ಕೇರಳದ ಹೂಗಳ ರಂಗೋಲಿ ಹಬ್ಬವೆಂದೆ ಖ್ಯಾತಿಗೊಂಡಿರುವ ಓಣಂ ಹಬ್ಬಕ್ಕೆ ಇನ್ನೇನು ಕೇವಲ 20 ದಿನಗಳು ಬಾಕಿ ಉಳಿದಿದೆ. ಅಲ್ಲದೇ ಕೇರಳದ ಪ್ರತೀ ಮನೆಯಲ್ಲೂ ಹಬ್ಬದ ತಯಾರಿ ಕೂಡ ಈಗಿನಿಂದಲೇ ಚುರುಕುಗೊಂಡಿದೆ. ಆದರೆ ಸರ್ಕಾರ ಸ್ವಾಮ್ಯದ ಸಂಘವೊಂದು ಕೇರಳದ ಜನತೆಗೆ ಹಬ್ಬಕ್ಕೆ ಬಂಪರ್ ಸುದ್ದಿಯನ್ನು ನೀಡಿದೆ. ಕೇರಳ ರಾಜ್ಯ ಸರ್ಕಾರಿ ಸ್ವಾಮ್ಯದ ಗ್ರಾಹಕ ಸಹಕಾರಿ ಸಂಘವೊಂದು ಓಣಂ ಹಬ್ಬದಲ್ಲಿ ಮದ್ಯವನ್ನು ಆನ್‍ಲೈನ್‍ನಲ್ಲಿ ಮಾರಾಟ ಮಾಡಲು ನಿರ್ಧರಿಸಿದೆಯಂತೆ.
ಸಂಸ್ಥೆಯ ಅಧ್ಯಕ್ಷರಾದ ಎಂ ಮೆಹಬೂಬ್ ಅವರು ಓಣಂ ಹಬ್ಬದ ದಿನದಂದು ಗ್ರಾಹಕರು ಸರತಿ ಸಾಲಿನಲ್ಲಿ ನಿಂತು ಮದ್ಯವನ್ನು ಕೊಳ್ಳುವ ಪಜೀತಿಯನ್ನು ತಪ್ಪಿಸುವ ಉದ್ದೇಶದಿಂದ ಈ ಸಂಸ್ಥೆ ಮದ್ಯವನ್ನು ಆನ್‍ಲೈನ್‍ನಲ್ಲಿ ಮಾರಾಟ ಮಾಡಲಿ ನಿರ್ಧರಿಸಿದೆ ಎಂದಿದ್ದಾರೆ.
ಆನ್‍ಲೈನ್‍ನಲ್ಲಿ ಸುಮಾರು 59 ಬ್ರ್ಯಾಂಡ್‍ಗಳ ಮದ್ಯವನ್ನು ಮಾರಾಟಕ್ಕೆ ಸರ್ಕಾರದಿಂದ ಅನುಮತಿ ಪಡೆಯಲಾಗಿದೆ ಎಂದು ಮೆಹಬೂಬ್ ತಿಳಿಸಿದ್ದಾರೆ. ಕಡಿಮೆ ಬೆಲೆಗೆ ಉತ್ತಮ ಗುಣಮಟ್ಟದ ಮದ್ಯವನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದ್ದೇವೆ. ಇದರಿಂದ ಭ್ರಷ್ಟಾಚಾರ ಹಾಗೂ ದುರಾಡಳಿತದಿಂದ ನಷ್ಟವನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
POPULAR STORIES :
ಸಾವಿನ ಮನೆಗೆ ಬಾರ್ ಗರ್ಲ್ಸ್ ರನ್ನು ಕರುಸ್ಕೊಳ್ತಾರೆ…!
ಇಂದು ವಿಶ್ವ ಫೋಟೋಗ್ರಫಿ ದಿನ… ನೀವು ನೋಡಿ ಕೆಲವು ಅದ್ಭುತ ಚಿತ್ರಗಳು..!
ಆಸ್ಪತ್ರೆಯಲ್ಲಿ ಜನ ಕ್ಯೂ ನಲ್ಲಿ ನಿಂತಿದ್ದರೂ ಸರ್ಕಾರಿ ನೌಕರ ಏನ್ ಮಾಡ್ತಾ ಇದ್ದ..? ಈ ವಿಡಿಯೋ ನೋಡಿ.
ವಿಶ್ವದ ಅತೀ ಹಿರಿಯ ವ್ಯಾಘ್ರ – ಮಚ್ಲಿ ದಿ ಕ್ವೀನ್ ಆಫ್ ಟೈಗರ್ಸ್ ಇನ್ನಿಲ್ಲ..!
ಜೋಗ ಜಲಪಾತದ ಅಭಿವೃದ್ಧಿ ಹೊಣೆ ಬಿ.ಆರ್.ಶೆಟ್ಟಿ ಒಡೆತನದ ಬಿ.ಆರ್.ಎಸ್.ವೆಂಚರ್ಸ್‍ಗೆ
ಮುಂದಿನ ತಿಂಗಳಿಂದ ಡ್ಯಾಂ ನೀರು ಕೃಷಿಗಿಲ್ಲ, ಕುಡಿಯೋಕೆ ಮಾತ್ರ..!
ಇಪ್ಪತ್ತೈದು ಅಡಿ ಎತ್ತರದಿಂದ ನೀರಿಗೆ ಜಿಗಿದ ಬಾಲಕ..! ಮುಂದೇನಾಯ್ತು..? ಈ ಸ್ಟೋರಿ ಓದಿ.
ಸಿಸ್ಕೋ ಸಂಸ್ಥೆಯಿಂದ ಹದಿನಾಲ್ಕು ಸಾವಿರ ಉದ್ಯೋಗಿಗಳಿಗೆ ಪಿಂಕ್ ಸ್ಲಿಪ್.?