ಶೌಚಕ್ಕೆಂದು ತೆರಳಿದ ವಧು ತನ್ನ ಪ್ರಿಯಕರನ ಜೊತೆ ಪರಾರಿ ಆಗಿರುವ ಘಟನೆ ಉತ್ತರ ಪ್ರದೇಶದ ಕೊತವಾಲಿ ಕ್ಷೇತ್ರದ ಗುರಖಶ್ ಎಂಬಲ್ಲಿ ನಡೆದಿದೆ.
ಸಂಜೆ ವರನ ಕಡೆಯವರು ಮದುವೆಗೆ ಆಗಮಿಸಿದಾಗ ವಧುವಿನ ಕಡೆಯವರು ಆತ್ಮೀಯ ಸ್ವಾಗತ ಕೋರಿದ್ದಾರೆ. ನಂತರ ಮದುವೆ ಶಾಸ್ತ್ರಗಳು ಆರಂಭವಾಗಿವೆ. ವಧು -ವರರು ಹಾರವನ್ನೂ ಬದಲಾಯಿಸಿಕೊಂಡಿದ್ದಾರೆ. ಇನ್ನು ಸಪ್ತಪದಿ ತುಳಿಯ ಬೇಕಿತ್ತಷ್ಟೇ. ಆಗ ವಧು ಶೌಚದ ನೆಪದಲ್ಲಿ ಅಲ್ಲಿಂದ ಹೋಗಿದ್ದಾಳೆ. ಹೋದವಳು ವಾಪಸ್ಸು ಬರಲೇ ಇಲ್ಲ. ವರ ಅವಳಿಗಾಗಿ ಮಂಟಪದಲ್ಲಿ ಕಾದು ಕುಳಿತಿದ್ದ. ಅವಳು ಅವನ ಪ್ರಿಯಕರನ ಜೊತೆ ಪರಾರಿಯಾಗಿದ್ದಾಳೆ.
ಯುವತಿ ಗ್ರಾಮದ ಯುವಕನನ್ನು ಪ್ರೀತಿಸುತ್ತಿದ್ದರೂ ಮನೆಯವರು ಬಲವಂತದ ಮತ್ತೊಂದು ಮದುವೆಗೆ ನಿಶ್ಚಯ ಮಾಡಿದ್ದರು ಎನ್ನಲಾಗಿದೆ.