ಕಣ್ಣು ಮುಚ್ಚದೇ 121 ತಾಸು ಸಿನಿಮಾ ನೋಡಿದ ಭೂಪ..! ಈತ ಸಿನಿಮಾ ನೋಡಿದ್ದು ಗಿನ್ನಿಸ್ ದಾಖಲೆಗಾಗಿ ಗೊತ್ತಾ..?

0
226

ಎಲ್ಲಾರೂ ಮಾಡುವುದು ಹೊಟ್ಟೆಗಾಗಿ, ತಣ್ಣೀರು, ಬಟ್ಟೆಗಾಗಿ ಎಂಬ ಮಾತು ನಮ್ಮ ಭಾರತ ದೇಶದಲ್ಲಿ ಜನಜನಿತವಾಗಿದೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ ಈ ಮಾತು ಸ್ವಲ್ಪ ಭಿನ್ನವಾಗಿ ಹೇಳಬೇಕಾಗುತ್ತದೇನೋ..? ಅಲ್ಲಿ ಸಿನಿಮಾ ನೋಡುವುದು ರೆಕಾರ್ಡ್ ಗಾಗಿ ಗಿನ್ನಿಸ್ ಪುಟ ಸೇರಲಿಕ್ಕಾಗಿ ಎನ್ನಬಹುದೇನೋ..! ಏಕೆಂದರೆ ಇಲ್ಲೋರ್ವ ವ್ಯಕ್ತಿ ಇದ್ದಾನೆ, ಆತ ಬರೋಬ್ಬರಿ 121 ತಾಸು ನಿದ್ದೆ ಮಾಡದೇ ಸಿನಿಮಾ ನೋಡುತ್ತಾ ಕಾಲ ಕಳೆದಿದ್ದಾನೆ..! ಏಕೆ ಅಷ್ಟು ಹೊತ್ತು ಸಿನಿಮಾ ನೋಡಿದ ಎಂದರೆ ಗಿನ್ನಿಸ್ ರೆಕಾರ್ಡ್ ಮಾಡಲಿಕ್ಕಾಗಿ ಅಂತಾನೆ ಈ ಮನುಷ್ಯ.
ಯೆಸ್.. ಕೆನಡಾ ಮೂಲದ ಸುರೇಶ್ ಜೋಚಿಮ್ ಎಂಬ ವ್ಯಕ್ತಿ ಬರೋಬ್ಬರಿ 121 ತಾಸುಗಳ ಕಾಲ ನಿದ್ದೆ ಮಾಡದೇ ಸಿನಿಮಾ ನೋಡುತ್ತಾ ಕಾಲ ಕಳೆದಿದ್ದಾನೆ ಎಂದರೆ ನೀವು ನಂಬಲೇಬೇಕು. ಅಷ್ಟು ದೀರ್ಘ ಸಮಯ ನಿದ್ದೆ ಮಾಡದೇ ಗಿನ್ನಿಸ್ ರೆಕಾರ್ಡ್ ಮಾಡಿದ ಶ್ರೇಯವನ್ನು ಪಡೆದಿದ್ದಾನೆ..!
ಈ ಹಿಂದೆ ನಮ್ಮದೇ ದೇಶದ ಆಶಿಶ್ ಶರ್ಮಾ ಎಂಬುವವರು ಬರೋಬ್ಬರಿ 120 ಗಂಟೆ 23 ನಿಮಿಷಗಳ ಕಾಲ ಬರೋಬ್ಬರಿ 48 ಸಿನಿಮಾಗಳನ್ನು ನೋಡಿ ವಿಶ್ವ ದಾಖಲೆ ಸೃಷ್ಟಿಸಿದ್ದರು. ಆ ದಾಖಲೆಯನ್ನು ಮುರಿದುಹಾಕುವ ಉದ್ದೇಶದಿಂದ ಸಂಪೂರ್ಣ ಸಿದ್ದರಾಗಿದ್ದ ಸುರೇಶ್, 121 ಗಂಟೆ 18 ನಿಮಿಷಗಳ ಕಾಲ ಸಿನಿಮಾ ನೋಡಿದ್ದಾರೆ.
ಸುರೇಶ್ ರವರು ನೋಡಿದ ಈ ಎಲ್ಲಾ ಚಿತ್ರಗಳನ್ನು ಜೋಹಾನ್ಸ್ ಬರ್ಗ್ ಬೋಲ್ಟ್ ಸ್ಪೀಡ್ ಫೈಬರ್ ಮೂಲಕ ಪ್ರದರ್ಶಿಸಲಾಯಿತು. ಇದಕ್ಕೆ ಅತ್ಯಂತ ಹೆಚ್ಚು ಗಂಟೆಗಳ ಕಾಲ ಸಿನಿಮಾ ಪ್ರಸಾರ ಮಾಡಿದ ದಾಖಲೆಯೂ ಸಿಕ್ಕಿದೆ.
ದಾಖಲೆಗಾಗಿ ಎಂಥೆಂಥದ್ದೋ ದಾಖಲೆ ಮಾಡುವ ಮಂದಿಯನ್ನು ನೋಡಿದ್ದೇವೆ. ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ದಾಖಲೆ ಮಾಡಿದವರನ್ನು ಕಂಡಿದ್ದೇವೆ. ಆದರೆ ಈ ಮನುಷ್ಯ ನಿದ್ದೆ ಮಾಡದೇ ದಾಖಲೆ ಮಾಡಿದ್ದಾನೆ ಎಂದರೆ ಆತನಿಗೆ ನಾವೆಲ್ಲಾ ಶಹಬ್ಬಾಶ್ ಹೇಳಲೇಬೇಕು..

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಹೆಣ್ಣು ಮಕ್ಕಳಿಗೆ ಜನ್ಮನೀಡಿದ್ದೀಯಾ ಅಂತ ಅಮ್ಮನನ್ನು ಹಿಂಸಿಸುತ್ತಿದ್ದ ಅಪ್ಪ..! ಪುಟ್ಟ ಮಕ್ಕಳನ್ನು ಎತ್ತಿಕೊಂಡು ಉಟ್ಟ ಬಟ್ಟೆಯಲ್ಲೇ ರಾತ್ರೋ ರಾತ್ರಿ ಮನೆ ಬಿಟ್ಟ ತಾಯಿ..!

ಎಂದೂ ತೆರಿಗೆ ಕಟ್ಟದ ಗಲ್ಫ್ ಪ್ರಜೆಗಳು ಇನ್ಮುಂದೆ ತೆರಿಗೆಕಟ್ಟಲೇ ಬೇಕು..!

ಶ್ರೀಲಂಕಾದಲ್ಲಿ ಭಾರತದ ಧ್ವಜ ಹಾರಿಸಿದ ಕನ್ನಡಿಗ ರಘು..!

ಸಿನಿಮಾಕಥೆಯಂತಿದ್ದರೂ ಇದು ಸಿನಿಮಾ ಸ್ಟೋರಿಯಲ್ಲ..! ಇದು ಇಂಡಿಯಾ, ಸ್ವೀಡನ್ ಲವ್ ಸ್ಟೋರಿ..!

ಇಲ್ಲಿ ಉಳಿದುಕೊಳ್ಳೋಕೆ ಬೇಕಾಗಿದ್ದನ್ನೆಲ್ಲಾ ಸರ್ಕಾರವೇ ಕೊಟ್ಟು, ಸಂಬಳವನ್ನೂ ನೀಡುತ್ತೆ..!

ಭಾರತದ ಅಗ್ರ ಸೆಲೆಬ್ರಿಟಿ ಯಾರು ಗೊತ್ತಾ..? ಟಾಪ್ 10 ಪಟ್ಟಿಯಲ್ಲಿದ್ದಾಳೆ ನಮ್ಮ ಕನ್ನಡತಿ..!

ಬಿಇಡ್ ಗೆ ಸೇರಿದ್ದು 12,800 ವಿದ್ಯಾರ್ಥಿಗಳು, ಪಾಸ್ ಆದವರು 20,000..! ಇದು ಡಾ. ಬಿ.ಆರ್ ಅಂಬೇಡ್ಕರ್ ಯೂನಿವರ್ಸಿಟಿಯ ಕರ್ಮಕಾಂಡ..!

ಈ ವ್ಯಕ್ತಿಗೆ ನಿದ್ದೆ ಮಾಡುವುದೇ ಮರೆತುಹೋಗಿದೆ..! 40 ವರ್ಷದಿಂದ ನಿದ್ದೆಯೇ ಮಾಡಿಲ್ವಂತೆ ಈ ಭೂಪ..!