ಪ್ರೀತಿ ಎಂಥವರನ್ನೂ ಬದಲಾಯಿಸುತ್ತೆ..! ಯಾರಿಂದಲೂ ಬದಲಾಗದ ಹುಡುಗರು ಹುಡುಗಿಯಿಂದ ಬದಲಾಗ್ತಾರೆ..!

Date:

ಯಾರ ಮಾತನ್ನೂ ಕೇಳದ `ವಿಲಾಸ್’ ಅವಳ ಮಾತನ್ನು ಕೇಳುತ್ತಾನಾ..?! ಸಾಧ್ಯವೇ ಇಲ್ಲ..! ತನ್ನ ತಪ್ಪನ್ನು ತಿದ್ದಿಕೊಳ್ಳೋದು ಇಲ್ಲ..! ಯಾರ ಮಾತನ್ನು ಕೇಳೋದು ಇಲ್ಲ..! ಅವನಿಷ್ಟದಂತೆಯೇ ಇರೋ ಹಠವಾದಿ..! ಇವನನ್ನು ಅವಳು ಬದಲಾಯಿಸಿದ್ದಾಳೆಂದರೆ..? ಹೌದು, ನಂಬಲು ಕಷ್ಟವಾದರೂ ನಂಬಲೇ ಬೇಕು..! ಆರಂಭದಲ್ಲಿ ಏಳು ಗಂಟೆಗೇ ಆಫೀಸ್ ನಿಂದ ಬರ್ತಾ ಇದ್ದ ವಿಲಾಸ್, ಈಗ ರಾತ್ರಿ ಹತ್ತಾದರೂ ಬರುವುದು ಕಷ್ಟ..! ಹೀಗಿರುವಾಗ ಅವನು ಬದಲಾಗಿದ್ದಾನೆ..! ಅದು ಅವಳಿಂದಲೇ..! ಯಾರ ಮಾತನ್ನೂ ಕೇಳದ.., ಯಾರಿಗೂ ಅಷ್ಟೊಂದು ಇಂಪಾರ್ಟೆನ್ಸ್ ಕೊಡದ ವಿಲಾಸ್ ಅವಳ ಮಾತನ್ನು ಕೇಳುತ್ತಾನೆ, ಅವಳಿಗೆ ತುಂಬಾ ಪ್ರಾಮುಖ್ಯತೆ ಕೊಡ್ತಾನೆ..! ಅಷ್ಟಕ್ಕೂ ಹಠವಾದಿ, ಮೊಂಡ, ಕುಡುಕ ವಿಲಾಸ್ ನನ್ನು ಬದಲಾಯಿಸಿದ ಆ ಪುಣ್ಯಾತ್ಗಿತ್ತಿ ಯಾರು ಗೊತ್ತಾ..? ಅವಳು ಸೌಮ್ಯ..!
ಪದವಿ ಮುಗಿಸಿ ಬೆಂಗಳೂರಿಗೆ ಬಂದ ವಿಲಾಸ್ ಮತ್ತು ಬೆಂಗಳೂರಿಗಳೇ ಆದ ಸೌಮ್ಯಳ ಪ್ರೇಮ್ ಕಹಾನಿ ಇದು..! ವಿಲಾಸ್ ಬಿಕಾಂ ಮುಗಿಸಿ ಬೆಂಗಳೂರಿಗೆ ಬಂದಿದ್ದಾನೆ..! ಬಂದ ಆರಂಭದಲ್ಲಿ ಅಲ್ಲಿ-ಇಲ್ಲಿ ಅಂತ ಸಿಕ್ಕಾಪಟ್ಟೆ ಕೆಲಸಕ್ಕೂ ಅಲೆದಿದ್ದ..! ಎರಡು ತಿಂಗಳಾದ ಮೇಲೆ ಕೆಲಸ ಸಿಕ್ಕಿದೆ..! ಕೆಲಸ ಸಿಕ್ಕ ಒಂದೇ ಒಂದು ತಿಂಗಳಿಗೆ ಲವ್ವೂ ಆಗಿದೆ..!

ಕೆಲಸಕ್ಕೆ ಅಲೆದು ಅಲೆದು ಕೊನೆಗೂ ಒಂದು ಬಿಪಿಒದಲ್ಲಿ ಕೆಲಸ ಗಿಟ್ಟಿಸಿಕೊಂಡಿರುವ ವಿಲಾಸ್ ನ ರೂಮಿಗೂ ಆಫೀಸಿಗೂ ತುಂಬಾ ಹತ್ತಿರ ಆಗುತ್ತೆ. ಬೆಳಿಗ್ಗೆ 9 ಗಂಟೆಗೆ ರೂಮ್ ನಿಂದ ಆಫೀಸಿಗೆ ಹೊರಡುತ್ತಿದ್ದ ಅವನು ಸಂಜೆ 6.20-07ಗಂಟೆ ಆಗ್ಬೇಕು ಅನ್ನುವಷ್ಟರಲ್ಲಿ ರೂಂಗೆ ಬಂದು ಬಿಡ್ತಾ ಇದ್ನಂತೆ..! ಕೆಲಸಕ್ಕೆ ಸೇರಿದ ಹೊಸದರಲ್ಲಿ ಯಾರ ಪರಿಚಯವೂ ಇರಲಿಲ್ಲ..! ನಿಧಾನಕ್ಕೆ ಸಹಜವಾಗಿ ಎಲ್ಲರ ಪರಿಚಯ ಆಗ್ತಾ ಬಂತು. ಆತ್ಮೀಯತೆಯೂ ಬೆಳೆಯಿತು..! ತನ್ನ ಪಕ್ಕದಲ್ಲೇ ಕುಳಿತು ಕೊಳ್ಳುತ್ತಿದ್ದ ಸೌಮ್ಯಳೊಡನೆ ಎಲ್ಲರಿಗಿಂತಲೂ ಹೆಚ್ಚಿನ ಆತ್ಮೀಯತೆ ಕೆಲವೇ ದಿನಗಳಲ್ಲಾಯಿತು..! ಒಟ್ಟಿಗೆ ಟೀ, ಕಾಫಿ, ತಿಂಡಿ, ಊಟ, ಓಡಾಟ..!

ಈಗ ಬೆಳಿಗ್ಗೆ 7.30ಗೆ ರೂಮ್ ಬಿಡ್ತಾನೆ..! ರಾತ್ರಿ ಬೇಗ ಅಂದ್ರೆ 10 ಗಂಟೆಗೆ ಬರ್ತಾನೆ..! ಯಾಕೋ ಮಗಾ ಇಷ್ಟೊಂದು ಬೇಗ ಹೋಗ್ತೀ? ಯಾಕೋ ಮಗಾ ಬರೋದು ಇಷ್ಟೊಂದು ತಡವಾಗುತ್ತೆ? ಅಂತ ರೂಮ್ಮೇಟ್ ಅನಂತ್ ಕೇಳಿದರೆ “ಹೇ ಇಲ್ಲ ಕಣೋ, ಆಫೀಸಲ್ಲಿ ತುಂಬಾ ವರ್ಕ್ ಇದೆ ಅಂತಾನೆ”..! ಇನ್ನೂ ಪದೇ ಪದೇ ಕೇಳಿದ್ರೆ ” ನೀನು ನಿನ್ನ ಆಫೀಸ್ ಟೈಮಿಂಗ್ಸ್ ನನಗೆ ಕಲಿಸಿ ಕೊಡ್ಬೇಕಿಲ್ಲ..! ನನ್ನ ಆಫೀಸ್ ಟೈಮಿಂಗ್ಸ್ ಹೀಗೆಯೇ ಎಂದು ರೇಗಾಡ್ತಾನೆ..! ಆಫೀಸ್ಗೇ ಬೇಗ ಹೋಗಿ ಲೇಟ್ ಆಗಿ ಬರೋ ಕತೆ ಬಿಟ್ಟಾಕು ಗುರೂ.. ಇಪ್ಪತ್ನಾಲ್ಕು ಗಂಟೆನೂ ಮೊಬೈಲ್ ಇಟ್ಕೊಂಡೇ ಇರ್ತಾನೆ..! ಟಾಯ್ಲೆಟ್ಗೂ ಮೊಬೈಲ್ ತಗೊಂಡು ಹೋಗ್ತಾನೆ..! ರಾತ್ರಿ ಇಡೀ ಮುಸುಕ ಹಾಕ್ಕೊಂಡು ಚಾಟ್ ಮಾಡ್ತಾ ಇರ್ತಾನೆ ಅಂತ ವಿಲಾಸ್ ಕತೆಯನ್ನು ಅನಂತು ಹೇಳ್ದ..! ಅಷ್ಟೇ ಅಲ್ಲ. ಅನಂತು ಹಾಗೂ ಅವನ ಫ್ರೆಂಡ್ ಒಂದು ದಿನ ಬೇಕಂತಲೇ ವಿಲಾಸ್ನನ್ನು ಫಾಲೋ ಮಾಡ್ತಾರೆ..! ಭಾನುವಾರವೂ ಆಫೀಸ್ ಇದೆ. ಕರ್ಮ, ನನಗೆ ಈ ಆಫೀಸ್ ಕೆಲಸವೇ ಸಾಕು, ಬೇರೆ ಕಡೆ ನೋಡ್ಕೊತ್ತೀನಿ ಅಂತ ರೂಂನಲ್ಲಿ ವಟಗುಟ್ಟುವ ವಿಲಾಸ್ ಗೆ ತಿಂಗಳಲ್ಲಿ ಒಂದೇ ಒಂದು ದಿನವೂ ರಜೆ ಇಲ್ಲವೇ..? ಚಾನ್ಸೇ ಇಲ್ಲ..! ಹೀಗೆ ಕೆಲಸ ಯಾರೂ ಮಾಡಲ್ಲ..! ಯಾವ ಕಂಪನಿನೂ ಮಾಡಿಸಿಕೊಳ್ಳಲ್ಲ ಅಂತ ಅನಂತು ಮತ್ತು ಅವನ ಗೆಳೆಯ ಒಂದು ಭಾನುವಾರ ವಿಲಾಸ್ನನ್ನೇ ಫಾಲೋ ಮಾಡ್ತಾರೆ..! ರೂಂನಿಂದ ಹೊರಟ ವಿಲಾಸ್ ಶಿವಾಜಿನಗರಕ್ಕೆ ಹೋಗೋ ಬಸ್ ಹತ್ತುತ್ತಾನೆ..! ಅದೇ ಬಸ್ ಅನ್ನು ಅನಂತು ಮತ್ತು ಅವನ ಗೆಳೆಯ ಫಾಲೋ ಮಾಡ್ತಾರೆ..! (ಅನಂತು ಹೆಲ್ಮೆಟ್ ಹಾಕೊಂಡು ಬೈಕ್ ಓಡಿಸ್ತಾ ಇರ್ತಾನೆ, ಅವನ ಗೆಳೆಯ ಹಿಂದೆ ಕೂತಿರ್ತ್ತಾನೆ, ಅವನ ಗಾಡಿ ವಿಲಾಸ್ ಗೆ ಗೊತ್ತಿರಲ್ವಂತೆ) ವಸಂತನಗರದಲ್ಲಿ ಬಸ್ ಇಳಿದ ವಿಲಾಸ್ ಗಾಗಿ ಅವಳು ಸ್ಕೂಟಿಯಲ್ಲಿ ಕಾಯ್ತಾ ಇರ್ತಾಳೆ..! ಬಸ್ ಇಳಿದವನೇ ವಿಲಾಸ್ ಸ್ಕೂಟಿ ಏರಿ ಅವಳೊಡನೆ ಹೋಗ್ತಾನೆ..! ಅವರನ್ನೇ ಹಿಂಬಾಲಿಸಿ ಹೋಗಿ ಕಬ್ಬನ್ನು ಪಾರ್ಕ್ ನಲ್ಲಿ ವಿಲಾಸ್ ಅನಂತನ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬೀಳ್ತಾನೆ..! ಅನಂತನನ್ನು ನೋಡಿ ಕೆಂಡಮಂಡಲನಾದ ವಿಲಾಸ್ ಬಾಯಿಗೆ ಬಂದಹಾಗೆ ಬೈತಾನೆ..! ಎಲ್ಲವನ್ನೂ ತಮಾಷೆಯಾಗಿ ಟ್ರೀಟ್ ಮಾಡೋ ಅನಂತ್ ವಿಲಾಸ್ ಗೆ ಅವನ ಕತೆಯನ್ನು ಅವರ ಅಪ್ಪ ಅಮ್ಮನಿಗೆ ಹೇಳ್ತೀನಿ ಎಂದು ಹೊರಡುತ್ತಾನೆ..! ಹೆದರಿದ ವಿಲಾಸ್, ಬೇಡ ಬೇಡ ಅಂತ ಅವನನ್ನು ತಡೆದು ಅವನಿಗೂ ಅವನ ಗೆಳೆಯ ಶ್ರೀಕರನಿಗೂ ಗೆಳತಿ ಸೌಮ್ಯಾಳ ಪರಿಚಯ ಮಾಡಿಕೊಡ್ತಾನೆ..!
ಹೀಗೆ ಸೌಮ್ಯಳನ್ನು ಲವ್ ಮಾಡೋಕೆ ಶುರು ಮಾಡಿದ ಮೇಲೆ ರೂಮ್ನಲ್ಲಿ ಇರುವುದೇ ಅಪರೂಪ, ಅಪ್ಪಿತಪ್ಪಿ ರೂಂನಲ್ಲಿ ಇದ್ದಾಗಲೂ ಒಂದುಚೂರು ಕೆಲಸವನ್ನು ಮಾಡ್ತಾ ಇರ್ಲಿಲ್ಲ..! ಆದರೆ, ಅನಂತು ಸೌಮ್ಯಳಾ ಹತ್ತಿರ ಅವಳ ಪ್ರಿಯಕರ ವಿಲಾಸ್, ರೂಮ್ನಲ್ಲಿ ತೊಳಿಯದೇ ಇರೋ ಬಟ್ಟೆ, ತೊಳೆದ ಬಟ್ಟೆ ಎಲ್ಲವನ್ನೂ ಒಟ್ಟಾಗಿ ಹೆಂಗಾಯ್ತೋ ಹಾಗೇ ಎಸೆದು ಹೋಗ್ತಾನೆ…! ತೊಳೆಯದೇ ತಟ್ಟೆಯನ್ನು ಉಪಯೋಗಿಸ್ತಾನೆ, ಒಂದೇ ಒಂದು ದಿನವೂ ರೂಂ ಕ್ಲೀನ್ ಮಾಡಲ್ಲ..! ನಾವು ಮಾತಾಡಿದ್ರೂ ಸುಮ್ನೆ ಸುಮ್ನೆ ಸಿಟ್ಟು ಮಾಡ್ತಾನೆ..! ಅವನ ಅಪ್ಪ ಅಮ್ಮ ಕಾಲ್ ಮಾಡಿದ್ರೂ ನೆಟ್ಟಗೆ ಮಾತಾಡಲ್ಲ..! ಒಳ್ಳೆಯದು ಹೇಳಿದ್ರೂ ಕೇಳಲ್ಲ..! ನೀವಾದ್ರೂ ಹೇಳಿ ಅಂತ ಸೌಮ್ಯ ಕಾಣದ ವಿಲಾಸ್ ನ ಇನ್ನೊಂದು ಮುಖವನ್ನು ಬಿಚ್ಚಿಡುತ್ತಾನೆ..! ಈಗ ಸೌಮ್ಯ ಬುದ್ಧಿ ಹೇಳಿದ ಮೇಲೆ ಈ ಬೆಪ್ಪ ವಿಲಾಸ್ ರೂಂನಲ್ಲಿ ನೀಟಾಗಿ ಎಲ್ಲವನ್ನೂ ಜೋಡಿಸಿ ಇಡ್ತಾ ಇದ್ದಾನಂತೆ..! ಕೋಪ ಕಡಿಮೆ ಮಾಡಿಕೊಂಡಿದ್ದಾನಂತೆ..! ಅಪ್ಪ-ಅಮ್ಮನ ಹತ್ತಿರ ದಿನಾಲೂ ಗಂಟೆ ಗಟ್ಟಲೆ ಮಾತಾಡ್ತಾನಂತೆ..! ಯಾವತ್ತೂ ಇಷ್ಟೊಂದು ಮಾತಾಡದ, ತಾಳ್ಮೆಯಿಂದಿರದ ವಿಲಾಸ್ ಬದಲಾಗಿದ್ದು ಸ್ವತಃ ಅವರ ಅಪ್ಪ ಅಮ್ಮನಿಗೂ ಆಶ್ಚರ್ಯ ಆಗಿದೆಯಂತೆ..! ಆಫೀಸಲ್ಲೂ ಎಲ್ಲರ ಹತ್ತಿರ ರೇಗಾಡ್ತಾ ರೇಗಾಡ್ತಾ ಕೆಲಸ ಮಾಡ್ತಾ ಇದ್ದ ವಿಲಾಸ್ ಅಲ್ಲಿಯೂ ಬದಲಾಗಿದ್ದಾನಂತೆ..! ಎಲ್ಲರಿಗೂ ಇಷ್ಟವಾಗೋ ರೀತಿಯಲ್ಲಿ ಕೆಲಸ ಮಾಡ್ತಾ ಇದ್ದಾನಂತೆ..! ಸಿಗರೇಟು ಬಿಟ್ಟಿದ್ದಾನೆ, ಚಿಕ್ಕ ವಯಸ್ಸಲ್ಲೇ ಕಲಿತಿದ್ದ ಕುಡಿತದ ಚಟವನ್ನೂ ಬಿಟ್ಟಿದ್ದಾನೆ..! ದುಡ್ಡನ್ನು ಉಳಿಸ್ತಾ ಇದ್ದಾನೆ..! ಕಾಂಪಿಟೇಟಿವ್ ಎಕ್ಸಾಮ್ಗೆ ಪ್ರಿಪೇರ್ ಆಗ್ತಾ ಇದ್ದಾನೆ..! ಮನಸ್ಸು ಮಾಡಿದರೆ ಹುಡುಗಿ ಹುಡಗನೊಬ್ಬನನ್ನು ಹುಡುಗಿ ಹೇಗೆ ಬೇಕೋ ಹಾಗೆ ಬದಲಾಯಿಸುತ್ತಾಳೆ ಅನ್ನೋದಕ್ಕೆ ಸೌಮ್ಯಾಳೇ ಸಾಕ್ಷಿ..! ಇವರಿಬ್ಬರ ಪ್ರೇಮ್ಕಹಾನಿ ಮನೆಯವರಿಗೆ ಗೊತ್ತಿಲ್ಲ..! ಸದ್ಯಕ್ಕೆ ಪ್ರೀತಿ ಮುಂದುವರೆದಿದೆ..! ಇವರ ಪ್ರೀತಿ ಉಳಿಯಲಿ. ಆದಷ್ಟು ಬೇಗ ಇವರು ಮದುವೆ ಆಗುವಂತಾಗಲಿ.

  • ಶಶಿಧರ ಡಿ ಎಸ್ ದೋಣಿಹಕ್ಲು

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಕನ್ನಡದವರು ಅಂದ್ರೆ ಏನಂದುಕೊಂಡಿದ್ದಾರೆ..? ಅಷ್ಟಕ್ಕೂ ಪರಿಸ್ಥಿತಿ ಯಾಕೆ ಹೀಗಾಗಿದೆ ಗೊತ್ತಾ..? ಈ ವೀಡಿಯೋ ನೋಡಿ..!

6ನೇ ಕ್ಲಾಸ್ ಫೇಲ್ ಆದವಳು ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೆ ಟಾಪ್ 2 ರ್ಯಾಂಕ್ ಪಡೆದಳು..!

ಕಳ್ಳನಿಂದ ಅಮ್ಮನನ್ನು ಕಾಪಾಡಿದ 13ರ ಪೋರ..! ಕೆಚ್ಚೆದೆಯ ಬಾಲಕನಿಗೆ ನ್ಯಾಷನಲ್ ಬ್ರೇವರಿ ಅವಾರ್ಡ್..!

ಹೆಂಡತಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ ಪತಿದೇವ..! ಇವರು ಕಳೆದ 59 ವರ್ಷದಿಂದಲೂ ಹೆಂಡತಿಯ ಸೇವೆ ಮಾಡ್ತಿದ್ದಾರೆ..!

ಕಿಲ್ಲಿಂಗ್ ವೀರಪ್ಪನ್ ಸಿನಿಮಾ ನೀವಿನ್ನೂ ನೋಡಿಲ್ವಾ..?

800 ವರ್ಷ ಇತಿಹಾಸ ಇರೋ ಮೊಬೈಲ್..! ನೀವಿನ್ನೂ 800 ವರ್ಷ ಇತಿಹಾಸದ ಮೊಬೈಲ್ ನೋಡಿಲ್ವಾ..?!

ರತನ್ ಟಾಟಾ ಹೇಳಿದರು ಅನ್ನದ ಪಾಠ ಜರ್ಮನಿಯಲ್ಲಿ ಪಾಠ ಕಲಿಸಿದ್ದಳಂತೆ ಓರ್ವ ಅಜ್ಜಿ..!

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...