ ಇದ್ದ..! ಅದೇ ಸಮಯಕ್ಕೆ ಸರಿಯಾಗಿ ಆ ತೋಪಿನ ಕಾವಲುಗಾರ ಬರುತ್ತಾನೆ..! ಆತ ಬಂದಿದ್ದೇ ತಡ ಎದ್ನೋ ಬಿದ್ನೋ ಅಂತ ಮಕ್ಕಳೆಲ್ಲಾ ಓಡಿ ಹೋಗ್ತಾರೆ..! ಸುಮ್ಮನೆ ಮರದ ಕೆಳಗೆ ನಿಂತಿದ್ದ ಆ ಹುಡುನಿದ್ದನಲ್ಲಾ.., ಅವನು ಈ ಕಾವಲಿಗನಿಗೆ ಸಿಕ್ಕಿ ಬೀಳ್ತಾನೆ..! ಸಿಕ್ಕಾಪಟ್ಟೆ ಪೆಟ್ಟನ್ನೂ ತಿನ್ತಾನೆ..! “ನನ್ನನ್ನು ಬಿಟ್ಟು ಬಿಡಿ, ತಪ್ಪಾಯ್ತು,ನನಗೆ ಅಪ್ಪ ಇಲ್ಲ” ಅಂತ ಅಳಲಾರಂಭಿಸ್ತಾನೆ..! ಆಗ ಆ ಕಾವಲುಗಾರನ ಮನಸ್ಸು ಕರಗುತ್ತೆ..! ಆತ ಆ ಹುಡುಗನಿಗೆ…, “ಮಗು, ನೀನು ತಂದೆ ಇಲ್ಲದ ಹುಡುಗ ಸ್ವಲ್ಪ ಜವಬ್ದಾರಿಯಿಂದ ಇರು” ಅಂತ ಹೇಳಿ ಬಿಟ್ಟು ಕಳುಹಿಸುತ್ತಾನೆ..! ಆತನ ಮಾತು ಈ ಹುಡುಗನಿಗೆ ಮನಮುಟ್ಟುತ್ತದೆ..! ಆಮೇಲೆ ಈ ಹುಡುಗ ಇಂತಹ ಕೆಲಸ ಜೀವಮಾನದಲ್ಲೇ ಮಾಡಲಾರೆನೆಂದು ಪ್ರತಿಜ್ಞೆ ಮಾಡುತ್ತಾನೆ..! ಅದರಂತೇ ನಡೆದು ಕೊಳ್ಳುತ್ತಾನೆ. ಈ ಘಟನೆ ನಡೆದಾಗ ಈ ಹುಡುಗನಿಗೆ 6-7 ವರ್ಷವಾಗಿದ್ದಿರ ಬಹುದು..! ಈಗ ಆತ 111 ವಸಂತಗಳನ್ನು ಪೂರೈಸಿ 112ನೇ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾನೆ..! ಆದರೆ ಆ ಹುಡುಗ ಇಂದು ನಮ್ಮೊಡನೆ ಇಲ್ಲ..! ಆದರೆ ಆತನ ಹೆಜ್ಜೆ ಗುರುತು ಮಾತ್ರ ದೇಶದ ಇತಿಹಾಸದಲ್ಲೇ ಅವಿಸ್ಮರಣೀಯ..! ಆ ಹುಡುಗನಿಗೆ ಇಂದು ಅವನು ಎಂದು ಸಂಭೋಧಿಸಿದರೆ ನಾವು ತುಂಬಾ ಚಿಕ್ಕವರಾಗುತ್ತೇವೆ..! ಏಕವಚದಲ್ಲಿ ಕರೆಯುವುದು ತಪ್ಪಾಗುತ್ತದೆ..! ಅವರ ಮುಂದೆ ನಾವುಗಳು ತೃಣ ಸಮಾನರು..! ಅದೇ ಮಾವಿನ ತೋಪಿನಲ್ಲಿ ಸಿಕ್ಕಿ ಬಿದ್ದಿದ್ದ ಹುಡುಗ ಇವತ್ತು ದೇಶದ ಎಲ್ಲರ ಮನದಲ್ಲಿಯೂ ಹಸಿರಾಗಿದ್ದಾರೆ..! ಅವರೀಗ ದೇಶದ ಹೆಮ್ಮೆಯ ವ್ಯಕ್ತಿ..! ಆ ಹುಡಗ ಬೇರೆ ಯಾರೂ ಅಲ್ಲ ಸ್ವತಂತ್ರ ಭಾರತದ ಎರಡನೇ ಪ್ರಧಾನಿ “ಲಾಲ್ ಬಹುದ್ದೂರ್ ಶಾಸ್ತ್ರಿ”…!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಹೌದು, ಅಕ್ಟೋಬರ್ 2 ನಮ್ಮ ರಾಷ್ಟ್ರಪಿತ ಗಾಂಧೀಜಿಯವರ ಜನ್ಮದಿನ ಮಾತ್ರವಲ್ಲ..! ಶಾಸ್ತ್ರೀಜಿಯವರ ಜನ್ಮದಿನವೂ ಹೌದು..! ಈ ಬಗ್ಗೆ ತುಂಬಾ ಜನಕ್ಕೆ ಗೊತ್ತೇ ಇಲ್ಲ..! ಲಾಲ್ ಬಹುದ್ದೂರ್ ಶಾಸ್ತ್ರೀಜಿಯವರ ಬಗ್ಗೆ ಮಾತನಾಡಲೇ ಬೇಕು..! ಅವರ ಬಗ್ಗೆ ಮಾತನಾಡುತ್ತಾ ಹೋದರೆ ಮುಗಿಯದದು ಪದಗಳ ಸಾಲು..! ಅಂತಹ ಮೇರು ವ್ಯಕ್ತಿತ್ವದ ಬಗ್ಗೆ ಸಣ್ಣದಾದ ಪರಿಚಯ ಇಲ್ಲದೆ.
ಲಾಲ್ ಬಹುದ್ದೂರ್ ಶಾಸ್ತ್ರಿ ದೇಶದ ಎರಡನೇ ಪ್ರಧಾನಿಯಾಗಿ ಸರಳತೆ, ಸಜ್ಜನಿಕೆ, ಪಾರದರ್ಶಕತೆಯಿಂದ ಎಲ್ಲರಿಗೂ ಆದರ್ಶರು. ಇವರು ಶಾರದ ಪ್ರಸಾದ್ ಮತ್ತು ರಾಮ್ದುಲಾರಿ ದೇವಿ ದಂಪತಿಗಳ ಪುತ್ರ. 1904ರ ಅಕ್ಟೋಬರ್ 02ರಂದು ಉತ್ತರ ಪ್ರದೇಶದ ರುದ್ರಪ್ರಯಾಗ ಎಂಬಲ್ಲಿ ಇವರ ಜನನವಾಗುತ್ತದೆ. ಗಾಂಧೀಜಿ ನೇತೃತ್ವದಲ್ಲಿ ನಡೆದ 1942ರ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಇವರೂ ಮುಂಚೂಣಿಯಲ್ಲೇ ಇದ್ದರು. ಆ ಸಮಯದಲ್ಲಿ ಕ್ವಿಟ್ ಇಂಡಿಯಾ ಚಳುವಳಿಗೆ ಹೊರಟಿದ್ದ ಶಾಸ್ತ್ರಿಯವರನ್ನು ಅವರ ಹೆಂಡತಿ ಲಲಿತಾ ದೇವಿಯವರು “ಜೈಲುಗಳು ಈಗಾಗಲೇ ತುಂಬಿ ತುಳುಕುತ್ತಿವೆ, ಈಗ ನೀವೆಲ್ಲಿಗೆ ಹೊರಟಿದ್ದೀರಿ” ಅಂತ ಕೇಳ್ತಾರೆ..! ಆಗ ಬಾಲ್ಯದಲ್ಲಿಯೇ ಗಾಂಧೀಜಿ, ಲೋಕಮಾನ್ಯ ಬಾಲಗಂಗಾಧರ ತಿಲಕರಿಂದ ಪ್ರೇರಿತರಾಗಿದ್ದ ಶಾಸ್ತ್ರೀಜಿ ” ನನ್ನ ಜಾಗ ಅಲ್ಲಿ ಮೊದಲೇ ಮೀಸಲಾಗಿದೆ ಕಣೇ.” ಅಂತಾರಂತೆ..! ಇದೊಂದು ಮಾತು ಸಾಕಲ್ಲವೇ ಲಾಲ್ ಬಹುದ್ದೂರ್ ಎಂಥಹಾ ದೇಶಪ್ರೆಮಿ ಅನ್ನೋದಕ್ಕೆ.
ಭಾರತಕ್ಕೆ ಸ್ವಾತಂತ್ರ್ಯವೂ ಸಿಕ್ಕಿತು.. ನೆಹರೂ ಪ್ರಧಾನಿಯೂ ಆಗ್ತಾರೆ.! ದುರಾದೃಷ್ಟವಶಾತ್ ನಾವು ನೆಹರೂರನ್ನು ಕಳೆದುಕೊಳ್ಳುತ್ತೇವೆ. ಆಗ ದೇಶದ ಪ್ರಧಾನಿಯನ್ನಾಗಿ ಯಾರನ್ನ ಮಾಡೋದು ಅಂತ ಯೋಚಿಸಿದಾಗ ಎಲ್ಲರೂ ಆ ಉನ್ನತ ಹುದ್ದೆಗೆ ಸರಿಯಾದ ವ್ಯಕ್ತಿ ಎಂದರೆ ಅದು ಲಾಲ್ ಬಹುದ್ದೂರ್ ಶಾಸ್ತ್ರಿ ಎಂದು ಸಮ್ಮತಿಸಿಯೇ ಬಿಡ್ತಾರೆ.
ಹೌದು, ನೆಹರೂ ನಂತರ ಶಾಸ್ತ್ರಿಜಿ 1964ರಲ್ಲಿ ಭಾರತದ ಪ್ರಧಾನಿಯಾಗಿ ಆಡಳಿತ ಚುಕ್ಕಾಣಿಯನ್ನು ಕೈಗೆತ್ತಿಕೊಳ್ಳುತಾರೆ. ಅವರ ಅಧಿಕಾರ ಹೂವಿನ ಹಾಸಿಗೆ ಆಗಿರಲಿಲ್ಲ.ಮುಳ್ಳಿನ ಸಿಂಹಾಸನವಾಗಿತ್ತು…! ಚೀನಾ ನಮ್ಮ ದೇಶಕ್ಕೆ ಸುಧಾರಿಸಿಕೊಳ್ಳಲಾಗದ ಪೆಟ್ಟು ನೀಡಿರುತ್ತದೆ. ದೇಶದಲ್ಲಿ ಆಹಾರ ಸಮಸ್ಯೆ ತಾಂಡವವಾಡ್ತಾ ಇದ್ದ ಕಾಲವದು. ಆಗ ಅಮೇರಿಕಾ ಕಳುಹಿಸಿದ್ದ ಕಳಪೆ ಗೋಧಿಯನ್ನು ವಿರೋಧಿಸಿ( ಫುಡ್ ಫಾರ್ ಪೀಸ್ ಅಡಿಯಲ್ಲಿ) “ಈ ರೀತಿಯ ಅನುಮಾನಕ್ಕೆ ಒಳಗಾಗುವ ಬದಲು ಉಪವಾಸದಿಂದ ಇರೋಣ” ಎಂದು ದೇಶದ ಜನತೆಗೆ ಕರೆಕೊಟ್ಟಿದ್ದರು..! ಬದಲಾವಣೆ ನಿನ್ನಿಂದಲೇ ಆರಂಭವಾಗಲಿ ಎಂಬ ತತ್ವದಲ್ಲಿ ನಂಬಿಕೆ ಹೊಂದಿದ್ದ ಶಾಸ್ತ್ರಿಗಳು ಆ ಕರೆ ಕೊಡುವ ಮೊದಲೇ ಮನೆಯಲ್ಲಿ ರಾತ್ರಿ ಅಡುಗೆ ಮಾಡಬಾರದೆಂದು ಆದೇಶಿಸಿದ್ದರಂತೆ..!
ಶಾಸ್ತ್ರೀಜಿ ಕಾಲದ ದೊಡ್ಡ ತಲೆನೋವೇ ಪಾಕಿಸ್ತಾನವಾಗಿತ್ತು. ಕಚ್ ಬಳಿ ನಡೆದ ಯುದ್ಧ ಯುಎಎನ್ ಮಧ್ಯಸ್ಥಿಕೆಯಿಂದ ನಿಂತು ಹೋಗಿತ್ತು. ಆದರೆ ಅದು ಜಮ್ಮು ಕಾಶ್ಮೀರದಲ್ಲಿ ಪ್ರಾರಂಭವಾಗುತ್ತೆ. ಆ ಎರಡನೇ ಭಾರತ ಪಾಕ್ ಯುದ್ಧದಲ್ಲಿ ಪಾಕಿಸ್ತಾನ ಭಾರತ ಕಾಶ್ಮೀರದತ್ತ ನುಗ್ಗಿದಾಗ ಅವರ ದಾರಿ ತಪ್ಪಿಸಲು ಲಾಹೋರ್ ಕಡೆ ಭಾರತ ನುಗ್ಗಲೇ ಬೇಕಾಗಿರುತ್ತದೆ ಆಗ “ಲಾಹೂರ್ ಕಡೆ ನುಗ್ಗುವುದು ಅಂತರಾಷ್ಟ್ರೀಯ ಗಡಿ ದಾಟಿದಂತೆ, ಆದರೆ ಅವರು ಕಾಶ್ಮೀರಕ್ಕೆ ನುಗ್ಗಿಲ್ಲವೇ..? ನಾವು ನುಗ್ಗೋಣ ಅನ್ನೊ ತೀಮರ್ಾನಕ್ಕೆ ಬಂದು ಆ ನಿಟ್ಟಿನಲ್ಲಿ ತಮ್ಮ ಸೇನೆಗೆ ಆದೇಶಿಸಿಯೇ ಬಿಡ್ತಾರೆ..! ಆ ನಿರ್ಧಾರ ತೆಗೆದುಕೊಂಡಿದ್ದು ಕೇವಲ 10-15 ನಿಮಿಷ ಕಾಲವಧಿಯಲ್ಲಿ…!
ನಂತರ 1966 ಜನವರಿ 10ರಂದು ಭಾರತ ಮತ್ತು ಪಾಕ್ ನಡುವೆ ಟಾಶ್ಕೆಂಟ್ ಒಪ್ಪಂದ ಆಗುತ್ತದೆ. ಲಾಲ್ಬಹುದ್ದೂರ್ ಶಾಸ್ತ್ರೀ ಮತ್ತು ಆಯೂಬ್ ಖಾನ್ ನಡುವೆ ಆ ಶಾಂತಿ ಒಪ್ಪಂದ ಆಗುತ್ತದೆ. ಆದರೆ ಪಾಕಿಸ್ತಾನದವರೇ ಊಟಕ್ಕೆ ವಿಷ ಬೆರೆಸಿ ನಮ್ಮ ಶಾಸ್ತ್ರೀಜಿಯನ್ನು ಸಾಯಿಸುತ್ತೆ..! ಅದರೊಂದಿಗೆ ಜನಮೆಚ್ಚಿದ ನಾಯಕನನ್ನು ನಾವುಗಳು ಕಳೆದುಕೊಳ್ಳುತ್ತೇವೆ. ಆದರೆ ಶಾಸ್ತ್ರೀಜಿ ಸಾವಿನ ಬಗ್ಗೆ ಇಂದಿಗೂ ಅನೇಕ ಅನುಮಾನಗಳಿವೆ..! ಅವರ ಸಾವು ನಿಗೂಢವಾಗಿಯೇ ಇದೆ.
ಬಡತನದಲ್ಲಿ ಹುಟ್ಟಿ ಬೆಳೆದ, ತಂದೆ ಇಲ್ಲದ ಹುಡುಗನೊಬ್ಬ ದೇಶದ ಪ್ರಧಾನಿಯಾಗಿ ಪಾಕಿಸ್ತಾನಕ್ಕೆ ಸಿಂಹಸ್ವಪ್ನವಾಗಿ ಕಾಡಿದ ಲಾಲ್ ಬಹುದ್ದೂರ್ ಶಾಸ್ತ್ರಿ ಎಂದಿಗೂ ಅಜರಾಮರ.. ಆ ಧೀಮಂತ ನಾಯಕನನ್ನು ನೆನೆಯುತ್ತಾ..

  • ಶಶಿಧರ ಡಿ ಎಸ್ ದೋಣಿಹಕ್ಲು

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

ಅಕ್ಟೋಬರ್ 14ರಂದು ದೇಶಾದ್ಯಂತ ಮೆಡಿಕಲ್ ಶಾಪ್ ಗಳು ಬಂದ್..!

ಭಾರತದಲ್ಲಿ ಭಾರತೀಯರಿಗೆ “ನೋ ಎಂಟ್ರಿ” ಭಾರತೀಯರಿಗೇ ಪ್ರವೇಶ ನೀಡದ ಭಾರತದ ಸ್ಥಳಗಳು..!

ಅಬ್ಬಾ…! ಈ ಪುಟ್ಟಬಾಲಕಿ ಅದೆಂಥಾ `ಹುಲಿಡ್ಯಾನ್ಸ್’ ಮಾಡ್ತಾಳೆ..!

ಇಂಡೋ-ಪಾಕ್ ವಾರ್ ಮತ್ತೇ ನಡೆಯಿತು..! ಯುದ್ದ ನಡೆದಿದ್ದು ಎಲ್ಲಿ ಗೊತ್ತಾ..?

ಏನಪ್ಪಾ ಇದು ಕಾಶ್ಮೀರದಲ್ಲಿ ಬೀಳೋ ಹಿಮದಂತೆ ಇದೆಯಲ್ಲಾ..?

ಫಿಲ್ಮ್ ಫೇರ್ ಪಡೆಯದ ಅದ್ಭುತ ಸ್ಟಾರ್ ಗಳು..!..!

ಶಂಕ್ರಣ್ಣನ ಬಗ್ಗೆ ನಿಮಗೆಷ್ಟು ಗೊತ್ತು..?

ಗುದ್ದಿದ ಕಾರನ್ನ ನಾಯಿ ಏನ್ ಮಾಡ್ತು ಗೊತ್ತಾ.. ?

ಭಾರತ ಬದಲಾಗ್ಲೇ ಬೇಕು..! ಅದಕ್ಕೆ ನಾವೇನ್ ಮಾಡ್ಬೇಕು..?

ಧರ್ಮಕ್ಕಿಂತ “ಸ್ನೇಹ”ವೇ ದೊಡ್ಡದೆಂದು ಸಾರಿದ “ರಜಾಕ್ ಖಾನ್ ಟಿಕಾರಿ”..!

ಟೀಂ ಇಂಡಿಯಾ ನಾಯಕ ಇಂಗ್ಲೆಂಡಿನ ಮಾಜಿ ಕ್ರಿಕೆಟಿಗನನ್ನು ಸೋಲಿಸಿದ್ದು ಹೇಗೆ ಗೊತ್ತಾ..?

ಭಕ್ತಿ ಹೆಸರಲ್ಲಿ ಭಕ್ತರಿಂದಲೇ ಗಣೇಶನಿಗೆ ಅವಮಾನ..! ಈ ವೀಡೀಯೋ ನೋಡಿ, ಏನ್ಮಾಡ್ಬೇಕು ಅಂತ ನೀವೇ ಹೇಳಿ

ಅವಮಾನವನ್ನು ಮೆಟ್ಟಿನಿಂತು ಸಾಧಕರಾದವರು..! ಅವಮಾನಿಸಿದವರಿಗೆ ಗೆಲುವಿನ ಮೂಲಕವೇ ಉತ್ತರ ಕೊಟ್ಟವರು..!

ಲೈಫ್ ನಲ್ಲಿ ಒಮ್ಮೆಯಾದ್ರೂ ಟ್ರಾವೆಲ್ ಮಾಡ್ಲೇಬೇಕಾದ ರಸ್ತೆಗಳು..! ಇಂಡಿಯಾದ ಅಮೇಜಿಂಗ್ ರಸ್ತೆಗಳು..!

ಭಾರತೀಯ ಮೂಲದ ಡಾಕ್ಟರ್ ಮಾಡಿದ ಮಿರಾಕಲ್..! ಕಿವಿ ಇಲ್ಲದ ಬಾಲಕನಿಗೆ ಕಿವಿ ಕರುಣಿಸಿದ ಡಾಕ್ಟರ್..!

ಹೋಗ್ತಾ ಸಿಂಗಲ್ ಬರ್ತಾ ಡಬಲ್..!

ಊದುಗೊಳವೆ ಸಹಾಯದಿಂದ ಬಲ್ಪ್ ಹೊತ್ತಿಸ್ಬಹುದು..! ಬೋರ್ ನಿಂದ ನೀರೂ ಪಡೆಯ ಬಹುದು..!

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...