ಈಗೀಗ ಚಿತ್ರರಂಗದಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗ್ತಾಯಿದೆ.. ಈ ಹಿಂದೆಯಷ್ಟೇ ಆಫ್ ಮೆಂಟ್ಲು ಚಿತ್ರದ ನಿರ್ಮಾಪಕ ಶಶಿಕುಮಾರ್ ತನ್ನ ಚಿತ್ರವನ್ನ ರಿಲೀಸ್ ಮಾಡೋಕೆ ಸಹಕಾರ ಸಿಗುತ್ತಿಲ್ಲ ಅಂತಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ರು.. ಈಗ ಮಲೆಯಾಳಂ ನಿರ್ಮಾಪಕರೊಬ್ಬರು ತನ್ನ ಚಿತ್ರದ ಪೂರ್ವಪ್ರದರ್ಶನ ನೋಡಿ ಸಾವಿಗೆ ಶರಣಾಗಿದ್ದಾರೆ.. ಅಜಯ್(29) ಆತ್ಮಹತ್ಯೆಗೆ ಒಳಗಾದ ವ್ಯಕ್ತಿ.. ಇದೇ ಮೊದಲ ಬಾರಿಗೆ ಸಿನಿಮಾ ನಿರ್ಮಾಣಕ್ಕೆ ಇಳಿದ ಅಜಯ್ ಮಲೆಯಾಳಂ `ಅವಳುಡೆ ರಾವುಗಳ್’ ಅನ್ನೋ ಚಿತ್ರವನ್ನ ಅಜಯ್ ಎಂಟರ್ಟೈನ್ಮೆಂಟ್ ಬ್ಯಾನರ್ನ ಅಡಿ ನಿರ್ಮಾಣ ಮಾಡಿದ್ರು.. ಶಾಹಿಲ್ ಮಹಮ್ಮದ್ ನಿರ್ದೇಶನ ಈ ಚಿತ್ರಕ್ಕಿದ್ರೆ, ಆಸಿಫ್ ಅಲಿ, ಉಣ್ಣಿ ಮುಕುಂದನ್ ಹನಿರೋಸ್ ಅಭಿನಯಿಸಿದ್ರು.. ಮೊದಲಿಗೆ ಚಿತ್ರದ ಕಥೆಯನ್ನ ಕೇಳಿ ಇಷ್ಟ ಪಟ್ಟು ಅಜಯ್ ಒಂಡವಾಳ ಹೂಡಿದ್ರು… ಇದಕ್ಕಾಗಿ ಈತ ಬರೋಬ್ಬರಿ 4 ಕೋಟಿ ಹಣವನ್ನ ಖರ್ಚು ಮಾಡಿದ್ರು.. ಆದ್ರೆ, ಚಿತ್ರ ಸಿದ್ದವಾದ ಬಳಿಕ ಪೂರ್ವಪ್ರದರ್ಶನ ನೋಡಿ ತಾನು ಅಂದುಕೊಂಡ ಮಟ್ಟದಲ್ಲಿ ತನ್ನ ಸಿನಿಮಾ ಇಲ್ಲ ಅನ್ನೋದು ಗೊತ್ತಾಗಿದೆ.. ಜೊತೆಗೆ ಈ ಚಿತ್ರ ರಿಲೀಸ್ ಆದ್ರೂ ಬಾಕ್ಸ್ ಆಫೀಸ್ನಲ್ಲಿ ಗೆಲ್ಲೋ ಸಂಶಯ ಅಜಯ್ ಅವರನ್ನ ಕಾಡಿದೆ.. ಈ ನಡುವೆ ಈ ಸಿನಿಮಾಗಾಗಿ ಸಾಲ ಪಡೆದು ಸಾಲದ ಸುಳಿಯಲ್ಲಿ ಸಿಲುಕಿದ್ದ ಈ ನಿರ್ಮಾಪಕ ಕೊನೆಯದಾಗಿ ಸಾವಿನ ಹಾದಿಯನ್ನ ಹಿಡಿದಿದ್ದಾರೆ.. ತನ್ನ ತಂದೆ-ತಾಯಿ ಮನೆಯಲ್ಲಿ ಇದ್ದಾಗಲೆ ಆತ್ಮಹತ್ಯೆಗೆ ಶರಣಾಗಿದ್ಧಾರೆ.. ಒಟ್ಟಿನಲ್ಲಿ ಚಿತ್ರರಂಗದಲ್ಲಿ ಇತ್ತೀಚಿಗೆ ಇಂತಹ ಅವಘಡಗಳು ಹೆಚ್ಚಾಗ್ತಿದ್ದು ತಮ್ಮ ಸಮಸ್ಯೆಗೆ ಉತ್ತರವಾಗಿ ಸಾವನ್ನ ಬೆನ್ನತ್ತಿ ಹೋಗ್ತಿರೋದು ವಿಪರ್ಯಾಸದ ಸಂಗತಿಯಲ್ಲದೆ ಮತ್ತೇನು..?
POPULAR STORIES :
ವಾರ್ ವಾರ್ ಗಿತ್ತಿಯರಲ್ಲ… ಓರಗಿತ್ತಿಯರು..!
ಅಪ್ಪಾಜಿ ಹುಟ್ಟುಹಬ್ಬಕ್ಕೆ ಅಪ್ಪು ಬರಲಿಲ್ಲ ಯಾಕೆ..?
ಮಂದಿನ ಮೆಟ್ರೊರೈಲ್ ಬರುತ್ತಲೇ ಜಿಗಿಯುವ ಯೋಚ್ನೆಯಲ್ಲಿದ್ದ ನನ್ನ ಕೈನ ಯಾರೊ ಹಿಂದಕ್ಕೆಳೆದರು..!
ಮಿಸ್ಡ್ ಕಾಲ್ ಗೆಳೆಯ..! ಅವನ ಸಾವಿನ ಜೊತೆ ಇವಳು ಒಂದಾದಳು..!?
ಮೋದಿ ದೇಹದಲ್ಲಿ ಅಹ್ಮದ್ ಖಾನ್ `ಆತ್ಮ..!!’ ಮೋದಿಯಲ್ಲ, ಇಂದಿರಾ ಗಾಂಧಿಯಿದ್ದಿದ್ದರೂ ಆಗುತ್ತಿತ್ತು ಮಾರಣಹೋಮ..!!
`ಸೆಕ್ಸ್’ ಸೈಟುಗಳ ಹಾಟ್ ವಿಚಾರ..!? ಅಶ್ಲೀಲ ಎಂಎಂಎಸ್ ಹೇಗೆಲ್ಲಾ ಸೃಷ್ಟಿಯಾಗುತ್ತೆ ಗೊತ್ತಾ..!?