ಒಂದೇ ಇನ್ನಿಂಗ್ಸ್ ನಲ್ಲಿ 1009 ರನ್ ಬಾರಿಸಿದ ಪೋರ..! ಕ್ರಿಕೆಟ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಆಟೋ ಚಾಲಕನ ಮಗ..!

1
73

ಅದು ಬರೋಬ್ಬರಿ 116 ವರ್ಷಗಳ ಹಿಂದಿನ ಕ್ರಿಕೆಟ್ ರೆಕಾರ್ಡ್. ವಿಶ್ವದ ಯಾವುದೇ ಕ್ರಿಕೆಟಿಗನಿಂದಲೂ ಕೂಡಾ ಅದನ್ನು ಮುರಿಯಲು ಸಾಧ್ಯವಾಗಿರಲಿಲ್ಲ. ವಿಶ್ವ ಪ್ರಸಿದ್ಧ ಹೊಡಿ ಬಡಿ ದಾಂಡಿಗರೆನಿಸಿಕೊಂಡವರೂ ಕೂಡಾ ಅದರ ಹತ್ತಿರಕ್ಕೂ ಸುಳಿದಿರಲಿಲ್ಲ. ಆದರೆ ಭಾರತದ ಓರ್ವ ಹುಡುಗ ಮಾತ್ರ ಆ ರೆಕಾರ್ಡನ್ನು ಬ್ರೇಕ್ ಮಾಡಿದ್ದಾನೆ.
ಯೆಸ್.. ಮುಂಬೈ ಮೂಲದ ಪ್ರಣವ್ ಧನವಾಡೆ ಎಂಬ ಅಂಡರ್ 16 ವಿಭಾಗದ ಕ್ರಿಕೆಟಿಗ ಆರ್ಯ ಗುರುಕುಲ ಸ್ಕೂಲ್ ವಿರುದ್ಧ ಕೇವಲ ಒಂದೇ ಇನ್ನಿಂಗ್ಸ್ನಲ್ಲಿ 1009 ರನ್ ಗಳಿಸೋ ಮೂಲಕ ವಿಶೇಷ ಸಾಧನೆಯನ್ನು ಮಾಡಿದ್ದಾರೆ.
ಎರಡು ದಿನಗಳ ಆಟದಲ್ಲಿ ಮೊದಲ ದಿನ 15 ವರ್ಷದ ಪ್ರಣಭ್ 199 ಎಸೆತಗಳಲ್ಲಿ ಬರೋಬ್ಬರಿ 652 ರನ್ ಚಚ್ಚಿದ್ದರು. ಇಂದು ಆಟ ಮುಂದುವರೆಸಿ 1009 ರನ್ ಗಡಿ ದಾಟಿದ್ದಾರೆ..! ಇವರ ಇನ್ನಿಂಗ್ಸ್ ನಲ್ಲಿ ಕೇವಲ 323 ಎಸೆತಗಳಲ್ಲಿ 59 ಸಿಕ್ಸರ್ 127 ಬೌಂಡರಿಗಳನ್ನು ಒಳಗೊಂಡ 1009 ರನ್ ದಾಖಲಿಸಿದ್ದಾರೆ ಒಟ್ಟಾರೆ ತಂಡದ ಮೊತ್ತ 1465/6,  ಇವರ ವೈಯಕ್ತಿಕ ಸ್ಕೋರ್ ಅಜೇಯ 1009..! ಆ ಮೂಲಕ 116 ವರ್ಷಗಳ ಹಿಂದೆ ಇಂಗ್ಲೆಂಡ್ ನ ಅರ್ಥರ್ ಕೋಲಿನ್ಸ್ ಎಂಬುವವರು ನಿರ್ಮಿಸಿದ್ದ 628 ರನ್ ಗಳ ಅಭೇಧ್ಯ ಕೋಟೆಯನ್ನು ಬೇಧಿಸಿದ್ದಾನೆ. 1899ರಲ್ಲಿ ಇಂಗ್ಲೆಂಡ್ ನ ಜ್ಯೂನಿಯರ್ ಹೌಸ್ ಮ್ಯಾಚ್ ಟೂರ್ನಿಯಲ್ಲಿ ಅರ್ಥರ್ ಕೋಲಿನ್ಸ್ 628 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿದ್ದರು.
ಕ್ರಿಕೆಟ್ ಇತಿಹಾಸದಲ್ಲಿ ನೂತನ ದಾಖಲೆ ಬರೆದ ಪ್ರಣಬ್ ಬಡ ಆಟೋಚಾಲಕನ ಮಗ..! ಪ್ರಣವ್ ಧನವಾಡೆ ಅತ್ಯಂತ ಬಡತನದ ಕುಟುಂಬದಿಂದ ಮೇಲೆದ್ದು ಬಂದಿರುವ ಕ್ರಿಕೆಟಿಗ. ಆತನ ತಂದೆ ಆಟೋ ಓಡಿಸಿ ಜೀವನ ನಡೆಸುತ್ತಾರೆ. ಅದರಿಂದ ಬಂದ ಒಂದು ಪಾಲನ್ನು ಪ್ರಣವ್ ನ ಕ್ರಿಕೆಟ್ ಪ್ರ್ಯಾಕ್ಟಿಸ್ ಗೆ ಮೀಸಲಿಡುತ್ತಾರೆ. ಭಾರತದಲ್ಲಿ ಬಡತನ ಎಂಬುದು ದೊಡ್ಡ ಮಹಾಮಾರಿಯಾಗಿದೆ. ಆ ಬಡತನದ ಮಧ್ಯೆಯೇ ಅದೆಷ್ಟೋ ಪ್ರತಿಭೆಗಳು ಮರೆಯಾಗಿ ಹೋಗುತ್ತಿವೆ. ಆದರೆ ಪ್ರಣವ್ ಮಾತ್ರ ಆ ರೀತಿಯಾಗದೇ ದೊಡ್ಡ ಹೆಸರು ಮಾಡಬೇಕಿದೆ.

Video :

  • ರಾಜಶೇಖರ ಜೆ.

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

ಕನ್ನಡದವರು ಅಂದ್ರೆ ಏನಂದುಕೊಂಡಿದ್ದಾರೆ..? ಅಷ್ಟಕ್ಕೂ ಪರಿಸ್ಥಿತಿ ಯಾಕೆ ಹೀಗಾಗಿದೆ ಗೊತ್ತಾ..? ಈ ವೀಡಿಯೋ ನೋಡಿ..!

6ನೇ ಕ್ಲಾಸ್ ಫೇಲ್ ಆದವಳು ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೆ ಟಾಪ್ 2 ರ್ಯಾಂಕ್ ಪಡೆದಳು..!

ಕಳ್ಳನಿಂದ ಅಮ್ಮನನ್ನು ಕಾಪಾಡಿದ 13ರ ಪೋರ..! ಕೆಚ್ಚೆದೆಯ ಬಾಲಕನಿಗೆ ನ್ಯಾಷನಲ್ ಬ್ರೇವರಿ ಅವಾರ್ಡ್..!

ಹೆಂಡತಿಗಾಗಿ ಸರ್ವಸ್ವವನ್ನೇ ತ್ಯಾಗ ಮಾಡಿದ ಪತಿದೇವ..! ಇವರು ಕಳೆದ 59 ವರ್ಷದಿಂದಲೂ ಹೆಂಡತಿಯ ಸೇವೆ ಮಾಡ್ತಿದ್ದಾರೆ..!

ಕಿಲ್ಲಿಂಗ್ ವೀರಪ್ಪನ್ ಸಿನಿಮಾ ನೀವಿನ್ನೂ ನೋಡಿಲ್ವಾ..?

800 ವರ್ಷ ಇತಿಹಾಸ ಇರೋ ಮೊಬೈಲ್..! ನೀವಿನ್ನೂ 800 ವರ್ಷ ಇತಿಹಾಸದ ಮೊಬೈಲ್ ನೋಡಿಲ್ವಾ..?!

ರತನ್ ಟಾಟಾ ಹೇಳಿದರು ಅನ್ನದ ಪಾಠ ಜರ್ಮನಿಯಲ್ಲಿ ಪಾಠ ಕಲಿಸಿದ್ದಳಂತೆ ಓರ್ವ ಅಜ್ಜಿ..!

1 COMMENT

LEAVE A REPLY

Please enter your comment!
Please enter your name here