No menu items!
11.1 C
Munich
Wednesday, April 29, 2026

ಜೆಡಿಎಸ್ ನ ಜನತಾ ಮಿತ್ರ ಸಮಾರೋಪ ಸಮಾವೇಶಕ್ಕೆ ಸಿದ್ದತೆ

Must read

ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಇದೇ ತಿಂಗಳ 8 ನೇ ತಾರೀಖು ಜೆಡಿಎಸ್ ನಾ ಜನತಾ ಮಿತ್ರ ಸಮಾರೋಪ ಸಮಾವೇಶ ಜರುಗಿಲಿದೆ. ಈ ಸಂಬಂಧ ಬೆಂಗಳೂರಿನ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಪರಿಷತ್ ಸದಸ್ಯ ಟಿಎ ಶರವಣ ಮಾಹಿತಿ ನೀಡಿದ್ದಾರೆ. ಜೆಡಿಎಸ್ ನಾ ಜನತಾ ಮಿತ್ರ ಸಮಾರೋಪ ಸಮಾವೇಶ ಪಕ್ಷಕ್ಕೆ ಇರುವ ಜನಸಾಮಾನ್ಯರ ಬೆಂಬಲದ ಶಕ್ತಿ ಪ್ರದರ್ಶನ ಮಾತ್ರವಲ್ಲ. ಬೆಂಗಳೂರಿನ ಬದುಕುಗಳತ್ತ ಬೆಳಕು ಚೆಲ್ಲಿ ಆರಿವು ಮೂಡಿಸುವ ಕಾರ್ಯಕ್ರಮ. ಈ ಕಾರ್ಯಕ್ರಮಕ್ಕೆ ಪಕ್ಷದ ಬಹುತೇಕ ಎಲ್ಲ ಹಿರಿಯ ನಾಯಕರು ಮಾಜಿ ಸಿಎಂ ಕುಮಾರಸ್ವಾಮಿ ಆಗಮಿಸಲಿದ್ದಾರೆ ಎಂದು ಹೇಳಿದರು. ಇನ್ನೂ ದೇವೇಗೌಡರು ಆರೋಗ್ಯವಾಗಿ ಇದ್ದಾರೆ. ಆದರೆ ರಾಜಕೀಯ ನಾಯಕರು ದೇವೇಗೌಡರನ್ನು ಭೇಟಿ ಮಾಡುವ ಮೂಲಕ ಸಿಂಪತಿ ಗಿಟ್ಟಿಸಿಕೊಳ್ಳುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ. ನನ್ನ ಬಳಿಯೇ ದೇವೇಗೌಡರು ಎರಡು ಗಂಟೆ ಪಕ್ಷದ ಬಗ್ಗೆ ಮಾಹಿತಿ ಪಡೆದಿದ್ದಾರೆ. ನಾನೇ ಕಚೇರಿಗೆ ಬಂದು ಆಯುಧ ಪೂಜೆ ಮಾಡುತ್ತೇನೆ ಅಂತ ಹೇಳಿದ್ದಾರೆ. ಜನತಾ ಮಿತ್ರ ಕಾರ್ಯಕ್ರಮಕ್ಕೆ ದೇವೇಗೌಡರು ಬರುತ್ತಾರೆ ಅಂತ ಟಿಎ ಶರವಣ ಹೇಳಿದರು. ಇದೇ ವೇಳೆ ಬೆಂಗಳೂರಿನ ಮೂಲಭೂತ ಸೌಕರ್ಯದ ಬಗ್ಗೆ ಪ್ರಸ್ತಾಪಿಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article