ಕನ್ನಡ ಚಿತ್ರೋದ್ಯಮಕ್ಕೆ ನವೆಂಬರ್ 7ರಂದು ಒಂದು ಕರಾಳ ದಿನ.. ಯಾಕಂದ್ರೆ ಇಬ್ಬರು ಉದಯೋನ್ಮುಖ ನಟರು ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದರು..! ಈ ದುರಂತ ಸಿನಿಮಾ ರಂಗಕ್ಕೆ ಮಾತ್ರವಲ್ಲ ಇಡಿ ನಮ್ಮ ರಾಜ್ಯವೇ ಇಬ್ಬರು ಪ್ರತಿಭೆಗಳನ್ನು ಕಳೆದುಕೊಂಡ ಶೋಕದಲ್ಲಿದೆ. ಈ ದುರಂತದಿಂದ ಇದೀಗ ಎಲ್ಲಡೆಯಿಂದ ಟೀಕೆಗಳೂ ಕೇಳಿ ಬರ್ತಾ ಇದೆ.. ಆದ್ರೆ ರಾಜ್ಯ ಜಲಮಂಡಳಿ ಈ ನಿಷೇಧಿತ ಪ್ರದೇಶದಲ್ಲಿ ಶೂಟಿಂಗ್ ಮಾಡ್ಬಾರ್ದು ಅಂತ ಹೇಳಿದ್ರೂ ಕೂಡ ಅಲ್ಲಿ ಶೂಟಿಂಗ್ ಮಾಡಲು ಕಾರಣವಾದ್ರೂ ಏನಿತ್ತು..? ನಿಷೇಧವಿದ್ದರೂ ತಿಪ್ಪಗೊಂಡನಹಳ್ಳಿ ಕೆರೆಯ ಮಧ್ಯ ಭಾಗದಲ್ಲಿ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಮಾಡಲು ತಿಳಿಸಿದವರು ಯಾರು ಎಂಬ ಅಚ್ಚರಿಯ ಸತ್ಯಗಳು ತನಿಖೆಯಿಂದ ಹೊರಬಿದ್ದಿದೆ..!
ಅಷ್ಟಕ್ಕೂ ಈ ಕೆರೆಯ ಮಧ್ಯಭಾಗದಲ್ಲಿ ಶೂಟಿಂಗ್ ಮಾಡೋಣ ಅಂತ ಮಾಸ್ಟರ್ ಪ್ಲಾನ್ ಹಾಕಿದ್ದು ಯಾರ್ ಗೊತ್ತಾ..? ಯಾವುದ್ರಲ್ಲೂ ಡ್ಯೂಪ್ ಬಳಕೆ ಮಾಡ್ಬಾರ್ದು ಜನರಿಗೆ ನೈಜ್ಯ ದೃಶ್ಯಾವಳಿಗಳನ್ನು ನೀಡಿ ಅವರನ್ನು ಮನರಂಜಿಸಬೇಕೆಂದು ಹೇಳಿ ಇಬ್ಬರು ಪ್ರತಿಭೆಗಳನ್ನು ನೀರು ಪಾಲು ಮಾಡಲು ಕಾರಣಕರ್ತರಾದವರು ಯಾರು..? ಎಂಬ ಸ್ಪೋಟಕ ಮಾಹಿತಿ ಇದೀಗ ಗಾಂಧಿ ನಗರದಲ್ಲಿ ಹರಿದಾಡ್ತಾ ಇದೆ ನೋಡಿ..!
ನಿಮಗೆಲ್ಲಾ ಗೊತ್ತಿರೋ ಹಾಗೆ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ವೇಳೆ ಮೃತ ಉದಯ್‍ಗೆ ಈಜು ಬರ್ತಾ ಇದ್ದದ್ದು ಅಷ್ಟಕಷ್ಟೆ.. ಅದ್ರಲ್ಲೂ ಉದಯ್‍ಗೆ ಆರೋಗ್ಯವೂ ಕೂಡ ಸರಿ ಇರ್ಲಿಲ್ಲ..! ತನ್ನ ಗುರು ದುನಿಯಾ ವಿಜಯ್‍ಗಾಗಿ ಇದನ್ನು ಮಾಡ್ತಾ ಇದ್ದೇನೆ ಎಂಬ ಸತ್ಯ ಸ್ವತಃ ಉದಯ್ ಅವರೇ ಮಾಧ್ಯಮಗಳಲ್ಲಿ ಹೇಳಿದ್ರು.. ಹಾಗಿದ್ಮೇಲೆ ನೀವೆ ಯೋಚಿಸಿ.. ಚಿತ್ರದ ಕ್ಲೈಮ್ಯಾಕ್ಸ್ ಹೀಗೆ ಬರ್ಬೇಕು ಅಂತ ಪಕ್ಕಾ ಪ್ಲಾನ್ ಹಾಕ್ದೋರು ಯಾರು ಅಂತ..! ಅವರ್ಯಾರು ಅಲ್ಲ ನಟ ದುನಿಯಾ ವಿಜಯ್ ಅವರಂತೆ.. ಇವರೇ ಕ್ಲೈಮ್ಯಾಕ್ಸ್ ಗೆ ಪ್ಲಾನ್ ಹಾಕಿದ್ದಂತೆ..!
ಹೀಗಂತ ನಾವೇಳ್ತಾ ಇಲ್ಲ ಸ್ವತಃ ಸಿನಿಮಾ ನಿರ್ಮಾಪಕ ಸುಂದರ್ ಗೌಡ ಪೊಲೀಸರ ತನಿಖೆಯ ವೇಳೆ ಬಾಯ್ಬಿಟ್ಟಿದ್ದಾರೆ..! ಇಡೀ ದುರ್ಘಟನೆಗೆ ಮೂಲ ಕಾರಣ ದುನಿಯಾ ವಿಜಯ್ ಎನ್ನುವಂತಿದೆ ಅವರ ಹೇಳಿಕೆ.. ಅಷ್ಟಕ್ಕೂ ಅವರ ಹೇಳಿಕೆ ಏನು..? ನಿಮಗೆ ಗೊತ್ತಿರ್ಲಿ ಚಿತ್ರದ ಕ್ಲೈಮ್ಯಾಕ್ಸ್ ಗೆ ಐಡಿಯಾ ಕೊಟ್ಟಿದ್ದೇ ಈ ದುನಿಯಾ ವಿಜಯ್.. ಡ್ಯೂಪ್ ಬಳಸದೇ ಚಿತ್ರೀಕರಿಸುವಂತೆ ಹೇಳಿದ್ದು ಕೂಡ ಇವರೇ..! ತಮ್ಮ ಹುಡುಗ್ರನ್ನ ನಾನು ಒಪ್ಪುಸ್ತಿನಿ ಅಂತ ಚಿತ್ರ ತಂಡಕ್ಕೆ ಮಾತು ಕೊಟ್ಟಿದ್ರಂತೆ ನೋಡಿ ನಮ್ಮ ಜಯಮ್ಮನ ಮಗ..! ನಿಮ್ಮ ಜೊತೆ ನಾನಿದ್ದೀನಿ ಭಯ ಪಡ್ಬೇಡಿ ಅಂತ ಸೀನ್ ಮಾಡೋಕೆ ಒಪ್ಪಿಸಿದ್ದ ವಿಜಯ್ ಆ ಇಬ್ಬರು ಖಳ ನಟರ ಸಾವಿಗೆ ಕಾರಣರಾದ್ರು ಎಂಬ ಮಾಹಿತಿ ಪೊಲೀಸರ ತನಿಖೆಯಿಂದ ಬಯಲಾಗಿದೆ.. ಎಂದು ವರದಿ ಮಾಡಿದೆ ಖಾಸಗೀ ಸುದ್ದಿ ವಾಹಿನಿ.. ಹೇಗೋ ಧೈರ್ಯ ಮಾಡಿ ಮನಸ್ಸು ಮಾಡಿದ್ದೇವೆ ಆ ದೇವ್ರ ಮೇಲೆ ಭಾರ ಹಾಕಿ ಮಾಡ್ತಾ ಇದೀವಿ ಎಂದು ಹೋದ ನಟರು ಮತ್ತೆ ಬರಲೇ ಇಲ್ಲ..! ಇದೇ ಅಲ್ವ ದುರಂತ ಅಂದ್ರೆ..!
Like us on Facebook The New India Times
POPULAR STORIES :
ಟ್ರಂಪ್‍ಗಿಂತ 25 ವರ್ಷ ಚಿಕ್ಕವಳಂತೆ ಮೆಲಾನಿಯಾ..!
2.5 ಲಕ್ಷಕ್ಕೂ ಅಧಿಕ ಡೆಪಾಸಿಟ್‍ಗಳಿಗೆ ಟ್ಯಾಕ್ಸ್ ಭೀತಿ..!
500, 1000ರೂ. ನೋಟುಗಳು ಬ್ಯಾನ್ ಆದ್ವೇ..? ನೋ ಟೆನ್ಷನ್..
ಬಂಕ್‍ಗಳಲ್ಲಿ 500, 1000ರೂ. ನೋಟು ಪಡೆಯದಿದ್ದರೆ ಕಠಿಣ ಕ್ರಮ: ಸಚಿವ ಧರ್ಮೇಂದ್ರ ಪ್ರಧಾನ್.