No menu items!
12.4 C
Munich
Wednesday, April 29, 2026

ನಾನು ಹೆಮ್ಮೆಯ ಕನ್ನಡಿಗ ತಂಡ ನಮ್ಮ ಮೆಟ್ರೋಗೆ ಶಂಕರ್ ನಾಗ್ ರವರ ಹೆಸರಿಡಬೇಕೆಂದು ಪಿಟಿಷನ್ ಶುರು ಮಾಡಿದೆ..!

Must read

ಶಂಕರ್ ನಾಗ್, ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ, ನಿರ್ದೇಶಕ. ಸಿನಿಮಾ ಮಾತ್ರವಲ್ಲದೇ ರಾಜ್ಯದ ಅಭಿವೃದ್ಧಿಯ ಬಗ್ಗೆಯೂ ಅತ್ಯಂತ ಕಾಳಜಿ ಹೊಂದಿದ್ದವರು ಶಂಕರ್ ನಾಗ್. ಚಿಕ್ಕ ವಯಸ್ಸಿನಲ್ಲೇ ಅಪಘಾತದಲ್ಲಿ ಮೃತಪಟ್ಟ ಶಂಕರ್ ನಾಗ್ ಸಿನಿಮಾದ ಜೊತೆಜೊತೆಗೆ ಬೆಂಗಳೂರಿನ ಅಭಿವೃದ್ಧಿಯ ಬಗ್ಗೆ ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ಇವತ್ತು ಬೆಂಗಳೂರಲ್ಲಿ ಮೆಟ್ರೋ ಕೆಲಸಗಳೂ ಇನ್ನೂ ನಡೀತಾನೇ ಇವೆ. ಆದ್ರೆ ಆ ಕಾಲಕ್ಕೇ ಬೆಂಗಳೂರಿನ ಬೇರೆ ಬೇರೆ ಏರಿಯಾಗಳನ್ನು ಸಂಪರ್ಕಿಸಲು ಮೆಟ್ರೋ ಕನಸು ಕಂಡಿದ್ದರು ಶಂಕರ್ ನಾಗ್..! ದೂರದೃಷ್ಟಿಯಿತ್ತು, ಬೆಂಗಳೂರಿನ ಹೆಸರನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇರಿಸಬೇಕು ಎಂಬ ಕನಸು ಕಂಡ ಶಂಕರ್ ನಾಗ್ ಕನ್ನಡಿಗರನ್ನು ಅಗಲಿ ಇಪ್ಪತ್ತೈದು ವರ್ಷ ಕಳೆದರೂ ಇವತ್ತಿಗೂ ಜನಮಾನಸದಲ್ಲಿ ಅವರು ಅಜರಾಮರ..! ಮನೆಮನಗಳಲ್ಲಿ ಶಂಕರ್ ನಾಗ್ ಮನೆಮಾತಾಗಿದ್ದರೆ..! ಇವತ್ತು ನಮ್ಮ ಮೆಟ್ರೋ ಅಂತ ನಾವು ಬೀಗುತ್ತಿದ್ದರೂ ಆ ಕನಸು ಕಂಡು, ಅದಕ್ಕೋಸ್ಕರ ೩೦ ವರ್ಷಗಳ ಹಿಂದೆಯೇ ತಮ್ಮ ಪ್ರಯತ್ನ ಮಾಡಿದ್ದ ಅವರ ಹೆಸರೇ ಬೆಂಗಳೂರು ಮೆಟ್ರೋಗೆ ಸೂಕ್ತ..! ಕನ್ನಡಿಗರು ದಯವಿಟ್ಟು ಈ ವಿಚಾರದಲ್ಲಿ ಶಂಕರ್ ನಾಗ್ ಹೆಸರು ಸೂಚಿಸಿ ಪಿಟಿಶನ್ ಸಹಿ ಮಾಡಬೇಕಾಗಿ ಕೋರುತ್ತೇನೆ..

ಬೆಂಗಳೂರು ಮೆಟ್ರೋಗೆ `ಶಂಕರ್ ನಾಗ್’ ಹೆಸರಿಡಬೇಕು..!

Click here to sign :  http://chn.ge/1HXDImq

 

FB Page :  ನಾನು ಹೆಮ್ಮೆಯ ಕನ್ನಡಿಗ – Naanu Hemmeya Kannadiga

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article