ಕೆಲವೊಂದು ಸಿನಿಮಾಗಳು , ಸಿನಿಮಾ ಹೆಸರುಗಳು ಸುಖಾಸುಮ್ನೆ ಕಾಂಟ್ರವರ್ಸಿಗೆ ಸಿಕ್ಕಿಕೊಳ್ಳುತ್ತವೋ ಅಥವಾ ಕಾಂಟ್ರವರ್ಸಿ ಆಗಲೆಂದು ಅಂಥಾ ಹೆಸರು , ಅಂಥಾ ಸಿನಿಮಾ ಮಾಡಿರ್ತಾರೋ ಗೊತ್ತಿಲ್ಲ. ಅದೇನೇ ಇದ್ದರೂ ಇತ್ತೀಚಿನ ದಿನಗಳಲ್ಲಿ ಕಾಂಟ್ರವರ್ಸಿ ಇಲ್ದೇ ಇದ್ರೆ ಆಗಲ್ಲ ಎನ್ನುವಂತಾಗಿದೆ.
ಇದೀಗ ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ನಿರ್ಮಾಣದ ಹೊಸ ಚಿತ್ರದ ಟೈಟಲ್ ಸಿಕ್ಕಾಪಟ್ಟೆ ವಿವಾದಕ್ಕೆ ಕಾರಣವಾಗಿದೆ.
ಸಲ್ಮಾನ್ ಖಾನ್ ಬ್ಯಾನರ್ ನಲ್ಲಿ ‘ಲವ್ ರಾತ್ರಿ’ ಎಂಬ ಸಿನಿಮಾ ಬರ್ತಿದೆ. ಈ ಸಿನಿಮಾ ಮೂಲಕ ಸಲ್ಮಾನ್ ಖಾನ್ ತಮ್ಮ ಸೋದರಳಿಯ ಆಯುಶ್ ಶರ್ಮಾ ಅವರನ್ನು ಸಿನಿರಂಗಕ್ಕೆ ಪರಿಚಯಿಸ್ತಿದ್ದಾರೆ.
ಈ ಲವ್ ರಾತ್ರಿ ಎಂಬ ಟೈಟಲ್ ಈಗ ವಿವಾದಕ್ಕೆ ಸಿಲುಕಿದೆ. ಸಲ್ಮಾನ್ ಕೆನ್ನೆಗೆ ಬಾರಿಸಿದವರಿಗೆ 2ಲಕ್ಷ ರೂ ಇನಾಮು ಕೊಡೋದಾಗಿ ಸಂಘಟನೆಯೊಂದು ಘೋಷಿಸಿದೆ.
ಕಳೆದವಾರದಿಂದ ವಿಶ್ವ ಹಿಂದೂ ಪರಿಷತ್ ವಿರೋಧ ವ್ಯಕ್ತಪಡಿಸಿ , ಪ್ರತಿಭಟನೆ ನಡೆಸುತ್ತಲೇ ಇದೆ. ಇದೀಗ ಹಿಂದೂ ಹೈ ಆಗೆ ಎಂಬ ಸಂಘಟನೆಯ ಮುಖ್ಯಸ್ಥ ಗೋವಿಂದ ಪರಸಾರ್ ,ನಟ ಸಲ್ಮಾನ್ ಖಾನ್ ಅವರಿಗೆ ಸಾರ್ವಜನಿಕವಾಗಿ ಥಳಿಸಿದವರಿಗೆ 2ಲಕ್ಷ ರೂ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಹಾಗೂ ಚಿತ್ರವನ್ನು ನಿಷೇಧಿಸಲು ಸೆನ್ಸಾರ್ ಬೋರ್ಡ್ ಗೆ ಮನವಿ ಮಾಡಿದ್ದಾರೆ.