ಆ ಊರಿನ ರಸ್ತೆ ಸರಿಯಿಲ್ಲ. ಕಿತ್ತೋದ ರಸ್ತೆಯಲ್ಲಿ ಸಂಚಾರ ಕಷ್ಟ ಸಾಧ್ಯ..! ರಸ್ತೆಯಲ್ಲೆಲ್ಲಾ ಮಣ್ಣು.. ಬರೀ ಮಣ್ಣು..! ರಸ್ತೆಯೋ ಕೆಸರು ಹೊಂಡವೋ ಗೊತ್ತಾಗ್ತಾ ಇಲ್ಲ..! ಸಿಕ್ಕಾಪಟ್ಟೆ ಮಳೆ ಬೇರೆ..! ಒಟ್ನಲ್ಲಿ ರಸ್ತೆಯಲ್ಲಿ ಓಡಾಟ ಸಾಧ್ಯವೇ ಇಲ್ಲ..! ಆ ರಸ್ತೆಯಲ್ಲಿ ಹೋಗೋದು ಒಂದೇ ಕೆಸರು ಗದ್ದೆ ಓಟವೂ ಒಂದೇ..! ಇಂಥಾ ಕಿತ್ತೋದ ರಸ್ತೆಯನ್ನು ಹೊಂದಿರೋ ಊರಿನವರು ಯಾವ ರೀತಿ ಪ್ರತಿಭಟನೆ ಮಾಡ್ತಾರೆ..?! ರಸ್ತೆ ಸರಿಯಿಲ್ಲ, ಅಂತ ಸರ್ಕಾರಕ್ಕೆ, ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕ್ತಾರೆ..! ಜೋರ್ ಜೋರ್ ಆಗಿ ಪ್ರತಿಭಟನೆ ಮಾಡ್ತಾರೆ..! ಈ ಪ್ರತಿಭಟನೆ ಕೂಡ ನಾಲ್ಕೇ ನಾಲ್ಕುದಿನ..! ನಂತರ ಎಲ್ಲರೂ ಸುಮ್ಮನಾಗ್ತಾರೆ..! ಆದ್ರೆ ನೇಪಾಳದ ಧಾರ್ಚೂಲಾ ಜಿಲ್ಲೆಯ ಹಳ್ಳಿಯೊಂದರ ವ್ಯಕ್ತಿಯೊಬ್ಬರು ವಿಭಿನ್ನವಾಗಿ, ಆಕರ್ಷಕವಾಗಿ ಕೆಟ್ಟ ರಸ್ತೆಯ ವಿರುದ್ಧ ಪ್ರತಿಭಟಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ..!
ಆ ಶಾಂತಿಯುತ ಪ್ರತಿಭಟನಾಕಾರರ ಹೆಸರು ಪ್ರವೀಣ್ ಕೋಶಿಯರಿ. ಅವರೂರು ಬಲ್ವಕೋಟ್ನ ರಸ್ತೆ ಮಣ್ಣುಮಯವಾಗಿ ಬಿಟ್ಟಿದೆ..! ಅದು ರಸ್ತೆಯಂತೆ ಕಾಣ್ತಾ ಇಲ್ಲ..! ಉಳುಮೆ ಮಾಡಿದ ಹೊಲದಂತೆ ಕಾಣುತ್ತಿದೆ..! ಮಳೆ ಬೇರೆ ದಿನಂಪ್ರತಿ ಸುರಿಯುತ್ತದೆ..! ಮಣ್ಣು ಹದವಾಗಿದೆ..! ಈ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದ್ದರೂ ಸರಿ ಮಾಡಿಸುವ ಕೆಲಸ ಇನ್ನೂ ಆಗಿಲ್ಲ..! ಇದರಿಂದ ಬೇಸತ್ತ ಪ್ರವೀಣ್ ಅವರು ಭತ್ತದ ಸಸಿಗಳನ್ನು ಆ ರಸ್ತೆಯಲ್ಲಿ ನೆಟ್ಟು, ಆ ರಸ್ತೆಯನ್ನು ಕೃಷಿಭೂಮಿಯಂತೆ ಮಾಡಿಬಿಟ್ಟಿದ್ದಾರೆ..! ಹೀಗೆ ವಿಭಿನ್ನ ರೀತಿಯಲ್ಲಿ ಸರ್ಕಾರದ ವಿರುದ್ಧ ಪ್ರತಿಭಟಿಸಲು ಮುಖ್ಯ ಕಾರಣಗಳಲ್ಲಿ ಮೊದಲೇ ಹೇಳಿರುವಂತೆ ಕೆಸರಾದ ರಸ್ತೆ ಒಂದಾದರೆ, ಇನ್ನೊಂದು, ಕೃಷಿಯೋಗ್ಯ ಭೂಮಿಯನ್ನು ಅಭಿವೃದ್ಧಿ ಹೆಸರಲ್ಲಿ ಸರ್ಕಾರ ಕಿತ್ತುಕೊಂಡರೆ ಕೃಷಿ ಮಾಡುವುದಾದರೂ ಎಲ್ಲಿ..? ಎಂದು ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದು ಇವರ ಉದ್ದೇಶವಾಗಿದೆ.
- ಶಶಿಧರ ಡಿ ಎಸ್ ದೋಣಿಹಕ್ಲು
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಕನ್ನಡಿಗರು ನೋಡಲೇಬೇಕಾದ ಕಿರುಚಿತ್ರ `ಪ್ರೆಸೆಂಟ್ ಸಾರ್’ ಕನ್ನಡದ ಶಾಲೆಗಳ ಪರಿಸ್ಥಿತಿ ಏನಾಗಿದೆ ಅಂತ ನೀವೇ ನೋಡಿ..!
ನಾನು ಹೆಮ್ಮೆಯ ಕನ್ನಡಿಗ ತಂಡ ನಮ್ಮ ಮೆಟ್ರೋಗೆ ಶಂಕರ್ ನಾಗ್ ರವರ ಹೆಸರಿಡಬೇಕೆಂದು ಪಿಟಿಷನ್ ಶುರು ಮಾಡಿದೆ..!
ಈ ಗ್ರಾಮ ಇಡೀ ಜಗತ್ತಿಗೇ ಮಾದರಿ..! ಹೆಣ್ಣನ್ನು ದ್ವೇಷಿಸುವವರು ಇದನ್ನು ಓದಲೇಬೇಕು..!
ವರುಣರಾಯ ನಿಲ್ಲಿಸು ನಿನ್ನ ಆರ್ಭಟವ..! ತಮಿಳುನಾಡಿನ ಪರಿಸ್ಥಿತಿ ಹೇಗಿದೆ ಅಂತ ನೀವೆ ನೋಡಿ..!
ಅವನಿಗೆ ಉಗ್ರನೆಂಬ ಹಣೆಪಟ್ಟಿ ಕಟ್ಟುತ್ತಿದ್ದರು..! ಟೈಮ್ ಸರಿ ಇಲ್ಲ ಅಂದ್ರೆ ಅಷ್ಟೇ….
ಬಿಗ್ ಬಾಸ್ ಮನೆಯಿಂದ ಹೊರಬಂದ ವೆಂಕಟ್ ಏನಂದ್ರು ಗೊತ್ತಾ..?!
ಇಂಗ್ಲೆಂಡಿನಲ್ಲಿ `ಇಮ್ರಾನ್ ಖಾನ್’ರನ್ನು ಹೊಗಳಿದ ನರೇಂದ್ರ ಮೋದಿ..! ಆ ಇಮ್ರಾನ್ ಖಾನ್ ಯಾರುಗೊತ್ತೇ..?!
ಕರ್ನಾಟಕ ಸರ್ಕಾರಕ್ಕೆ ಜನಸಾಮಾನ್ಯನ ಪ್ರಶ್ನೆಗಳು..! ಕನಿಷ್ಟ ಕಾಕತಾಳೀಯ ಅಂತಾದ್ರೂ ಹೇಳಿ..! ಸಮಾಧಾನ ಮಾಡ್ಕೋತೀವಿ..!
ಊಟಕ್ಕೆ ಆರ್ಡರ್ ಮಾಡಿದವಳು ಬೆಂಗಳೂರನ್ನೇ ಬಿಟ್ಟು ಹೋಗಿದ್ದೇಕೆ..?
ಕನ್ನಡ ನಾಡು, ನುಡಿಯ ಬಗ್ಗೆ ಗೊತ್ತೇ ಇಲ್ಲದವರು ಬೆಂಗಳೂರಲ್ಲೇ ಇದ್ದಾರೆ..! ವರನಟ ಡಾ.ರಾಜಕುಮಾರ್ ಅವರನ್ನೇ ಗುರುತಿಸದವರು