ಸುಪ್ರಸಿದ್ಧ ಗಾಯಕಿ ಲತಾ ಮಂಗೇಶ್ಕರ್ ಅವರು ‘ಕಬಿ ಖುಷಿ ಕಬಿ ಗಮ್’ ಸಿನಿಮಾಕ್ಕೆ ಹಾಡಿದ್ದ ಹಾಡನ್ನು ನಿರ್ದೇಶಕ ಕರಣ್ ಜೋಹರ್ ಕಿರುಚಿತ್ರದ ರಾಸಲೀಲೆ ದೃಶ್ಯಕ್ಕೆ ಬಳಸಿಕೊಂಡಿದ್ದು ವಿವಾದಕ್ಕೆ ಕಾರಣವಾಗಿದೆ.
ಕರಣ್ ಜೋಹರ್ ಅವರು ಲಸ್ಟ್ ಸ್ಟೋರಿಸ್ ಎಂಬ ಕಿರುಚಿತ್ರ ಮಾಡಿದ್ದು, ಇದರಲ್ಲಿ ನವ ವಿವಾಹಿತೆಯೊಬ್ಬಳು ತನ್ನ ಕಾಮದಾಸೆಯನ್ನು ಕೈಗಳಿಂದ ತೀರಿಸಿಕೊಳ್ಳುವ ದೃಶ್ಯಕ್ಕೆ ಲತಾ ಅವರು ಹಾಡಿದ್ದ ಹಾಡನ್ನು ಬಳಸಿಕೊಂಡಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ.
ಕರಣ್ ಜೋಹರ್ ಅವರು ಬೇರೆ ಹಾಡನ್ನು ಕಾಮದಾಟದ ದೃಶ್ಯಕ್ಕೆ ಬಳಸಬಹುದಿತ್ತು. ಲತಾ ಅವರು ಹಾಡಿದ ಹಾಡನ್ನು ಬಳಸಿರುವುದು ಸಹ್ಯವಲ್ಲ ಎಂದು ಕುಟುಂಬದವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.