ಬ್ರೇಕಪ್ ಆಗದಿರಲು ಹೀಗೆ ಮಾಡಿ

Date:

ಲವ್ ಮತ್ತು ಬ್ರೇಕಪ್ ಎರಡೂ ಕಾಮನ್ ವಿಚಾರಗಳು. ಆದ್ರೆ, ಬ್ರೇಕಪ್ ಆಗ ಬಾರದೆಂದರೆ ನೀವು ಈ ರೀತಿ ಮಾಡಲೇ ಬೇಕು.

 

ಅನೇಕ ಸಲ ಮೂಡ್ ಸರಿ ಇಲ್ಲದಿದ್ದರೆ ಅಥವಾ ಆಫೀಸ್’ನಲ್ಲಿ ಮೀಟಿಂಗ್ ನಡೆಯುತ್ತಿದ್ದಾಗ ಇಲ್ಲವೇ ಯಾವುದೋ ಕೆಲಸದಲ್ಲಿ ವ್ಯಸ್ತರಾಗಿದ್ದ ಸಮಯದಲ್ಲಿ ನಿಮ್ಮ ಸಂಗಾತಿಯ ಕರೆ ಬಂದರೆ ನೀವು ಕರೆಯನ್ನು ಸ್ವೀಕರಿಸುವುದಿಲ್ಲ ಇಲ್ಲವೇ ಕಟ್ ಮಾಡುತ್ತೀರಿ. ಹೀಗಿರುವಾಗ ನಿಮ್ಮ ಸಂಗಾತಿ ನಿಮಗೆ ಮತ್ತೊಮ್ಮೆ ಕರೆ ಮಾಡುತ್ತಿದ್ದರೆ ಕರೆಯನ್ನು ಕಟ್ ಮಾಡಬೇಡಿ ಇದರಿಂದ ನಿಮ್ಮ ಸಂಗಾತಿ ಸಿಟ್ಟಾಗಬಹುದು. ನೀವು ಕರೆಯನ್ನು ಕಟ್ ಮಾಡಿದ ಬಳಿಕವೂ ಮತ್ತೊಮ್ಮೆ ಕರೆ ಮಾಡುತ್ತಿದ್ದಾರೆಂದಾದರೆ ಅವರೂ ಯಾವುದಾದರೂ ಅಗತ್ಯ ಕೆಲಸಕ್ಕಾಗಿ ನಿಮ್ಮನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿರಬಹುದು. ಹೀಗಿರುವಾಗ ನೀವು ಕರೆ ಸ್ವೀಕರಿಸದಿದ್ದರೆ ನೀವು ಅವರಿಗೆ ಮಹತ್ವ ನೀಡುವುದಿಲ್ಲ ಎಂಬ ಭಾವನೆ ಸಂಗಾತಿಯನ್ನು ಕಾಡಬಹುದು. ಹೀಗಾಗಿ ಕರೆ ಬಂದಾಗ ಸ್ವೀಕರಿಸಲು ಪ್ರಯತ್ನಿಸಿ ಇಲ್ಲವೇ ಸಂದೇಶವನ್ನು ರವಾನಿಸಿ ಒಟ್ಟಾರೆಯಾಗಿ ಅವರಿಗೆ ಪ್ರತಿಕ್ರಿಯೆ ನೀಡಿ. ಒಂದು ವೇಳೆ ನೀವು ಕರೆ ಮಾಡುತ್ತಿದ್ದು, ನಿಮ್ಮ ಸಂಗಾತಿ ಕರೆ ಕಟ್ ಮಾಡಿದ್ದರೆ, ತೀರಾ ಅಗತ್ಯವಿದ್ದರೆ ಮಾತ್ರ ಮತ್ತೆ ಕರೆ ಮಾಡಿ.

 

ನೀವು ಯಾವುದೇ ಪ್ಲಾನ್ ಮಾಡಿದ್ದರೂ ನಿಮ್ಮ ಸಂಗಾತಿಗೆ ತಿಳಿಸಲು ಮರೆಯದಿರಿ. ನೀವು ತಿಳಿಸದೇ ಎಲ್ಲಾದರೂ ಹೋಗಿದ್ದ ಸಂದರ್ಭದಲ್ಲೇ ಇದನ್ನು ತಿಳಿಯದ ನಿಮ್ಮ ಸಂಗಾತಿ ನಿಮಗಾಗಿ ಸರ್ಪ್ರೈಸ್ ಕಾದಿರಿಸಿ ನಿಮಗಾಗಿ ಕಾಯುವ ಪರಿಸ್ಥಿತಿ ಎದುರಾಗಬಹುದು. ಹೀಗೆ ಮಾಡುವುದರಿಂದ ಸಂಬಂಧಗಳಲ್ಲಿ ತೊಡಕುಗಳುಂಟಾಗುತ್ತವೆ.

ತನ್ನ ನಿರ್ಧಾರಗಳನ್ನು ತಾನೇ ತೆಗೆದುಕೊಳ್ಳುವ ಸಂಗಾತಿ ಇದ್ದರೆ ಎಲ್ಲರೂ ಇಷ್ಟಪಡುತ್ತಾರೆ. ಪ್ರತಿಯೊಂದು ನಿರ್ಧಾರ ತೆಗೆದುಕೊಳ್ಳುವ ಸಂದರ್ಭದಲ್ಲಿ ನೀವು ನಿಮ್ಮ ಸಂಗಾತಿ ಇಲ್ಲವೇ ಇತರರನ್ನು ಅವಲಂಬಿತರಾಗಿದ್ದರೆ ನಿಮ್ಮ ಕುರಿತಾದ ಪ್ರತಿ ನಿರ್ಧಾರ ಅವರದೇ ಆಗಿ ಮಾರ್ಪಾಡಾಗುತ್ತದೆ. ಹೀಗಿರುವಾಗ ಯಾವಾಗಲಾದರೊಮ್ಮೆ ನಿಮ್ಮ ಕುರಿತಾಗಿ ನೀವೇ ನಿರ್ಧಾರ ಕೈಗೊಳ್ಳ ಬಯಸಿದರೂ ಸಾಧ್ಯವಾಗದಿರಬಹುದು.

ಯಾವುದೇ ಒಬ್ಬ ವ್ಯಕ್ತಿಗೂ ಯಾವುದೇ ಸಮಯದಲ್ಲಾದರೂ ತನಗೆ ಸಹಾಯ ಮಾಡಬಲ್ಲ ಸಂಗಾತಿಯನ್ನು ಬಹಳ ಇಷ್ಟವಾಗುತ್ತಾರೆ. ಹೀಗಾಗಿ ನಿಮ್ಮ ಸಂಗಾತಿ ಮನೆಯ ಇಲ್ಲವೇ ಆಫೀಸ್’ನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸಣ್ಣ ಪುಟ್ಟ ಸಹಾಯ ಮಾಡಲು ಪ್ರಯತ್ನಿಸಿ. ಉದಾಹರಣೆಗೆ ನಿಮ್ಮ ಸಂಗಾತಿ ಅಡುಗೆ ಮಾಡಿತ್ತಿದ್ದರೆ ಅಲ್ಲಿ ಅವರಿ ಸಹಾಯ ಮಾಡಿ, ಇಲ್ಲವೇ ಚಾಪೆ ಮಡಚುತ್ತಿದ್ದಾರೆಂದಾದರೆ ನೀವು ತಲೆ ದಿಂಬು ತೆಗೆದಿರಿಸುವುದು ಹೀಗೆ ಸಣ್ಣ ಪುಟ್ಟ ಸಹಾಯ ಮಾಡಿ. ಒಂದು ವೇಳೆ ಹೀಗೆ ಮಾಡದೆ ನೀವು ಆರಾಮ ಮಾಡಿ ಕೇವಲ ನಿಮ್ಮ ಸಂಗಾತಿಗೆಯೇ ಎಲ್ಲಾ ಕೆಲಸವನ್ನು ಮಾಡಲು ಬಿಡುತ್ತೀರಾದರೆ ಇದು ನಿಮ್ಮ ಸಂಬಂಧದಲ್ಲಿ ಬಿರುಕು ಮೂಡಿಸಬಹುದು.

 

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...