ಅವನು ಪೊರಕಿ ಹುಡುಗ…ಇವಳು ಮುಗ್ಧ ಹುಡುಗಿ..! ಒಳ್ಳೆಯತನಕ್ಕೆ ಅದೆಂಥಾ ಹುಡುಗಿಯಾದ್ರೂ ಒಲಿಯಲೇಬೇಕು..

Date:

`ಇವತ್ತಿಂದ ನೀನು ನನ್ನ ಹುಡುಗಿ. ನಂಗೆ ನೀನಂದ್ರೆ ಇಷ್ಟ, ನಿಂಗೆ ಕಷ್ಟ ಆದ್ರೂ ನೀನು ನನ್ನ ಲವ್ ಮಾಡ್ಲೇಬೇಕು’ ಅಂತ ಫಿಲ್ಮಿ ಡೈಲಾಗ್ ಹೊಡೆದು ಹೋದವನು ರಾಕೇಶ್. ಅವಳ ಕೈಕಾಲು ನಡುಗಿ ಜೀವ ಇಲ್ಲದ ಹಾಗಾಗಿತ್ತು. ಅವಳು ಶ್ರೇಯಾ..! ರಾಕೇಶ್ ಅಂದ್ರೆ ಕಾಲೇಜಿನ ಅಪ್ಪಟ ಪೋಲಿ, ಯಾವತ್ತೂ ಕ್ಲಾಸಲ್ಲಿ ಕೂತು ಪಾಠ ಕೇಳಿದ ಹುಡುಗ ಅಲ್ಲ..! ಅವನು ಸಾಮಾನ್ಯವಾಗಿ ಹುಡುಗಿಯರ ವಿಚಾರಕ್ಕೆ ಹೋಗಲ್ಲ, ಅವನಾಯ್ತು, ಅವನ ಫ್ರೆಂಡ್ಸ್, ಸಣ್ಣಪುಟ್ಟ ಕಿರಿಕ್, ಸಿಗರೇಟು, ಎಣ್ಣೆ.. ಇದೇ ಅವನ ಜೀವನ ಶೈಲಿ..! ಆದ್ರೆ ಅವನಿಗೆ ಅದ್ಯಾಕೋ ಶ್ರೇಯಾ ಮೇಲೆ ಲವ್ ಶುರುವಾಗಿತ್ತು. ಅವಳೋ ಅಪ್ಪಟ ಮುಗ್ಧೆ..! ಮಾತಾಡುದ್ರೆ ಎಲ್ಲಿ ಮುತ್ತುದುರುತ್ತೋ ಅಂತ ಯೋಚನೆ ಮಾಡೋಳು..! ತಲೆತಗ್ಗಿಸಿ ಬರ್ತಾಳೆ, ತಲೆ ತಗ್ಗಿಸಿಕೊಂಡೇ ಹೋಗ್ತಾಳೆ..! ಪಕ್ಕದಲ್ಲಿ ಯಾರ್ದಾದ್ರೂ ಹೆಣ ಬಿದ್ರೂ ಅವಳು ಮಾತ್ರ ಹೆಜ್ಜೆಯ ಮೇಲೊಂದ್ ಹೆಜ್ಜೆಯನಿಕ್ಕುತ ಅಂತ ಹೋಗಿಬಿಡೋ ಹುಡುಗಿ..! ಅಂತಹ ಶ್ರೇಯಾಳ ಮೇಲೆ ಲವ್ ಆಗಿರೋದು ಯಾವ ಆಂಗಲ್ಲಲ್ಲೂ ಅವಳಿಗೆ ಸೆಟ್ ಆಗದ ರಾಕೇಶನಿಗೆ.. ಮುಂದೈತೆ ಮಾರಿಹಬ್ಬ…!
ಅವಳು ದಿನಾ ಬರೋಳು, ಇವನು ಅವಳ ಎದುರಿಗೆ ನಿಂತು ತಿಂಡಿ ತಿಂದ್ಯಾ..? ಯಾರಾದ್ರೂ ರೇಗಿಸಿದ್ರಾ..? ಮನೇಲೇನಾದ್ರೂ ಸಮಸ್ಯೇನಾ ಅಂತ ಕಷ್ಟಸುಖ ವಿಚಾರಿಸಿಕೊಳ್ಳೋನು..! ಆದ್ರೆ ಅವಳು ಮಾತ್ರ ಹ್ಞೂಂ ಅಂತಿರ್ಲಿಲ್ಲ, ಊಹ್ಞೂಂ ಅಂತಿರ್ಲಿಲ್ಲ..! ತಲೆ ಎತ್ತು ತಲೆ ಎತ್ತು ಅಂದ್ರೆ ಇನ್ನೂ ಕೆಳಕೆಳಗೆ ತಲೆಬಗ್ಗಿಸಿ ಓಡಿಬಿಡೋಳು ಶ್ರೇಯ..! ಅವಳೂ ಯೋಚನೆ ಮಾಡಿದ್ಲು, ಇವನು ಸುಲಭಕ್ಕೆ ನನ್ನ ಬಿಡೋನಲ್ಲ, ಏನಾದ್ರೂ ಮಾಡಿ ತಪ್ಪಿಸಿಕೋಬೇಕು ಅಂತ ಡಿಸೈಡ್ ಮಾಡಿದ್ಲು..! ಆಗಿದ್ದಾಗ್ಲಿ ಅಂತ ಧೈರ್ಯ ಮಾಡಿ ತಲೆ ಎತ್ತಿಕೊಂಡೇ ಕಾಲೇಜಿನ ಕಡೆ ಹೆಜ್ಜೆ ಹಾಕಿದ್ಲು..! ಅವನು ಧುತ್ ಅಂತ ಎದುರು ಬಂದು ನಿಂತ..! ಏನಮ್ಮ, ಇವತ್ತು ಸೂರ್ಯ ಯಾವ್ ಕಡೆ ಹುಟ್ಟಿದ್ದಾನೆ, ನಮ್ ಹುಡುಗಿ ತಲೆ ಎತ್ಕೊಂಡು ಕಾಲೇಜಿಗೆ ಬರ್ತಿದಾಳೆ ಅಂತ ಕಿಚಾಯಿಸ್ದ..! ಅವಳು ಅಷ್ಟೇ ಧೈರ್ಯದಲ್ಲೇ ಉತ್ತರ ಕೊಟ್ಲು, ಹುಟ್ಟೋ ಕಡೇನೇ ಹುಟ್ಟಿದ್ದಾನೆ. ನಾನು ತಲೆ ತಗ್ಗಿಸ್ತಿದ್ದಿದ್ದು ನನ್ನ ಒಳ್ಳೇದಕ್ಕೆ, ಇವತ್ತು ತಲೆ ಎತ್ತಿರೋದು ನನ್ ಒಳ್ಳೇದಕ್ಕೆ. ನಂಗೆ ನಿನ್ನ ಕಂಡ್ರೆ ಇಷ್ಟ ಇಲ್ಲ. ನಂಗೆ ನಿನ್ನಂತಾ ಪೋಲಿ ಹುಡುಗರನ್ನ ನೋಡಿದ್ರೆ ಆಗೋದೂ ಇಲ್ಲ..! ನಿಂಗೆ ಯಾಕೆ ನಾನಿಷ್ಟ ಆಗಿದೀನೋ, ಅದೇ ತರ ನಂಗೂ ನಿನಿಷ್ಟ ಆಗೋಕೆ ಏನಿದೆ ನಿನ್ ಹತ್ತಿರ..? ಕ್ಲಾಸಿಗೆ ಬರಲ್ಲ, ಯಾವಾಗ್ಲೂ ಗಲಾಟೆ, ಡ್ರಿಂಕ್ಸ್ ಮಾಡ್ಕೊಂಡು ಸಿಗರೇಟ್ ಹೊಡ್ಕೊಂಡು ಕೂತಿರ್ತಿಯ, ನಿನ್ನ ನಾನು ಲವ್ ಮಾಡಬೇಕು ಅಂತ ಹೇಗೆ ನಿರೀಕ್ಷೆ ಮಾಡ್ತಿಯ..? ನಿಂಗೆ ನಿಜವಾಗ್ಲೂ ನನ್ನನ್ನ ಪ್ರೀತ್ಸೋ ಯೋಗ್ಯತೆ ಇದ್ದಿದ್ರೆ ನಾನೇ ನೀನು ಕೇಳಿದ ದಿನ ಒಪ್ಪಿಕೊಳ್ತಿದ್ದೆ ಅಂತ ಖಾರವಾಗಿ ಹೇಳಿ ಹೊರಟುಬಿಟ್ಲು..! ಅವನಿಗೆ ಏನು ಉತ್ತರ ಕೊಡಬೇಕು ಅಂತ ಅರ್ಥಾನೇ ಆಗ್ಲಿಲ್ಲ..! ಕಂಗಾಲಾದವನ ಹಾಗೆ ಅವನ ಅಷ್ಟುದ್ದ ಕೂದಲು, ಗಡ್ಡ ಕೆರ್ಕೊಂಡು ಶಾಕ್ ಆಗ್ಬಿಟ್ಟ..!
ಮಾರನೇ ದಿನವೂ ಅದೇ ರಾಕೇಶ್ ಅವಳ ಮುಂದೆ ನಿಂತಿದ್ದ, ಕೈಯಲ್ಲಿ ನೋಟ್ ಬುಕ್, ಅವನ ಕೂದಲು ಶಾರ್ಟ್ ಆಗಿದೆ, ಗಡ್ಡ ಶೇವ್ ಆಗಿದೆ.. ನೀಟಾಗಿ ಡ್ರೆಸ್ ಮಾಡ್ಕೊಂಡಿದ್ದಾನೆ..! ಇವತ್ತು ಅವನು ಮಾತು ಶುರು ಮಾಡ್ದ, ` ನಿನ್ನೆ ನೀನು ಮಾತಾಡ್ದೆ, ಇವತ್ತು ನಾನು ಮಾತಾಡ್ತೀನಿ ಕೇಳು. ನಂಗೆ ನೀನಂದ್ರೆ ಇಷ್ಟ. ನಾನು ಪ್ರೀತಿಸ್ತಿರೋ ಮೊದಲ ಹುಡುಗಿ ನೀನೇ, ಇನ್ಮುಂದೆ ಆ ಪೋಲಿ ಫ್ರೆಂಡ್ಸ್ ಜೊತೆ ಸೇರಲ್ಲ, ಗಲಾಟೆ ಮಾಡಲ್ಲ, ದಿನಾ ಕ್ಲಾಸಿಗೆ ಹೋಗ್ತೀನಿ. ನಿನ್ನಾಣೆ ಎಣ್ಣೆ ಹೊಡೆಯಲ್ಲ, ಬೆಳಗ್ಗೆ 5 ಸಿಗರೇಟ್ ಒಟ್ಟಿಗೇ ಸೇದಿ ಇನ್ಯಾವತ್ತೂ ಮತ್ತೆ ಸಿಗರೇಟ್ ಮುಟ್ಟಲ್ಲ ಅಂತ ಡಿಸೈಡ್ ಮಾಡಿದೀನಿ..! ಒಳ್ಳೆಯವನಾಗ್ತೀನಿ.. ನನ್ನ ಲವ್ ಮಾಡ್ತೀಯ..?’. ಇವತ್ತು ಅವಳಿಗೆ ಏನು ಹೇಳ್ಬೇಕೋ ಗೊತ್ತಾಗಲಿಲ್ಲ, ಅವಳು ಶಾಕ್ ಆಗಿದ್ಲು..! ಸುಮ್ಮನೆ ನಕ್ಕು ಹೊರಟುಬಿಟ್ಲು..! ಹೀಗೇ ಒಂದೆರೆಡು ತಿಂಗಳು ಕಳೀತು, ಹೌದು, ಅವನು ತುಂಬಾ ಬದಲಾಗಿದ್ದ. ಕ್ಲಾಸಿಗೆ ಒಂದು ದಿನವೂ ಮಿಸ್ ಮಾಡ್ತಿರಲಿಲ್ಲ, ಪದೇಪದೇ ಶ್ರೇಯಾಗೆ ಅಡ್ಡ ಹಾಕ್ತಿರಲಿಲ್ಲ..! ಎದುರು ಸಿಕ್ಕರೆ ನಕ್ಕು ಸುಮ್ಮನೆ ಹೋಗ್ತಿದ್ದ..! ತಾನು ಬದಲಾದ್ರೆ ಅವಳು ಸಿಕ್ಕೇಸಿಗ್ತಾಳೆ ಅನ್ನೋ ಗ್ಯಾರಂಟಿ ಅವನಿಗಿತ್ತು..! ಅವತ್ತು ಅವಳೇ ಅವನನ್ನು ಅಡ್ಡ ಹಾಕಿದ್ಲು..! `ಇವತ್ತಿಂದ ನೀನು ನನ್ನ ಹುಡುಗ. ನಂಗೆ ನೀನಂದ್ರೆ ಇಷ್ಟ, ನಿಂಗೆ ಕಷ್ಟ ಆದ್ರೂ ನೀನು ನನ್ನ ಲವ್ ಮಾಡ್ಲೇಬೇಕು’ ಅಂತ ಫಿಲ್ಮಿ ಡೈಲಾಗ್ ಹೊಡೆದು ಹೋದ್ಲು ಶ್ರೇಯಾ..!

  • ಕೀರ್ತಿ ಶಂಕರಘಟ್ಟ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಹೆಣ್ಣು ಮಕ್ಕಳಿಗೆ ಜನ್ಮನೀಡಿದ್ದೀಯಾ ಅಂತ ಅಮ್ಮನನ್ನು ಹಿಂಸಿಸುತ್ತಿದ್ದ ಅಪ್ಪ..! ಪುಟ್ಟ ಮಕ್ಕಳನ್ನು ಎತ್ತಿಕೊಂಡು ಉಟ್ಟ ಬಟ್ಟೆಯಲ್ಲೇ ರಾತ್ರೋ ರಾತ್ರಿ ಮನೆ ಬಿಟ್ಟ ತಾಯಿ..!

ಎಂದೂ ತೆರಿಗೆ ಕಟ್ಟದ ಗಲ್ಫ್ ಪ್ರಜೆಗಳು ಇನ್ಮುಂದೆ ತೆರಿಗೆಕಟ್ಟಲೇ ಬೇಕು..!

ಶ್ರೀಲಂಕಾದಲ್ಲಿ ಭಾರತದ ಧ್ವಜ ಹಾರಿಸಿದ ಕನ್ನಡಿಗ ರಘು..!

ಸಿನಿಮಾಕಥೆಯಂತಿದ್ದರೂ ಇದು ಸಿನಿಮಾ ಸ್ಟೋರಿಯಲ್ಲ..! ಇದು ಇಂಡಿಯಾ, ಸ್ವೀಡನ್ ಲವ್ ಸ್ಟೋರಿ..!

ಇಲ್ಲಿ ಉಳಿದುಕೊಳ್ಳೋಕೆ ಬೇಕಾಗಿದ್ದನ್ನೆಲ್ಲಾ ಸರ್ಕಾರವೇ ಕೊಟ್ಟು, ಸಂಬಳವನ್ನೂ ನೀಡುತ್ತೆ..!

ಭಾರತದ ಅಗ್ರ ಸೆಲೆಬ್ರಿಟಿ ಯಾರು ಗೊತ್ತಾ..? ಟಾಪ್ 10 ಪಟ್ಟಿಯಲ್ಲಿದ್ದಾಳೆ ನಮ್ಮ ಕನ್ನಡತಿ..!

ಬಿಇಡ್ ಗೆ ಸೇರಿದ್ದು 12,800 ವಿದ್ಯಾರ್ಥಿಗಳು, ಪಾಸ್ ಆದವರು 20,000..! ಇದು ಡಾ. ಬಿ.ಆರ್ ಅಂಬೇಡ್ಕರ್ ಯೂನಿವರ್ಸಿಟಿಯ ಕರ್ಮಕಾಂಡ..!

ಈ ವ್ಯಕ್ತಿಗೆ ನಿದ್ದೆ ಮಾಡುವುದೇ ಮರೆತುಹೋಗಿದೆ..! 40 ವರ್ಷದಿಂದ ನಿದ್ದೆಯೇ ಮಾಡಿಲ್ವಂತೆ ಈ ಭೂಪ..!

 

Share post:

Subscribe

spot_imgspot_img

Popular

More like this
Related

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ

ದಸರಾ ಸಂಭ್ರಮ: ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದ ಸಿಎಂ ಸಿದ್ದರಾಮಯ್ಯ ಮೈಸೂರು: ಸಾಂಸ್ಕೃತಿಕ...