LED ಟಿವಿ ದರ 7,000 ರೂವರೆಗೆ ಹೆಚ್ಚಳ ಸಾಧ್ಯತೆ!

0
43

ಹೊಸದಿಲ್ಲಿ: ಎಲ್‌ಇಡಿ ಟಿ.ವಿ ದರಗಳು ಏಪ್ರಿಲ್‌ ನಂತರ ಏರಿಕೆಯಾಗುವ ನಿರೀಕ್ಷೆ ಇದೆ. ಜಾಗತಿಕ ಮಾರುಕಟ್ಟೆಯಲ್ಲಿ ಎಲ್‌ಇಡಿಯ ಓಪನ್‌ ಸೆಲ್‌ ಪ್ಯಾನೆಲ್‌ ದುಬಾರಿಯಾಗಿರುವುದು ಇದಕ್ಕೆ ಕಾರಣ. ಪ್ಯಾನಸೋನಿಕ್‌, ಥಾಮ್ಸನ್‌ ಇತ್ಯಾದಿ ಬ್ರ್ಯಾಂಡ್‌ ಗಳು ದರ ಏರಿಸಲು ಚಿಂತನೆ ನಡೆಸಿವೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಳೆದೊಂದು ತಿಂಗಳಿನಲ್ಲಿ ಸೆಲ್‌ ಪ್ಯಾನೆಲ್‌ಗಳ ದರ 35% ಏರಿಕೆಯಾಗಿದೆ. ಎಲ್‌ಜಿ ಈಗಾಗಲೇ ತನ್ನ ಟಿವಿಗಳ ದರ ಹೆಚ್ಚಳ ಮಾಡಿದೆ. ಭಾರತದಲ್ಲಿ ದರಗಳು ಶೇ.5 ರಿಂದ 7ರಷ್ಟು ವೃದ್ಧಿಸುವ ನಿರೀಕ್ಷೆ ಇದೆ. ಓಪನ್‌ ಸೆಲ್‌ ಪ್ಯಾನೆಲ್‌ಗಳು ಎಲ್‌ಇಡಿ ಟಿವಿಯಲ್ಲಿ ಮಹತ್ವದ್ದಾಗಿದ್ದು, ಶೇ.60ರಷ್ಟು ಪಾಲನ್ನು ಇವೇ ಹೊಂದಿವೆ.

ಹೈಯರ್‌ ಅಪ್ಲೈಯನ್ಸ್‌ ಇಂಡಿಯಾ ಅಧ್ಯಕ್ಷ ಎರಿಕ್‌ ಬ್ರಾಗಾನ್ಜಾ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಲೆದ 8 ತಿಂಗಳುಗಳಿಂದ ಎಲ್‌ಇಡಿ ಟಿ.ವಿ ಪ್ಯಾನೆಲ್‌ಗಳ ದರ ಏರುತ್ತಲೇ ಇದೆ. ಹೀಗಾಗಿ ಎಲ್ಇಡಿ ಟಿ.ವಿಗಳ ದರದಲ್ಲಿ 2,000-3000 ರೂ. ಹೆಚ್ಚಳವನ್ನು ನಿರೀಕ್ಷಿಸಲಾಗಿದೆ.

32 ಇಂಚುಗಳ ಎಲ್‌ಇಡಿ ಟಿ.ವಿಗಳ ದರದಲ್ಲಿ ಏಪ್ರಿಲ್‌ನಿಂದ 5000-6000 ರೂ. ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿಡಿಯೊಟೆಕ್ಸ್‌ ಇಂಟರ್‌ ನ್ಯಾಶಮಲ್‌ ಗ್ರೂಪ್‌ ನಿರ್ದೇಶಕ ಅರ್ಜುನ್‌ ಬಜಾಜ್‌ ತಿಳಿಸಿದ್ದಾರೆ.

ಸರಕಾರ ಟಿ.ವಿ ಉತ್ಪಾದನೆಯನ್ನು ಉತ್ಪಾದನೆ ಆಧರಿತ ಇನ್ಸೆಂಟಿವ್‌ ಯೋಜನೆಗೆ (ಪಿಎಲ್‌ಐ) ತರಬೇಕು. ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಭಾರತದ ಟಿ.ವಿ ಉದ್ದಿಮೆಯ ಸ್ಪರ್ಧಾತ್ಮಕತೆ ಹೆಚ್ಚಲಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.

 

LEAVE A REPLY

Please enter your comment!
Please enter your name here