ಇವರು ಕೃತಕ ಕಾಲಿನ ನಾಟ್ಯ ಮಯೂರಿ..! ಕೃತಕ ಕಾಲಲ್ಲೇ ದೇಶ-ವಿದೇಶದಲ್ಲಿ ನೃತ್ಯ ಪ್ರದರ್ಶನ ನೀಡಿದ ಸಾಧಕಿ..!

Date:

ಸುಮ್ಮನೇ ನಮ್ಮ ಬಳಿ ಅದಿಲ್ಲ, ಇದಿಲ್ಲ ಅಂತ ಹುಡುಕುತ್ತಾ ಕಾಲ ಕಳೆತೀವಿ..! ನಾವು ನಮ್ಮ ಬಳಿ ಇಲ್ಲದೇ ಇರೋದನ್ನು ಹುಡುಕುವ ಬದಲು ನಮ್ಮೊಳಗಿರುವ ಪ್ರತಿಭೆಯನ್ನು ಹೊರ ತರೋ ಪ್ರಯತ್ನ ಮಾಡ್ಬೇಕು..! ಆಗ ನಾವು ಎತ್ತರೆತ್ತರಕ್ಕೆ ಬೆಳೆಯಲು ಖಂಡಿತಾ ಸಾಧ್ಯವಿದೆ..! ಎಷ್ಟೋ ಜನ ಅಂಗವಿಕಲರು ನಮಗೆ ಕೈಇಲ್ಲ, ಕಾಲಿಲ್ಲ, ಕಣ್ಣಿಲ್ಲ, ಕಿವಿ ಕೇಳ್ಸಲ್ಲ ಅಂತ ಸುಮ್ಮನೇ ಕೂತಿದ್ರೆ ಅವರೊಳಗಿನ ಪ್ರತಿಭೆಯನ್ನು ಯಾರೂ ಗುರುತಿಸಕ್ಕೆ ಆಗ್ತಾ ಇರ್ಲಿಲ್ಲ..! ಅವರೂ ಹತ್ತರಲ್ಲಿ ಇನ್ನೊಬ್ಬರಾಗಿ ಇರ್ತಾ ಇದ್ರು..! ಆದರೆ ಎಲ್ಲಾ ಅಂಗಾಂಗಳು ನೆಟ್ಟಗೆ ಇರೋರೇ ನಾಚುವಂತೆ ಸಾಧನೆ ಮಾಡಿದ ಅನೇಕರು ನಮ್ಮೊಡನೆ ಇದ್ದಾರೆ..! ಅಂಥಾ ಒಬ್ಬ ಮಹಾನ್ ಸಾಧಕಿಯ ಲೈಫ್ ಸ್ಟೋರಿ ಇಲ್ಲಿದೆ..!

ಅವರಿಗೆ ಚಿಕ್ಕ ವಯಸ್ಸಲ್ಲೇ ಡ್ಯಾನ್ಸ್ ಎಂದರೆ ಎಲ್ಲಿಲ್ಲದ ಆಸಕ್ತಿ ಇತ್ತು..! ಮೂರವರೆ ವರ್ಷದವರಿರುವಾಗಲೇ ಡ್ಯಾನ್ಸ್ ಕಲಿಯೋಕೆ ಆರಂಭ ಮಾಡಿದ್ರು..! ಚಿಕ್ಕ ವಯಸ್ಸಲ್ಲೇ ದೊಡ್ಡ ಡ್ಯಾನ್ಸರ್ ಆಗಿ ಬೆಳಿಬೇಕು ಎಂಬ ಕನಸನ್ನು ಕಂಡಿದ್ದರು..! ಬೆಳಿಗ್ಗೆ ಎದ್ದು ಶಾಲೆಗೆ ಹೋಗಿ, ಶಾಲೆ ಮುಗಿದ ಕೂಡಲೇ ಡ್ಯಾನ್ಸ್ ತರಗತಿಗೆ ಹೋಗಿ ಮನೆಗೆ ವಾಪಾಸ್ಸಾಗ್ತಾ ಇದ್ದುದು ರಾತ್ರಿ 9.30ಗೆ. ಹೀಗೆ ಓದುವುದರ ಜೊತೆಗೆ ಇಷ್ಟದ ಡ್ಯಾನ್ಸ್ ಅನ್ನು ಆಸಕ್ತಿಯಿಂದ ಕಲಿತಾರೆ..! ಹತ್ತನೇ ತರಗತಿಯಲ್ಲಿ ಶೇಕಡ 80 ಅಂಕಗಳನ್ನು ಪಡೀತಾರೆ..! ನಂತರ ಎಲ್ಲರೂ ಇಷ್ಟೊಂದು ಪರ್ಸೆಂಟೇಜ್ ಇದ್ಯಲ್ಲಾ ಸೈನ್ಸ್/ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡು ಓದು ಎಂದು ಹೇಳ್ತಾರೆ..! ಆದರೆ ಡ್ಯಾನ್ಸ್ನಲ್ಲಿ ಆಸಕ್ತಿ ಇದ್ದ ಇವರು 10ನೇ ಕ್ಲಾಸ್ನಲ್ಲಿ ಬಂದ ಪರ್ಸೆಂಟೇಜ್ ಬಗ್ಗೆ ಗಮನ ಕೊಡದೇ ಆರ್ಟ್ಸ್ ವಿಷಯವನ್ನು ಆಯ್ದುಕೊಂಡು ಓದುವುದನ್ನೂ, ಇಷ್ಟದ ಡ್ಯಾನ್ಸನ್ನು ಮುಂದವರೆಸಿತ್ತಾರೆ..! ಇವರು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪೂರ್ಣಗೊಳಿಸ್ತಾರೆ..! ಡ್ಯಾನ್ಸ್ ಕಲಿಕೆಯ ಹಂತದಲ್ಲೇ ಅನೇಕ ಕಾರ್ಯಕ್ರಮಗಳನ್ನು, ನೂರಾರು ಸ್ಟೇಜ್ ಶೊಗಳನ್ನು ಕೊಡುತ್ತಾರೆ..! ಹಂತ, ಹಂತವಾಗಿ ಸಾಧನೆಯ ಒದೊಂದೇ ಮೆಟ್ಟಿಲನ್ನು ಏರ್ತಾ ಇದ್ದ ಇವರ ಲೈಫಲ್ಲೊಂದು ದೊಡ್ಡ ಸವಾಲು ಎದುರಾಗಿ ಬಿಡುತ್ತೆ..! ಅಪಘಾತವೊಂದರಲ್ಲಿ ಗಂಭೀರ ಗಾಯಗಳಾಗುತ್ತೆ..! ಕಾಲಿಗೆ ತುಂಬಾ ಪೆಟ್ಟಾಗುತ್ತೆ..! ಗ್ಯಾಂಗ್ರಿನ್ನಿಂದಾಗಿ ಬಲ ಮೊಣಕಾಲನ್ನು ಕತ್ತರಿಸಲೇ ಬೇಕಾಗುತ್ತೆ..! ಇಡೀ ದೇಹಕ್ಕೆ ಗ್ಯಾಂಗ್ರಿನ್ ಹರಡೋ ಕಾರಣದಿಂದಾಗಿ ಅನಿವಾರ್ಯವಾಗಿ ಮೊಣಕಾಲನ್ನು ಕತ್ತರಿಸ ಬೇಕಾಗುತ್ತೆ..! ಮಗಳ ಕನಸು ನನಸಾಗಲ್ಲ ಎಂದು ಅವರ ಹೆತ್ತವರು ತುಂಬಾನೇ ಕೊರಗುತ್ತಾರೆ..! ಆದರೆ ಮೊಣಕಾಲು ಕಳೆದುಕೊಂಡ ಡ್ಯಾನ್ಸರ್ ಮಾತ್ರ ಎದೆಗುಂದಲಿಲ್ಲ..! ದೈರ್ಯ ತಂದುಕೊಂಡ್ರು, ನಾನು ಒಳ್ಳೆಯ ಡ್ಯಾನ್ಸರ್ ಆಗೇ ಆಗ್ತೀನೆಂದು ಪಣ ತೊಟ್ಟರು..! ನಾಲ್ಕು ತಿಂಗಳಲ್ಲಿ ನಿಧಾನಕ್ಕೆ ನಡೆಯೋದನ್ನು ಸಾಧ್ಯವಾಗಿಸಿಕೊಂಡ್ರು..! ಚಿಕಿತ್ಸೆ ಮಾಡಿಸಿಕೊಂಡ್ರು, ಕೃತಕ ಕಾಲಿನ ಅಲವಡಿಕೆಯ ನಂತರ ಸಂಪೂರ್ಣ ಚೇತರಿಸಿಕೊಳ್ಳೋಕೆ ಮೂರು ವರ್ಷಗಳಾದವು, ನಂತರ ಒಂದು ದಿನ `ಅಪ್ಪ, ನಾನು ಕಾರ್ಯಕ್ರಮ ಕೊಡಲು ಸಿದ್ದಳಿದ್ದೇನೆ’ ಎಂದು ಆತ್ಮವಿಶ್ವಾಸದಿಂದ ಅಪ್ಪನೆದುರು ಹೇಳಿಯೇ ಬಿಟ್ಟರು..! ಅಪ್ಪನಿಗೆ ಶಾಕ್, ಬೈದರು. ಆಮೇಲೆ ಅಪ್ಪ-ಅಮ್ಮನನ್ನು ಒಪ್ಪಿಸಿ ಮತ್ತೆ ರಂಗಸ್ಥಳಕ್ಕೆ ಬಿಗ್ ಎಂಟ್ರಿ ಕೊಟ್ಟೇ ಬಿಟ್ಟರು..! ನಾನಾ ಕಡೆಗಳಲ್ಲಿ ಯಶಸ್ವಿ ಪ್ರದರ್ಶನ ನೀಡುತ್ತಾ ಗಗನೆತ್ತರಕ್ಕೆ ಬೆಳೆದು ನಿಂತೇ ಬಿಟ್ಟಿದ್ದಾರೆ..! ದೇಶ-ವಿದೇಶಗಳಲ್ಲೂ ನೃತ್ಯ ಪ್ರದರ್ಶನ ನೀಡ್ತಾ ಇದ್ದಾರಲ್ಲದೇ ಚೆನ್ನೈ ಮತ್ತು ಮುಂಬೈನಲ್ಲಿ ನೃತ್ಯ ಅಕಾಡಮೆ ತೆರೆದು ವಿದ್ಯಾರ್ಥಿಗಳಿಗೆ ನೃತ್ಯ ಪಾಠ ಮಾಡ್ತಾ ಇದ್ದಾರೆ..! ಕಿರುತೆರೆ ನಟಿಯಾಗಿ, ರಿಯಾಲಿಟಿ ಶೋಗಳಲ್ಲಿಯೂ ಗುರುತಿಸಿಕೊಳ್ಳುವ ಮೂಲಕ ಕಲಾಸಕ್ತರ ಮನೆ ಮಗಳಾಗಿದ್ದಾರೆ..! ಇವರು ಬೇರೆ ಯಾರೂ ಅಲ್ಲ ಎಲ್ಲರಿಗೂ ಚಿರಪರಿಚಿತರಾಗಿರೋ ಸುಧಾ ಚಂದ್ರನ್ ಎಂಬ ಕೃತಕ ಕಾಲಿನ ನಾಟ್ಯ ಮಯೂರಿ..! ಕಾಲನ್ನು ಕಳೆದುಕೊಂಡರೂ ಕಂಡ ಕನಸನ್ನು ನನಸು ಮಾಡಿಕೊಂಡ ಸುಧಾ ಚಂದ್ರನ್ರ ಕೀರ್ತಿ ಎಲ್ಲಡೆ ಪಸರಿಸುವಂತಾಗಲಿ.

  • ಶಶಿಧರ ಡಿ ಎಸ್ ದೋಣಿಹಕ್ಲು

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಇಬ್ಬರ ಜೇಬಲ್ಲೂ ಉಳಿದಿದ್ದು ಮುನ್ನೂರು ರೂಪಾಯಿ ಮಾತ್ರ..! ಆದ್ರೆ…..

ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!

Share post:

Subscribe

spot_imgspot_img

Popular

More like this
Related

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...