ಬ್ಯಾಂಕ್‍ಗಳು ಲೋನ್ ನೀಡುವಾಗ ಆಸ್ತಿ ದಾಖಲೆಗಳು ಅಥವಾ ನಿಮ್ಮ ಸ್ಯಾಲರಿ ಸ್ಲಿಪ್ ಮೊದಲಾದ ಅಧಿಕೃತ ದಾಖಲೆಗಳನ್ನು ಕೇಳಿ ಅವುಗಳ ಆಧಾರದಲ್ಲಿ ನಿಮಗೆ ಸಾಲ ನೀಡುತ್ತವೆ..! ಆದರೆ ಚೀನಾದಲ್ಲಿ ಇಂತಹ ಯಾವುದೇ ದಾಖಲೆಗಳ ಶೂರಿಟಿ ಬೇಕಾಗಿಲ್ಲ ಲೋನ್ ಪಡೆಯಲು..! ಹಂಗಂತ ಆರಾಮಾಗಿ, ಕೇಳ್ದೋರಿಗೆಲ್ಲಾ ಲೋನ್ ಕೊಡ್ತಾರೆ ಎಂಬ ತಪ್ಪು ಕಲ್ಪನೆ ಬೇಡ. ಬೆತ್ತಲೆ ಚಿತ್ರ ಕೊಟ್ಟವರಿಗೆ ಇಲ್ಲಿ ಲೋನ್ ಸ್ಯಾನ್ಷನ್..! ವಿಚಿತ್ರ ಎಂದೆನಿಸಿದರೂ ಚೀನಾದಲ್ಲಿ ಖಾಸಗಿ ಬ್ಯಾಂಕ್‍ಗಳು ಲೋನ್ ನೀಡಿಕೆಗೆ ಕಂಡುಕೊಂಡಿರುವ ವಾಸ್ತವ ಮಾರ್ಗ!
ಯಸ್, ಚೀನಾದಲ್ಲಿ ಖಾಸಗಿ ಬ್ಯಾಂಕ್ ಗಳಿಂದ ಲೋನ್ ಪಡೆಯಲು ಯಾವ ಶೂರಿಟಿಯೂ ಬೇಕಾಗಿಲ್ಲ..! ಮಹಿಳೆಯರ ಬೆತ್ತಲೆ ಚಿತ್ರ ನೀಡಿದ್ರೆ ಲೋನ್ ಸ್ಯಾಕ್ಷನ್..! ಚೀನಾದ ಲೇವಾದೇವಿದಾರರು ಅನುಸರಿಸುತ್ತಿರೋ ಹೊಸ ದಾರಿ ಇದು. ಹಂಗಂತ ಚೀನಾ ಸರ್ಕಾರದ “ಸದರನ್ ಮೆಟ್ರೋಪಾಲಿಸ್ ಡೈಲಿ’ ವರದಿ ಮಾಡಿದೆ!
ಆನ್‍ಲೈನ್‍ನಲ್ಲಿ ಈ ದಂಧೆ ನಡೀತಾ ಇದೆಯಂತೆ. ಬಹಳಷ್ಟು ಮಹಿಳೆಯರು ಇದರ ಸುಳಿಯಲ್ಲಿ ಸಿಕ್ಕಿದ್ದಾರೆ ಎಂದು ವರದಿ ಹೇಳಿದೆ. ಮಹಿಳೆಯರು ಸಾಲ ಬೇಕೆಂದು ಅರ್ಜಿ ಹಾಕಿದ್ರೆ ಸಾಕು, ಕೂಡಲೇ ಅತ್ತಿಂದ ಒಂದು ಇ-ಮೇಲ್ ಬರುತ್ತೆ, ನಿಮ್ಮ ನಗ್ನ ಚಿತ್ರ ಮತ್ತು ಗುರುತಿನ ಚೀಟಿ (ಐಡಿ ಕಾರ್ಡ್) ಕಳುಹಿಸಿ ಎಂದು. ಅಷ್ಟು ಕಳುಹಿಸಿದ್ರೆ ಸಾಕು ಲೋನ್ ಸ್ಯಾಂಕ್ಷನ್. ಒಂದು ವೇಳೆ ಸಾಲ ಮರು ಪಾವತಿ ಮಾಡಲು ಹಿಂದೇಟು ಹಾಕಿದ್ರೆ ನಿಮ್ಮ ನಗ್ನಚಿತ್ರ ಬಯಲು ಮಾಡ್ತೀವಿ ಎಂದು ಬ್ಲಾಕ್ ಮೇಲ್ ಮಾಡಿ ಹಣ ವಸೂಲಿ ಮಾಡೋಡು ಲೇವಾದೇವಿದಾರರ ತಂತ್ರ.
ಮಹಿಳೆಯೊಬ್ಬರು ವಾರಕ್ಕೆ ಶೇಕಡ 30 ಬಡ್ಡಿಯಂತೆ 500 ಯವಾನ್ ಲೋನ್ ಪಡೆದು, ಅಸಲು ಬಡ್ಡಿ ಕಟ್ಟಲಾಗದೆ 55 ಸಾವಿರ ಯುವಾನ್‍ನಷ್ಟು ಸಾಲ ಬೆಳೆದಿದೆಯಂತೆ! ಸಾಲಕ್ಕಾಗಿ ನಗ್ನ ಚಿತ್ರ ಕಳುಹಿಸಿ ಪೇಚಿಗೆ ಸಿಕ್ಕಿಕೊಂಡಿದ್ದಾರೆ. ಅವರೇ ಹೇಳುವಂತೆ ಅವರ ಹತ್ತು ಹಲವು ಸ್ನೇಹಿತೆಯರು ಸಹ ಈ ಇಕ್ಕಟ್ಟಿಗೆ ಸಿಲುಕಿದ್ದಾರೆ.
POPULAR STORIES :
ಮೂವರು ಪ್ರಮುಖ ಕ್ರಿಕೆಟ್ ಅಧಿಕಾರಿಗಳ ಬಂಧನ..!
ಅಯ್ಯಯ್ಯೋ…ಚೂಯಿಂಗ್ ಗಮ್ ನುಂಗ್ ಬಿಟ್ರೇ..!
ಈತ 14 ವರ್ಷದ ಪೋರ ನಿತ್ಯ 3 ಕಿ.ಮೀ ಈಜಿ ಕೊಂಡು ಸ್ಕೂಲ್ ಗೆ ಹೋಗ್ತಾನೆ.!
`ನಿಧಿ’ಯನ್ನ ಹುಡುಕಿ ತಂದ ಪ್ರೇಮಕಥೆ ಇದು…!
ಮತ್ತೊಮ್ಮೆ ಮತ್ತೊಂದು ಜೋಗಿಯಂತಹ ಸಿನಿಮಾ..!!!
ಸೈನಾ ಸಾಧನೆಗೆ ಕಾರಣ ಕೊಹ್ಲಿಯಂತೆ.. ಅದ್ಹೇಗೆ…?
ಮಗು ಕಳೆದುಕೊಂಡರೂ ಅವರು ಅಪ್ಪ ಅಮ್ಮ ಆದ್ರು..!
ಬಡವರಿಗೆ ಉಚಿತ ಚಿಕಿತ್ಸೆ ನೀಡದ 5 ಖಾಸಗಿ ಆಸ್ಪತ್ರೆಗಳಿಗೆ 700 ಕೋಟಿ ದಂಡ!