ಬೆಂಗಳೂರಿನ ''ಸಾಂಖ್ಯಾ ಲ್ಯಾಬ್'' ಗೂಗಲ್ಲನ್ನೇ ಹಿಂದಿಕ್ಕಬಹುದು…?! ಹಳ್ಳಿ ಹಳ್ಳಿಗೂ ಪೃಥ್ವಿ ಚಿಪ್ ಮೂಲಕ ಇಂಟರ್ನೆಟ್..!

0
58

ಇಡೀ ವಿಶ್ವವೇ ಭಾರತವನ್ನು ನಿಬ್ಬೆರಗಾಗಿ ನೋಡ್ತಾ ಇದೆ..! ಭಾರತೀಯರು ಎಲ್ಲಾ ಕ್ಷೇತ್ರದಲ್ಲೂ ವಿಶ್ವಮಟ್ಟದಲ್ಲಿ ಕೀರ್ತಿ ಪತಾಕೆಯನ್ನು ಹಾರಿಸುತ್ತಿದ್ದೇವೆ..! ಮಾಹಿತಿ ತಂತ್ರಜ್ಞಾನ ಲೋಕದಲ್ಲಿ ಎತ್ತರಕ್ಕೆ ಬೆಳೆಯುತ್ತಿದ್ದೇವೆ..! ಪ್ರಧಾನಿ ಮೋದಿಯವರ ಮಹತ್ವಕಾಂಕ್ಷಿ ಕಾರ್ಯಕ್ರಮ ಡಿಜಿಟಲ್ ಇಂಡಿಯಾ ಯಶಸ್ವಿಯಾಗ್ತಾ ಇದೆ..! ಡಿಜಿಟಿಲ್ ಇಂಡಿಯಾ ನಿರ್ಮಾಣ ಆಗಿಯೇ ಆಗುತ್ತೆ..! ಹೀಗೆ ನಮ್ಮ ಭಾರತ ಪ್ರಜ್ವಲಿಸಲು ಕರ್ನಾಟಕ, ಕನ್ನಡಿಗರ ಕೊಡುಗೆ ಕೂಡ ಅಪಾರವಾದುದು..! ಹೆಮ್ಮೆಯ ಕನ್ನಡಿಗರು ಹೊಸ ಹೊಸ ತಂತ್ರಜ್ಞಾನ ಅನ್ವೇಷಣೆಯಲ್ಲಿ ಯಶಸ್ವಿಯಾಗುತ್ತಿದ್ದಾರೆ..!
ನಾನೀಗ ನಿಮಗೆ ನಮ್ಮ ಬೆಂಗಳೂರಿನ ಸಾಂಖ್ಯಾ ಲ್ಯಾಬ್ ಮಾಡಿರೋ ಅನ್ವೇಷಣೆ ಬಗ್ಗೆ ಹೇಳ್ತೀನಿ..! ಈ ಸ್ಟೋರಿ ಕೇಳ್ತಾ ಹೋದ್ರೆ ನಮ್ಮವರ ಬಗ್ಗೆ, ನಮ್ಮ ಕರ್ನಾಟಕದವರ ಬಗ್ಗೆ ನಿಮಗೆ ಖಂಡಿತಾ ಹೆಮ್ಮೆ ಅನಿಸುತ್ತೆ..! ಡಿಜಿಟಲ್ ಇಂಡಿಯಾಕ್ಕೆ ನಮ್ಮ ಕೊಡುಗೆ ಎಷ್ಟರಮಟ್ಟಿಗೆ ಇದೆ ಅನ್ನೋದು ತಿಳಿಯುತ್ತೆ..!
ನಮ್ಮ ಬೆಂಗಳೂರಿನ ಸಾಂಖ್ಯಾ ಲ್ಯಾಬ್ ತಂತ್ರಜ್ಞಾನ ಅನ್ವೇಷಣೆಯ ವಿಷಯದಲ್ಲಿ, ತಂತ್ರಜ್ಞಾನ ಲೋಕದ ದೈತ್ಯ ಉದ್ಯಮಗಳಾದ ಫೇಸ್ಬು ಬುಕ್, ಗೂಗಲ್, ಮೈಕ್ರೊಸಾಫ್ಟ್ ನಂತಹ ಸಂಸ್ಥೆಗಳಿಗಳನ್ನೇ ಹಿಂದಿಕ್ಕಬಹದು..?!
ನಂಬಲು ಕಷ್ಟವಾದ್ರೂ ನಾವಿದನ್ನು ನಂಬಲೇ ಬೇಕು..! ಬೆಂಗಳೂರು ಮೂಲದ ಸಾಂಖ್ಯಾ ಲ್ಯಾಬ್ ಅತೀ ಚಿಕ್ಕದಾದ ಚಿಪ್ ಒಂದನ್ನು ರೂಪಿಸಿದೆ. ಸ್ಟ್ಯಾಂಪ್ ಅಳತೆಯ ‘ಪೃಥ್ವಿ’ ಎಂಬ ಹೆಸರಿನ ಸಣ್ಣದಾದ ಚಿಪ್ನಿಂದ ಗ್ರಾಮೀಣ ಭಾರತಕ್ಕೆ ಸುಲಭವಾಗಿ ಇಂಟರ್ನೆಟ್ ಅಥವಾ ಅಂತರ್ಜಾಲ ವ್ಯವಸ್ಥೆಯನ್ನು ಒದಗಿಸಲು ಹೊರಟಿದೆ..! ಈ ಮೂಲಕ ಹಳ್ಳಿಗಳಿಗೆ ಅಂತರ್ಜಾಲ ವ್ಯವಸ್ಥೆ ಮಾಡೋದು ತುಂಬಾ ಅಂದ್ರೆ ತುಂಬಾನೇ ಸುಲಭವಾಗಿ ಬಿಟ್ಟಿದೆ..! ಬಳಕೆಯಾಗದ ತರಂಗಾಂತರ ಅಥವಾ ಸ್ಪೆಕ್ಟ್ರಂಗಳನ್ನು ಬಳಸಿಕೊಂಡು ಅಂತರ್ಜಾಲ ಕಿರಣಗಳನ್ನು ಗ್ರಾಮೀಣ ಪ್ರದೇಶಗಳಿಗೆ ಈ ಮೂಲಕ ಕಳುಹಿಸಲು ಸಾಧ್ಯವಾಗುತ್ತೆ..!
ಬಳಕೆಯಾಗದ ಸ್ಪೆಕ್ಟ್ರಂಗೆ ಟೆಕ್ನಿಕಲ್ ಅಥವಾ ತಾಂತ್ರಿಕವಾಗಿ ಟಿವಿ ವೈಟ್ ಸ್ಪೇಸ್ ಅಂತಾರೆ. ಈ ಟಿವಿ ವೈಟ್ ಸ್ಪೇಸ್ ಅನ್ನು ಬ್ರಾಡ್ ಬ್ಯಾಂಡ್ ವಿತರಣೆಗೆ ಹೆಚ್ಚಾಗಿ ಬಳಕೆ ಮಾಡಲಾಗುತ್ತೆ..! ನಮ್ಮ ದೇಶದಲ್ಲಿ ವ್ಯವಸ್ಥಿತವಾಗಿರೋ ಟಿವಿ ಚಾನಲ್ ಗಳು ಕಾರ್ಯಕ್ರಮಗಳ ಪ್ರಸಾರಕ್ಕೆ ಸಾಂಪ್ರದಾಯಿಕವಾದ ಟಿವಿ ಟವರ್ ಮತ್ತು ರೂಫ್ಟಾಪ್ ಆಂಟೆನಾಗಳನ್ನು ಬಳಸುತ್ತವೆ ಅಲ್ವಾ..? ಆದ್ದರಿಂದಲೇ ಇವುಗಳಿಂದ ಬಳಕೆಯಾಗದ ಸ್ಪೆಕ್ಟ್ರಂಗೆ ಟಿವಿ ವೈಟ್ ಸ್ಪೇಸ್ ಅಂತೀವಿ..! ಉದಾಹಣೆಗೆ ಪ್ರಸಾರ ಭಾರತೀಯ ಅಡಿಯಲ್ಲಿ ಬರೋ ಡಿಡಿ ಚಾನಲ್ ಗಳಲ್ಲಿ ಈ ಸ್ಪೆಕ್ಟ್ರಂ ಬಳಕೆ ಆಗ್ತಾ ಇಲ್ಲ..! ಇಂಥಾ ತರಂಗಾಂತರಗಳನ್ನು ಪೃಥ್ವಿ ಚಿಪ್ ಬಳಸಿಕೊಳ್ಳುತ್ತೆ..!
ಈ ಹೊಸ ಅನ್ವೇಷಿತ ತಂತ್ರಜ್ಞಾನವನ್ನು ಆದಷ್ಟು ಬೇಗ ಬಳಕೆಗೆ ತರಬೇಕೆಂಬುದೇ ಸಂಖ್ಯಾ ಲ್ಯಾಬಿನ ಸಂಸ್ಥಾಪಕರು ಹಾಗೂ ಸಿಇಒ ಆಗಿರುವ ಪರಾಗ್ ನಾಯಕ್ ಅವರ ಬಯಕೆಯಾಗಿದೆ..!
ಹೇಮತ್ ಮಲ್ಲಾಪುರ್ ಮತ್ತು ವಿಶ್ವಕುಮಾರ ಕಾಯರ್ಗದ್ದೆ ಅವರೊಡನೆ ಸೇರಿ 2007ರಿಂದ ಸಂಖ್ಯಾ ಲ್ಯಾಬ್ ಸಂಪರ್ಕ ಕ್ಷೇತ್ರದ ತಂತ್ರಜ್ಞಾನ ಅನ್ವೇಷಣೆಯಲ್ಲಿ ತೊಡಗಿಸಿಕೊಂಡಿದೆ. ಇವತ್ತು ಗ್ರಾಮೀಣ ಭಾಗಕ್ಕೂ ಅಂತರ್ಜಾಲ ಕಲ್ಪಿಸುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರೋದು ನಿಜಕ್ಕೂ ಪ್ರಶಂಸನೀಯ..!
ಮೇಘಧೂತ್ ವ್ಯವಸ್ಥೆಯಲ್ಲಿ ಅಳವಡಿಸಲಾಗಿರುವಂಥಾ ಬೇಸ್ ಸ್ಟೇಷನ್ ಮತ್ತು ಮೊಡೆಮ್ ಸಾಧನಗಳು, ಟಿವಿ ವೈಟ್ ಸ್ಪೇಸ್ ಬಳಸಿ ಗ್ರಾಮೀಣ ಭಾಗಗಳಿಗೆ 400-800 ಮೆಗಾಹರ್ಟ್ಸ್ ಸಾಮರ್ಥ್ಯದವರೆಗೂ ನಿಸ್ತಂತು ಬ್ರಾಡ್ ಬ್ಯಾಂಡ್ ಒದಗಿಸಲಾಗುತ್ತೆ ಎಂದು ಹೇಳಲಾಗುತ್ತಿದೆ..!
ಗ್ರಾಮೀಣ ಪ್ರದೇಶದ ಎತ್ತರ ಭಾಗದಲ್ಲಿ ಆಂಟೆನಾ ಇಟ್ಟರೆ 10-15ಕಿಲೋಮೀಟರ್ ದೂರದವರೆಗೆ ಇಂಟರ್ನೆಟ್ ಲಭ್ಯವಾಗುತ್ತೆ..! ಇದನ್ನು ಪ್ರಾಯೋಗಿಕವಾಗಿ ಕಾರ್ಯರೂಪಕ್ಕೆ ತರಲು ಪ್ರಯತ್ನಗಳು ನಡೆಯುತ್ತಿದೆ..! ಆದಷ್ಟುಬೇಗ ಈ ವ್ಯವಸ್ಥೆ ಕಾರ್ಯರೂಪಕ್ಕೆ ಬಂದರೆ ಹಳ್ಳಿಗಳೂ ಕೂಡ ನವಮಾಧ್ಯಮದ ಬಳಕೆಯನ್ನು ಮಾಡಬಹುದು..! ಇಂಟರ್ನೆಟ್ ಲೋಕದ ಪರಿಚಯ ಅವರಿಗೂ ಆಗುತ್ತೆ..!
ಇಂಥಾ ದೊಡ್ಡ ಅನ್ವೇಷಣೆ ಮಾಡಿರೋದು ನಮ್ಮ ಬೆಂಗಳೂರಿನ ಸಾಂಖ್ಯಾ ಲ್ಯಾಬ್ ಎಂಬುದನ್ನು ಹೆಮ್ಮೆಯ ವಿಷಯ..!

  • ಶಶಿಧರ ಡಿ ಎಸ್ ದೋಣಿಹಕ್ಲು

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಒಂದು ಕಾಲದಲ್ಲಿ ಆಕೆ ಬೀದಿ ಬೀದಿಗಳಲ್ಲಿ ಪತ್ರಿಕೆ ಸಂಗ್ರಹಿಸುತ್ತಿದ್ದಳು..! ಇಂದು ಕೋಟಿ ಕೋಟಿ ಆದಾಯಗಳಿಸುವ ಕಂಪನಿಯ ಮಾಲಿಕಳು..!

ಇದು ವೀರಯೋಧನ ವೀರಮರಣದ ಕಥೆ..! ಈ ವೀಡಿಯೋ ನೋಡಿದ ಮೇಲೆ ನೀವು ಶೇರ್ ಮಾಡದೇ ಇದ್ರೆ..!?

ವಿಶ್ವೇಶ್ವರ ಭಟ್ ಈಗ ವಿಶ್ವಾಕ್ಷರ ಭಟ್…! ಕನ್ನಡಕ್ಕೆ ಮತ್ತೊಂದು ದಿನಪತ್ರಿಕೆ ಹಾಗೂ ನ್ಯೂಸ್ ಚ್ಯಾನಲ್..!

ಚೆನ್ನೈನ 120 ರೂಪಾಯಿಗೂ, ಬೆಂಗಳೂರಿನ 480 ರೂಪಾಯಿಗೂ ಅಜಗಜಾಂತರ ವ್ಯತ್ಯಾಸ..!

ಮದುವೆಗೆ ಜಾಸ್ತಿ ಜನಕ್ಕೆ ಕರೆದರೆ ದಂಡ..! ಅದ್ದೂರಿ ಮದುವೆ ನಿಯಂತ್ರಣ ಕಾಯ್ದೆಯನ್ನು ಖಾಸಗಿಯಾಗಿ ವಿಧಾನ ಸಭೆಯಲ್ಲಿ ಮಂಡಿಸಿದ್ದಾರೆ.

ಈ ದೆಹಲಿ ಹುಡುಗನಿಗೆ ಗೂಗಲ್ ಕೊಟ್ಟ ಸಂಬಳ ಎಷ್ಟು ಗೊತ್ತಾ..? ಇದು ಕೋಟಿ ಸಂಬಳದ ಕಕ್ಕರ್ ಕಥೆ..!

ಹಣ ಇದ್ರೆ ಮಾತ್ರ ಜನ..! ಅಂದು ಅನ್ನದಾನ ಮಾಡಿದ್ದ ಕುಟಂಬ ಇವತ್ತು..?!

 

LEAVE A REPLY

Please enter your comment!
Please enter your name here