ರಿಯಲ್ ವ್ಯಥೆಯೇ ಸಾಕಿದ ಗಿಣಿಯ ಕಥೆ

Date:

ಹಾಡಿನ ಜಾಡು ಹಿಡಿದು….

||ಸಂಗೀತಕ್ಕೆ ಮನಸೋಲದೇ ಇರೋರು ಇದ್ದಾರ? ಖಂಡಿತಾ ಇಲ್ಲ…!‌ ಕೆಲವು ಸಿನಿಮಾ ಹಾಡುಗಳನ್ನಂತು ಪದೇ ಪದೇ ಗುನುಗುತ್ತಿರುತ್ತೇವೆ. ಕೆಲವೊಂದು ಹಾಡುಗಳಿಗೆ ಕೇಳುಗರಾದ ನಾವು-ನೀವು ನಮ್ಮದೇ ಆದ ಅರ್ಥ ಕಂಡುಕೊಂಡಿರುತ್ತೇವೆ. ಆದರೆ, ಎಷ್ಟೋ ಹಾಡುಗಳ ಬಗ್ಗೆ ನಾವು ಅಂದುಕೊಂಡಿರೋದೇ ಬೇರೆ, ರಚನೆಕಾರರು ಬರೆಯುವಾಗ ಕಲ್ಪಿಸಿಕೊಂಡಿರೋದೇ ಬೇರೆ ಆಗಿರುತ್ತೆ..!
ನಾವಿಲ್ಲಿ ಕೆಲವೊಂದು ಕನ್ನಡ ಹಾಡುಗಳ ಹುಟ್ಟಿನ ಮೂಲ ಮತ್ತು ರಚನೆಗಾರರು ಯಾವ ಅರ್ಥದಲ್ಲಿ ಬರೆದಿದ್ದಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ…||

ಭಾಗ-10

ಮಾನಸ ಸರೋವರ

ಈಗಾಗ್ಲೇ ನಾವು ಯಾವ ಹಾಡಿನ ಬಗ್ಗೆ ಮಾತಾಡ್ತಾ ಇದೀವಿ ಅನ್ನೋದು ಗೊತ್ತಾಗಿದೆ ಅಲ್ವಾ?  ಹೌದು, ನೀನೆ ಸಾಕಿದ ಗಿಣಿ, ನಿನ್ನ ಮುದ್ದಿನ ಗಿಣಿ ಹದ್ದಾಗಿ ಕುಕ್ಕಿತಲ್ಲೋ.

ಯಾವುದೋ ಕಾಮಿಡಿ ಮಾತಿಗೆ ನಕ್ಕು, ಪ್ರೀತಿಯ ಕನಸು ಕಂಡವಳು, ನೆರಳಾಗಿ ಇದ್ದವಳು ಕಡೆಗೊಂದು ದಿನ ಬೇರೆ ನೆರಳಿನೆಡೆಗೆ ಕೈ ಚಾಚಿ ನಡೆದೇ ಬಿಡುವಳು. ಇಂಥಾ ಅದ್ಭುತ ಕಥೆಯ ಸಾರ ಮಾನಸ ಸರೋವರ ಸಿನ್ಮಾ. ಭಗ್ನ ಪ್ರೇಮಿ ತನ್ನ ಜೊತೆ ಇರುವಾಗಲೇ ಈ ಹಾಡನ್ನ ಬೇಕು ಅಂತಲೇ ಬರೆಸಿದ್ದು ನಿರ್ದೇಶಕ ಪುಟ್ಟಣ್ಣ ಕಣಗಾಲ್. ಪುಟ್ಟಣ್ಣ ಅವ್ರ ಗೆಜ್ಜೆಪೂಜೆ ಸಿನ್ಮಾದ ಚಿಕ್ಕ ರೋಲ್ ಮೂಲಕ ಇಂಡಸ್ಟ್ರಿಗೆ ಕಾಲಿಟ್ಟವರು ಆರತಿ. ದಿನ ಕಳಿತಾ ಇದ್ದಂತೆ ಇವ್ರಿಬ್ಬರ ನಡುವೆ ಕಣ್ಣಾ ಮುಚ್ಚಾಲೆಯಂತೆ ಅಫೇರ್ ಇತ್ತು ಅನ್ನೋದು ಇಡಿ ಇಂಡಸ್ಟ್ರಿಗೆ ಗೊತ್ತು. ಆರತಿಯನ್ನು ಖುಷಿಪಡಿಸಲು ಪುಟ್ಟಣ್ಣ ಸಾಕಷ್ಟು ಟ್ರೈ ಮಾಡ್ತಿದ್ರು.

ನನ್ನಂಥ ಸಾಧಾರಣ ಹುಡುಗನನ್ನು ಒಪ್ಪದೇ ಹೋದ್ರು ನನ್ನ ಟ್ಯಾಲೆಂಟ್‍ಗಾದ್ರೂ ಆಕೆ ಇಂಪ್ರೆಸ್ ಆಗ್ಲಿ ಅನ್ನೋ ಆಸೆ ಪುಟ್ಟಣ್ಣ ಅವ್ರಿಗಿತ್ತು. ಹೀಗಾಗಿ ಆರತಿಗಾಗಿಯೇ ಬಾರೆ ಬಾರೆ ಚೆಂದದ ಚೆಲುವಿನ ತಾರೆ, ಮಂದಾರ ಪುಷ್ಪವೂ ನೀನು, ಈ ಶತಮಾನದ ಮಾದರಿ ಹೆಣ್ಣು ಅನ್ನೋ ಹಾಡನ್ನೂ ಬರೆಸಿದ್ರು. ಆದ್ರೆ ಇದೆಲ್ಲದರ ಜೊತೆಗೆ ಕೊನೆಗೆ ಹಾವಿಗೂ ಹದ್ದಿಗೂ, ವಿಷಕ್ಕೂ ಆರತಿಯನ್ನ ಹೋಲಿಸಿದ ಹಾಡನ್ನೂ ಬರೆಸಿದ್ರು ಪುಟ್ಟಣ್ಣ. ಆರತಿ ತಮ್ಮನ್ನ ಬಿಟ್ಟು ಹೋದಾಗ ವೇದನೆಯಿಂದ ನರಳಾಡಿದ ಪುಟ್ಟಣ್ಣ ತಮ್ಮ ಆಪ್ತರಾದ ವಿಜಯನಾರಸಿಂಹ ಅವ್ರನ್ನ ಬರೋಕೆ ಹೇಳಿ ತಮ್ಮ ನೋವನ್ನೆಲ್ಲಾ ಹೇಳಿಕೊಂಡು ಕಣ್ಣೀರಿಟ್ಟರಂತೆ. ಪುಟ್ಟಣ್ಣ ಅವ್ರನ್ನ ಸಮಾಧಾನ ಮಾಡಿದ ವಿಜಯನಾರಸಿಂಹ, ಮಾನಸ ಸರೋವರ ಸಿನ್ಮಾಗಾಗಿ ಆರತಿಯನ್ನ ಹಾವಿಗೆ ಹದ್ದಿಗೆ ಹೋಲಿಸಿ ಹಾಡನ್ನ ಬರೆದರು. ಜೊತೆಗೆ ಈ ಹಾಡನ್ನ ಮೀಡಿಯಂ ಸ್ವರದಲ್ಲಿ ಹಾಡಿದ್ದ ಎಸ್.ಪಿ ಬಾಲಸುಬ್ರಹ್ಮಣ್ಯಂ ಅವ್ರಿಗೆ ಪುಟ್ಟಣ್ಣ ಹೇಳಿದ್ದು ಒಂದೇ ಮಾತು. ಒಂದು ಹೆಣ್ಣಿಂದ ಮೋಸ ಹೋದ ನೋವು ಎಲ್ರಿಗೂ ಗೊತ್ತಾಗಬೇಕು. ಹೀಗಾಗಿ ತಾರಕಕ್ಕೆ ಹೋಗಿ ಹಾಡಪ್ಪ ಅಂತ. ಆಗ ಹುಟ್ಟಿದ್ದೇ ನೀನೆ ಸಾಕಿದ ಗಿಣಿ ನಿನ್ನಾ ಮುದ್ದಿನ ಗಿಣಿ, ಹದ್ದಾಗಿ ಕುಕ್ಕಿತಲ್ಲೋ… ಯಾರ ಕುಟುಂಬಕ್ಕೂ ನೋಯಿಸುವ ಪದಗಳು ಇವಲ್ಲ. ಆದ್ರೆ ಅದ್ಬುತ ಹಾಡಿನ ಕಹಿ ಸತ್ಯ ಮಾತ್ರ.

-ಅಕ್ಷತಾ

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...