ಮದುವೆ ಆಯ್ತಾ..? ಡೈವೋರ್ಸ್ ಯಾವಾಗ..?!

Date:

ಈ ಡೈವೋರ್ಸ್ ಅನ್ನೋ ಪದ ಎಲ್ಲಿಂದ ಬಂತೋ ಗೊತ್ತಿಲ್ಲ. ಕಂಡ ಕಂಡ ಕಾರಣಕ್ಕೆ ಡೈವೋರ್ಸ್ ಕೊಡೋ ಹಾಗಾಗಿದೆ. ಅತಿ ಚಿಕ್ಕ ಚಿಕ್ಕ ವಿಷಯಕ್ಕೂ ಡೈವೋರ್ಸ್ ಕೊಟ್ಟ ಮಹನೀಯರು ನಮ್ಮ ಮುಂದಿದ್ದಾರೆ. ಬನ್ನಿ ಅಂಥಹ ಮಹಾನ್ ದಂಪತಿಗಳನ್ನು ನೋಡ್ಕೊಂಡ್ ಬರೋಣ.

ಟಿವಿ ನೋಡಿ ಡ್ಯಾನ್ಸ್ ಮಾಡಿದ್ದಕ್ಕೆ ಡೈವೋರ್ಸ್..!

ತನ್ನ ಪತ್ನಿ ಟಿವಿಯಲ್ಲಿ ಬರುತ್ತಿದ್ದ ಹಾಡನ್ನು ನೋಡಿ ಡ್ಯಾನ್ಸ್ ಮಾಡಿದಳು ಎಂಬ ಕಾರಣಕ್ಕೆ ಸೌದಿ ಅರೇಬಿಯಾದಲ್ಲೋರ್ವ ವ್ಯಕ್ತಿ ತನ್ನ ಪತ್ನಿಗೆ ವಿಚ್ಛೇದನ ನೀಡಿದ್ದಾನೆ. ಆ ಪತಿರಾಯನಿಗೆ ನ್ಯೂಸ್ ಚಾನೆಲ್, ಧಾರ್ಮಿಕ ಕಾರ್ಯಕ್ರಮಗಳೆಂದರೆ ಇಷ್ಟವಂತೆ. ಆಕೆಗೆ ಸಂಗೀತ ಕಾರ್ಯಕ್ರಮವೆಂದರೆ ಪ್ರಾಣವಂತೆ. ಅದು ಇವನಿಗೆ ಹಿಡಿಸಲಿಲ್ಲ. ಆದ್ದರಿಂದ ಡೈವೋರ್ಸ್ ಕೊಟ್ಟಿದ್ದಾನೆ ಅಷ್ಟೇ. ಅಲ್ಲದೇ ದಿನವೂ ಡ್ಯಾನ್ಸ್ ಮಾಡುತ್ತಿದ್ದ ಪತ್ನಿಗೆ ಸರಿಯಾಗಿಯೇ ವಾರ್ನಿಂಗ್ ಕೊಟ್ಟಿದ್ದ ಪತಿರಾಯ, ತನ್ನ ಪತ್ನಿಯ ಡ್ಯಾನ್ಸ್ ಕಾಟ ತಾಳಲಾಗದೇ ಡೈವೋರ್ಸ್ ನೀಡಿದ್ದಾನೆ. ಇಷ್ಟಕ್ಕೂ ಆ ಮಹಾತಾಯಿ ಎಷ್ಟೊಂದು ಭೀಕರವಾಗಿ ಡ್ಯಾನ್ಸ್ ಮಾಡಿರಬೇಡ..?!

ಟಾಯ್ಲೆಟ್ ಕಟ್ಟಲಿಲ್ಲವೆಂದು ಡೈವೋರ್ಸ್..!

ನಮ್ಮ ಭಾರತೀಯ ಹೆಣ್ಮಕ್ಕಳು ಇತ್ತೀಚೆಗೆ ಭಾಳ ಶಾಣ್ಯಾ ಆಗ್ತಿದ್ದಾರೆ. ಆಂಧ್ರ ಪ್ರದೇಶದ ಒಂದು ಗ್ರಾಮದಲ್ಲಿ ತನ್ನ ಪತಿ ಶೌಚಾಲಯ ನಿರ್ಮಿಸಿಲ್ಲ ಎಂದು ಸುನಿತಾ ದೇವಿ ಎಂಬ ಮಹಿಳೆ ವಿಚ್ಛೇದನ ನೀಡಿದ್ದಾಳೆ. ನನಗೆ ಬಯಲಲ್ಲಿ ಶೌಚ ಮಾಡಲು ಮುಜುಗರವಾಗುತ್ತದೆ. ಹೀಗಾಗಿ ನನ್ನ ಪತಿಗೆ ಶೌಚಾಲಯ ನಿರ್ಮಿಸಲು ಹೇಳುತ್ತಿದ್ದೆ. ಆದರೆ ಅವರು ನನ್ನ ಮಾತು ಕೇಳಿರಲಿಲ್ಲ. ಆದ್ದರಿಂದ ವಿಚ್ಛೇದನ ನೀಡಿದೆ ಅಂತಾಳೆ ಈ ಮಹಿಳೆ.

ಎಲ್ಐಸಿ ಪೇಪರ್ ಎಂದು ಡೈವೋರ್ಸ್ ಪೇಪರ್ಗೆ ಸಹಿ

ಕಾಲ ಎಷ್ಟು ಕೆಟ್ಹೋಯ್ತು ನೋಡಿ.. ಎಲ್ಐಸಿ ಪಾಲಿಸಿ ಮಾಡಿಸುತ್ತೇನೆ ಎಂದು ಖಾಲಿ ಹಾಳೆಯ ಮೇಲೆ ಸಹಿ ಮಾಡಿಸಿಕೊಂಡ ಪತಿರಾಯ, ಬಳಿಕ ಸಹಿಯಿಂದ ವಿಚ್ಛೇದನದ ಅಫಿಡವಿಟ್ಟು ಮಾಡಿಸಿ ಪತ್ನಿಗೆ ವಿಚ್ಛೇದನ ನೀಡಿ ವಂಚಿಸಿದ್ದ. ಅದೂ ನಮ್ಮ ಹುಬ್ಬಳ್ಳಿಯಲ್ಲಿ. ಇಷ್ಟಕ್ಕೂ ಅವನಿಗೆ ಮೊದಲ ಹೆಂಡತಿ ಇಷ್ಟವಿರಲಿಲ್ಲ. ಮತ್ತೊಂದು ಮದುವೆಯಾಗಲು ಸಿದ್ಧನಾಗಿದ್ದ. ಆದ್ದರಿಂದ ಇಂಥದ್ದೊಂದು ಕುತಂತ್ರ ಮಾಡಿದ್ದ. ಸಧ್ಯ ದಂಪತಿಗಳಿಬ್ಬರೂ ಕೋರ್ಟ್ ಗೆ ಸುತ್ತುತ್ತಿದ್ದಾರೆ.

ಅವನು ರೈತ ಆಗ್ತೀನಿ ಅಂದ, ಇವಳು ಡೈವೋರ್ಸ್ ಕೊಟ್ಟೇಬಿಟ್ಳು..!

ರೈತನಾಗಿ ಭೂಮಿ ತಾಯಿಗೆ ಸೇವೆ ಸಲ್ಲಿಸಬೇಕು ಎಂಬುದು ರೈತನ ಮಕ್ಕಳ ಆಶಯ. ಅದರಂತೆ ಎಂಜಿನಿಯರ್ ಆಗಿದ್ದ ವ್ಯಕ್ತಿಯೋರ್ವ, ತನ್ನ ವೃತ್ತಿ ಬಿಟ್ಟು ರೈತನಾಗುತ್ತೇನೆ ಎಂದಿದ್ದಕ್ಕೆ ಅವನ ಪತ್ನಿ ಡೈವೋರ್ಸ್ ನೀಡಿಬಿಟ್ಟಿದ್ದಳು. ಇಷ್ಟಕ್ಕೂ ಈ ಘಟನೆ ನಡೆದಿದ್ದು ನಮ್ಮ ಕೋಟೆ ನಾಡು ಚಿತ್ರದುರ್ಗದಲ್ಲಿ. ಡೈವೋರ್ಸ್ ಕೊಟ್ಟ ಆತುರಗಿತ್ತಿ ಮಹಿಳೆ ಬೆಂಗಳೂರಿನವಳು. ಅಲ್ಲದೇ ಆ ಮಹಿಳೆ ಡೈವೋರ್ಸ್ ನೀಡಿದ್ದಲ್ಲದೇ ತನ್ನ ಪತಿಯಿಂದ ಜೀವನಾಂಶ ಅಂತ 6 ಲಕ್ಷ ಪೀಕಿದ್ದಾಳೆ. ಹೇಗಿದ್ದಾರೆ ನೋಡಿ ನಮ್ಮ ಜನ.

ಗೊರಕೆ ಹೊಡೆದ ಪತಿಗೆ ಡೈವೋರ್ಸ್ ಬರೆ..!

ಗಂಡ ಹೆಂಡಿರ ಜಗಳ ಉಂಡು ಮಲಗುವ ತನಕ ಅಂತಾರೆ. ಆದರೆ ಈ ಪ್ರಕರಣದಲ್ಲಿ ಮಲಗಿದ ಮೇಲೆಯೇ ಹೆಂಡತಿಯ ಜಗಳ ಆರಂಭವಾಗಿದೆ. ಮಲಗಿದ ಮೇಲೆ ಪತಿರಾಯ ಸಿಕ್ಕಾಪಟ್ಟೆ ಗೊರಕ ಹೊಡೆಯುತ್ತಾನೆ ಎಂಬ ಬಾದರಾಯಣ ಕಾರಣ ನೀಡಿ ಮಹಿಳೆಯೊಬ್ಬಳು ವಿವಾಹ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಳು. ಅಲ್ಲದೇ ತನ್ನ ಪತಿ ಸರಿಯಾಗಿ ಡ್ರೆಸ್ ಮಾಡುವುದಿಲ್ಲ, ಸರಿಯಾಗಿ ಮಾತನಾಡುವುದಿಲ್ಲವೆಂಬ ಮತ್ತೆರೆಡು ಕಾರಣಗಳನ್ನೂ ನೀಡಿದ್ದಳು. ಆದರೆ ಪ್ರಕರಣ ಏನೇನಾಯ್ತೋ ಆ ದೇವರೇ ಬಲ್ಲ.
ನಾಯಿಗಿಂತಲೂ ಕಡೆಯಾದ ಪತಿ..!

ಪತ್ನಿಯ ಕಾಟ ತಾಳದೇ ಅಡುಗೆ ಮಾಡುವುದು, ಮುಸುರೆ ತೊಳೆಯುವುದನ್ನು ಕೇಳಿದ್ದೇವೆ. ಕೆಲವರನ್ನೂ ನೋಡಿದ್ದೇವೆ. ಆದರೆ ಇಲ್ಲೊಬ್ಬ ಪತಿಯ ಸ್ಥಿತಿ ನಾಯಿಗಿಂತಲೂ ಕಡೆಯಾಗಿದೆ. ನಾಯಿಯನ್ನು ತನ್ನ ಪತಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಹೆಂಡತಿ ಕುಳಿತಲ್ಲಿ, ನಿಂತಲ್ಲಿ, ಊಟ ಮಾಡುವಾಗ, ನಿದ್ರೆಗೆ ಶರಣಾಗುವಾಗಲೂ ನಾಯಿ ಇರಬೇಕು ಎಂದು ಬಯಸುತ್ತಿದ್ದಳು. ಆದ್ದರಿಂದ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪತಿಗೇ ವಿಚ್ಛೇದನ ನೀಡಲು ಮುಂದಾಗಿದ್ದಾಳೆ. ಇದರಿಂದ ಪತಿರಾಯ ಸಂಕಷ್ಟಕ್ಕೆ ಸಿಲುಕಿದ್ದು, ಅವನ ಸ್ಥಿತಿ `ನಾಯಿ’ಪಾಡು ಎನ್ನುವಂತಾಗಿದೆ.
ಹಿಂದೊಮ್ಮೆ ಮದುವೆಯ ಬಗ್ಗೆ ನಾನಾ ನಂಬಿಕೆಗಳಿದ್ದವು. ಅದಕ್ಕೆ ಅದರದ್ದೇ ಆದ ನಿಯಮಗಳಿದ್ದವು. ಆದರೆ ಈಗ ಮದುವೆ ಒಂದು ರೀತಿಯ ಫ್ಯಾಷನ್ ಆಗಿಬಿಟ್ಟಿದೆ. ಕಾಲ ಕೆಟ್ಟು ಕೆರ ಹಿಡಿದಿದೆ ಎಂಬುದನ್ನು ಸಾಬೀತು ಮಾಡುತ್ತಿದೆ.

  • ರಾಜಶೇಖರ ಜೆ

POPULAR  STORIES :

ಸಿಹಿ ಚಹಾದ ಹಿಂದಿನ ಕಹಿ ಸತ್ಯ…!

ಪ್ರೀತಿ ಇದ್ರೆ ಅನುಮಾನ ಬೇಡ.. ಅನುಮಾನ ಇದ್ರೆ ಪ್ರೀತಿ ಬೇಡ್ವೇ ಬೇಡ..!

ನೂರು ವರ್ಷದಲ್ಲಿ ಭಾರತೀಯ ಮಹಿಳೆ ಹೇಗೆಲ್ಲಾ ಬದಲಾದಳು ಗೊತ್ತಾ..?

ಜೀತದಾಳಾಗಿದ್ದವ ಇವತ್ತು ಡಾಕ್ಟರ್..!

ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ಜನಸಾಮಾನ್ಯನ ಲೈಫ್ ಚಿಂದಿ ಚಿತ್ರಾನ್ನ..! 

ಅವತ್ತು ಎಮ್ಮೆ ಕಾಯುತ್ತಿದ್ದವ ಇಂದು ಬಿಪಿಒ ಕಂಪನಿಯ ಮಾಲಿಕ..! ರಿಯಲ್ ಹೀರೋ..

ಇಟ್ ಹ್ಯಾಪನ್ಸ್ ಓನ್ಲಿ ಇನ್ ದುಬೈ..!

ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ “ಅತ್ತೆಪ್ರೀತಿ”

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...