ಒಂದು ಮನೆಯ ಎಲೆಕ್ಟ್ರಿಸಿಟಿ ಬಿಲ್ ಎಷ್ಟು ಬರಬಹುದು ಹೇಳಿ..? ಸಾವಿರ, ಎರಡು ಸಾವಿರ, ಮೂರು ಸಾವಿರ ಕೊನೆಗೆ 10 ಸಾವಿರ ಇರಬಹುದು. ಆದರೆ ಇಲ್ಲೊಬ್ಬ ಬಡಪಾಯಿಗೆ ಕೋಟಿಗಟ್ಟಲೇ ಕರೆಂಟ್ ಬಿಲ್ ಬಂದಿದ್ದು, ಎಲ್ಲರಲ್ಲೂ ಅಚ್ಚರಿಗೆ ಕಾರಣವಾಗಿದೆ. ಇಂಥದ್ದೊಂದು ಅಚ್ಚರಿಯ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ.
ಯೆಸ್.. ಜಮ್ಮು ಕಾಶ್ಮೀರದ ಪುರಾಣ್ ನಗರ್ ಎಂಬ ಗ್ರಾಮದ ರಾಮ್ ಕ್ರಿಷನ್ ಎಂಬಾತನಿಗೆ ಬೃಹತ್ ಮೊತ್ತದ ವಿದ್ಯುತ್ ಬಿಲ್ ಬಂದಿದೆ. ಇದರಿಂದ ಕ್ರಿಷನ್ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಇಷ್ಟಕ್ಕೂ ಜಮ್ಮು ಕಾಶ್ಮೀರದ ವಿದ್ಯುತ್ ಇಲಾಖೆಯವರು ಕಳೆದ ಸೆಪ್ಟೆಂಬರ್ ನಲ್ಲಿ ಕ್ರಿಷನ್ ನ ಕುಟುಂಬ ಬರೋಬ್ಬರಿ 39 ಕೋಟಿ ರೂಪಾಯಿ ಮೊತ್ತದ ವಿದ್ಯುತ್ ಬಳಕೆ ಮಾಡಿದೆ ಎಂದು ಬೃಹತ್ ಬಿಲ್ ಕಳುಹಿಸಿದೆ..!
ಕರೆಂಟ್ ಬಿಲ್ ಕಂಡು ಹೌಹಾರಿದ ಕ್ರಿಷನ್ `ನಮ್ಮದು ತೀರಾ ಬಡ ಕುಟುಂಬ. ನಾವು ಬಳಸುವುದೇ ತೀರಾ ಕಡಿಮೆ ವಿದ್ಯುತ್. ಆದರೆ ನಮಗೆ ಸುಮಾರು 39 ಕೋಟಿ ಮೊತ್ತದ ವಿದ್ಯುತ್ ಬಿಲ್ ಬಂದಿದೆ. ಇಷ್ಟು ದೊಡ್ಡ ಬಿಲ್ ದೇಶದ ಯಾವುದೇ ಕುಟುಂಬ ಕೇವಲ ಒಂದು ತಿಂಗಳಲ್ಲಿ ಬಳಸಲು ಸಾಧ್ಯವಿಲ್ಲ’ ಎಂದು ಕ್ರಿಷನ್ ಹೇಳಿದ್ದಾರೆ.
ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಎಚ್ಚೆತ್ತ ಪವರ್ ಡೆವಲಪ್ ಮೆಂಟ್ ಡಿಪಾರ್ಟ್ ಮೆಂಟ್ ನ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು, `ಬಿಲ್ಲಿಂಗ್ ಸಾಫ್ಟ್ ವೇರ್ ಮತ್ತು ಕೆಲ ತಾಂತ್ರಿಕ ದೋಷಗಳಿಂದ ಹೀಗಾಗಿದೆ ಎಂದಿದೆ. ಅಲ್ಲದೇ ಬಿಲ್ಲಿಂಗ್ ಸಾಫ್ಟ್ ವೇರ್ ನಿಂದಾದ ಈ ತಪ್ಪನ್ನು ತಿದ್ದಿಕೊಳ್ಳುತ್ತೇವೆ ಮತ್ತು ಮುಂದೆಂದೂ ಈ ರೀತಿಯ ತಪ್ಪು ಸಂಭವಿಸದಂತೆ ಎಚ್ಚರ ವಹಿಸುತ್ತೇವೆ ಎಂದು ಹೇಳಿದೆ.
ಪವರ್ ಡೆವಲಪ್ ಮೆಂಟ್ ಡಿಪಾರ್ಟ್ ಮೆಂಟ್ ನ ಹೇಳಿಕೆ ಕೇಳಿದ ಕೂಡಲೇ ಕ್ರಿಷನ್ ಕುಟುಂಬ ಬದುಕಿದೆಯಾ ಬಡಪಾಯಿ ಎಂದು ನಿಟ್ಟುಸಿರುಬಿಟ್ಟಿದೆ. ಏನೇ ಆಗಲೀ ಪವರ್ ಡಿಪಾರ್ಟ್ ಮೆಂಟ್ ನ ಈ ತಪ್ಪಿನಿಂದಾಗಿ ಒಂದು ಕುಟುಂಬ ತೀರಾ ಸಂಕಷ್ಟಕ್ಕೆ ಸಿಲುಕಿದ್ದಂತೂ ಸುಳ್ಳಲ್ಲ.
- ರಾಜಶೇಖರ ಜೆ
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಇದು ವೀರಯೋಧನ ವೀರಮರಣದ ಕಥೆ..! ಈ ವೀಡಿಯೋ ನೋಡಿದ ಮೇಲೆ ನೀವು ಶೇರ್ ಮಾಡದೇ ಇದ್ರೆ..!?
ವಿಶ್ವೇಶ್ವರ ಭಟ್ ಈಗ ವಿಶ್ವಾಕ್ಷರ ಭಟ್…! ಕನ್ನಡಕ್ಕೆ ಮತ್ತೊಂದು ದಿನಪತ್ರಿಕೆ ಹಾಗೂ ನ್ಯೂಸ್ ಚ್ಯಾನಲ್..!
ಚೆನ್ನೈನ 120 ರೂಪಾಯಿಗೂ, ಬೆಂಗಳೂರಿನ 480 ರೂಪಾಯಿಗೂ ಅಜಗಜಾಂತರ ವ್ಯತ್ಯಾಸ..!
ಈ ದೆಹಲಿ ಹುಡುಗನಿಗೆ ಗೂಗಲ್ ಕೊಟ್ಟ ಸಂಬಳ ಎಷ್ಟು ಗೊತ್ತಾ..? ಇದು ಕೋಟಿ ಸಂಬಳದ ಕಕ್ಕರ್ ಕಥೆ..!