No menu items!
12.4 C
Munich
Wednesday, April 29, 2026

ಸಿಹಿ ಚಹಾದ ಹಿಂದಿನ ಕಹಿ ಸತ್ಯ…!

Must read

ಬೆಳಿಗ್ಗೆ ಬೆಳಿಗ್ಗೇನೆ ಒಂದ್ ಕಪ್ ಟೀ ಕುಡಿದ್ರೆ ಮಾತ್ರ ಕೆಲಸ ಮಾಡೋಣ ಅಂತ ಅನಿಸೋದು..! ನಾವು-ನೀವ್ ಏನೋ ಆರಾಮಾಗಿ ಟೀ ಕುಡಿದು ನಮ್ ಪಾಡಿಗೆ ನಾವು ಕೆಲಸಕ್ಕೆ ಹೋಗ್ತೀವಿ..! ಅಬ್ಬಬ್ಬ ಅಂದ್ರೆ ನಾವ್ ಕುಡಿಯೋ ಟೀ ಗೆ ಮನೆಯಲ್ಲಾದ್ರೆ ಐದರಿಂದ ಆರು ರೂಪಾಯಿ ಖರ್ಚು ಬರಬಹುದು..! ಇನ್ನೂ ಅಬ್ಬಬ್ಬ ಅಂದ್ರೆ ಎಷ್ಟು ರೂಪಾಯಿ ಕೊಟ್ಟು ಟೀ ಕುಡಿತೀವಿ ಹೇಳಿ..? ಹತ್ತು, ಹದಿನೈದು, ಇಪ್ಪತ್ತು..! ಹೋಗ್ಲಿ ಹೆಚ್ಚೆಂದ್ರೆ ಒಂದು ೫೦ ರೂಪಾಯಿಯನ್ನ ಟೀಗಾಗಿ ಖರ್ಚು ಮಾಡ್ತೀವಾ..! ಆದ್ರೆ ಟೀ ಗೆ ಎಷ್ಟೇ ದುಡ್ಡು ಕೊಟ್ರು ಸಾಲಲ್ಲ ಕಣ್ರಿ..! ಅದಕ್ಕೆ ಬೆಲೆ ಕಟ್ಟೋಕೆ ಆಗಲ್ಲ ಸಾರ್..! ಸುಮ್ನೆ ಸುಮ್ನೆ, ಟೀ ಬೆಲೆ ಕಟ್ಟಲಾಗದ ಪಾನಿಯ ಅಂತ ಹೇಳ್ತಾ ಇಲ್ಲ ಸಾರ್..! ಸ್ವಲ್ಪ ಈ ಸ್ಟೋರಿ ಓದಿ..! ನಿಮ್ಗೆ ಅರ್ಥವಾಗುತ್ತೆ ಟೀ ಎಷ್ಟೊಂದು ಬೆಲೆಯುಳ್ಳದ್ದು ಅಂತ..!
ನಾವೇನೋ ಆರಾಮಾಗಿ ಕಾಲ್ ಮೇಲೆ ಕಾಲ್ ಹಾಕ್ಕೊಂಡು, ಪೇಪರ್ ಓದ್ತಾನೋ, ಟಿವಿ ನೋಡ್ತಾನೋ, ಸಿಗರೇಟ್ ಸೇದ್ತಾನೋ ಟೀ ಕುಡಿತೀವಿ..! ಆದ್ರೆ ಈ ಟೀ ಪ್ಲಾಂಟೇಶನ್ನಲ್ಲಿ ವರ್ಕ್ ಮಾಡೋರು ಎಷ್ಟೊಂದು ಕಷ್ಟಪಡ್ತಾರೆ ಗೊತ್ತೇನ್ರೀ..! ಅವರ ಸ್ಥಿತಿ ಎಷ್ಟೊಂದು ಶೋಚನೀಯವಾಗಿದೆ ಅಂತ ನಾವು-ನೀವು ಯಾವತ್ತಾದ್ರೂ ಯೋಚ್ನೆ ಮಾಡಿದ್ದೀವೇನ್ರೀ..? ಇಲ್ಲ, ನಾವ್ ಟೈಮ್ ಟು ಟೈಮ್ ಟೀ ಕುಡಿಯೋದನ್ನ ಮಾತ್ರ ಮಾಡ್ತೀವಿ..! ಆದ್ರೆ ಯಾವತ್ತೂ.. ಟೀ ಎಸ್ಟೇಟ್ ನಲ್ಲಿ ಹಗಲು ರಾತ್ರಿ ದುಡಿಯುವ ಕಾರ್ಮಿಕರ ಬಗ್ಗೆ ಕಿಂಚಿತ್ತೂ ಯೋಚ್ನೆ ಮಾಡಿಲ್ಲ..! ಅವರ ಸ್ಥಿತಿ ಹೆಂಗಿದೆ ಅಂತ ನೀವೇ ಓದಿ..! ಓದಿದ ಮೇಲೆ ಟೀ ಗೆ ಬೆಲೆಕಟ್ಟಿ..!

This website and its content is copyright of – © Thenewindiantimes.com 2015. All rights reserved.
Any redistribution or reproduction of part or all of the contents Without Permission or Courtesy in any form is prohibited.

ಅವರಿಗೆ ಸರಿಯಾದ ಮನೆಯೇ ಇಲ್ಲ..!
ಹೌದು ಸಾರ್, ಭಾರತದ ಅನೇಕ ಟೀ ಎಸ್ಟೇಟ್ ಗಳ ಕೆಲಸಗಾರರಿಗೆ ಸರಿಯಾದ ಮನೆಯೇ ಇಲ್ಲ..! ಮಳೆಗಾಲದಲ್ಲಂತೂ ಅವರಿಗೆ ಭಾರಿ ಕಷ್ಟ..! ಮನೆ ಛಾವಣಿ ಸೋರ್ತಾ ಇರುತ್ತೆ..! ಸೋರುವ ಛಾವಣಿ, ಆಗಲೋ ಈಗಲೋ ಬೀಳತ್ತದೆಯೇನೋ ಅನ್ನೋ ಬಿರುಕುಬಿಟ್ಟ, ತೇವಗೊಂಡ ಗೋಡೆಗಳು..! ಮುರಿದು ಬಿದ್ದ ಶೌಚಾಲಯಗಳು..! ಇವೆಲ್ಲಕ್ಕಿಂತ ಹೆಚ್ಚಾಗಿ ಇವರ ಮನೆಗೆಳಿಗೆ ಸಮರ್ಪಕ ವಿದ್ಯುತ್ತೇ ಇಲ್ಲ..! ನಿತ್ಯ ಕತ್ತಲೆಯಲ್ಲೇ ಬದುಕು..! ಅಷ್ಟೇ ಅಲ್ಲ ಸಾರ್ ನಾವೇನೋ ಅವರ ಶ್ರಮದಿಂದಾಗಿ ಟೀ ಕುಡಿತೀವಿ..! ಆದ್ರೆ ಅವರಿಗೆ ಕುಡಿಯಲು ಸರಿಯಾಗಿ ಒಳ್ಳೆಯ ನೀರೇ ಇಲ್ಲ..! ಮಳೆ ನೀರನ್ನೇ ಕುಡಿದು ಕಾಲಕಳೆಯುವವರೂ ಇದ್ದಾರೆ..!

ಅಪೌಷ್ಠಿಕತೆಯಿಂದ ನರಳುತ್ತಿರುವ ಕಾರ್ಮಿಕರು..!
ಅಸ್ಸಾಂನ ವೈಧ್ಯಕೀಯ ಕಾಲೇಜೊಂದರ ನಿರ್ದೇಶಕರೇ ಹೇಳುವಂತೆ ಟೀ ಎಸ್ಟೇಟ್ ನಲ್ಲಿನ ಕಾರ್ಮಿಕರ ಪೈಕಿ 10 ರೋಗಿಗಳಲ್ಲಿ 9 ರೋಗಿಗಳು ಅಪೌಷ್ಟಿಕತೆಯಿಂದಲೇ ಬಳಲುತ್ತಿರುವವರಾಗಿದ್ದಾರೆ..! ಏನ್ ಸಾರ್.., ಕಷ್ಟಪಟ್ಟು ದುಡಿತಾರೆ.., ಹಗಲು-ರಾತ್ರಿಯನ್ನೂ ಲೆಕ್ಕಿಸದೆ ಬೆವರು ಸುರಿಸ್ತಾರೆ..! ಇಷ್ಟಾದ್ರೂ ಒಳ್ಳೆಯ ಆಹಾರ ತಿನ್ನಲು ಆಗಲ್ಲ ಅಂದ್ರೆ..? ಹೊಟ್ಟೆಪಾಡಿಗಾಗಿಯೇ ದುಡಿಯುವುದಲ್ಲವೇ..? ಈ ಕಾರ್ಮಿಕರು ಅಪೌಷ್ಠಿಕ ಆಹಾರ, ಕೆಮಿಕಲ್ ಮಿಶ್ರಿತ ಆಹಾರ.., ಮೊದಲಾದವುಗಳಿಂದ ಅತಿಸಾರ, ಶ್ವಾಸಕೋಶದ ಸೋಂಕು, ಚರ್ಮದ ಕಾಯಿಲೆ, ಕ್ಷಯ(ಟಿಬಿ)ಯಂತಹ ಅನೇಕ ರೋಗಗಳಿಗೆ ತುತ್ತಾಗುತ್ತಿದ್ದಾರೆ..! ಇಷ್ಟೆಲ್ಲಾ ನರಳಾಟದಲ್ಲಿ ಕೆಲಸ ಮಾಡುತ್ತಿದ್ದರೂ ಸಹ ಅವರು ಪಡೆಯುವ ಕೂಲಿ ತೀರಾ ಕಡಿಮೆ..! ಲಭ್ಯ ಮಾಹಿತಿ ಪ್ರಕಾರ ಅಸ್ಸಾಂನ ಟೀ ಎಸ್ಟೇಟ್ ನಲ್ಲಿ ದಿನಕ್ಕೆ ಕೇವಲ 115 ರೂಪಾಯಿಗಳನ್ನು ಕಾರ್ಮಿಕರು ಪಡೆಯುತ್ತಾರೆ..! ಕನಿಷ್ಟವೇತನ 177ರೂಪಾಯಿಗಳಿದ್ದರೂ ಅದಕ್ಕೂ ಅತೀ ಕಡಿಮೆ ವೇತನ ನೀಡುತ್ತಿರುವುದು ಯಾವ ನ್ಯಾಯ ಸ್ವಾಮಿ..?

ಬಾಲಕಾರ್ಮಿಕರು..!
ಟೀ ತೋಟಗಳಲ್ಲಿ ಇಂದಿಗೂ 15 ವರ್ಷಕ್ಕೂ ಕಡಿಮೆ ವಯಸ್ಸಿನ ಅನೇಕ ಮಕ್ಕಳು ಕೆಲಸ ಮಾಡುತ್ತಿದ್ದಾರೆ..! ಅದೂ ಫುಲ್ ಟೈಮ್ ಕೆಲಸಗಾರರಾಗಿ..! ಇವರಿಗೆ ಶಿಕ್ಷಣ ಇಲ್ಲದೇ ಹೋದರೆ ಮುಂದಿನ ಪೀಳಿಗೆಯೂ ಇವರಂತೆಯೇ ಕಷ್ಟಪಡ ಬೇಕಲ್ಲವೇ..? ನೆನಪು ಮಾಡಿಕೊಳ್ಳಿ, ನಾವೇನೋ ಬಿಸಿಬಿಸಿ ಟೀ ಕುಡೀತಾ ಇರ್ತೀವಿ..! ನಾವು ಕುಡಿಯೋ ಒಂದೇ ಒಂದು ಲೋಟ ಟೀಗಾಗಿ ಎಷ್ಟೋ ಮಕ್ಕಳು ಓದುವುದನ್ನೂ ಬಿಟ್ಟು ದುಡಿಯುತ್ತಿದ್ದಾರೆ..! www.tnit.in
ಹೀಗೆ ಟೀ ಎಸ್ಟೇಟ್ ಕೆಲಸಗಾರರು ಕಷ್ಟದ ಜೀವನ ನೆಡೆಸುತ್ತಿದ್ದಾರೆ..! ಈ ಬಗ್ಗೆ ಯಾರಿಗೂ ಸರಿಯಾಗಿ ಗೊತ್ತೇ ಇಲ್ಲ..! ಎಸ್ಟೇಟ್ ಮಾಲಿಕರಿಗೇ ಲಾಭವೇ ಮುಖ್ಯ ವಿನಃ ಕೆಲಸಗಾರರ ಬದುಕು ಏನಾದರೂ ಚಿಂತೆ ಇಲ್ಲ..! ಅಂದಹಾಗೆ ಇಷ್ಟೆಲ್ಲಾ ತೊಂದರೆಯನ್ನು ಅನುಭವಿಸುತ್ತಿರುವವರು “ಪಿಜಿ ಟಿಪ್ಸ್” “ಟೆಟ್ಲಿ” “ಟ್ವಿನ್ನಿಂಗ್ಸ್” ಮೊದಲಾದ ಪ್ರಸಿದ್ಧ ಟೀ ಬ್ರಾಂಡ್ ಗಳಿಗೆ ಟೀ ಕಚ್ಚಾ ಉತ್ಪನ್ನಗಳನ್ನು ಒದಗಿಸುವ ಅಸ್ಸಾಂನ ಟೀ ಎಸ್ಟೇಟ್ ಗಳಲ್ಲಿ..! ಇಂತಹ ಪ್ರತಿಷ್ಠಿತ ಬ್ರಾಂಡ್ ಗಳಿಗಾಗಿಯೇ ದುಡಿಯುವ ಟೀ ಎಸ್ಟೇಟ್ ಕಾರ್ಮಿಕರ ಕತೆಯೇ.. ಇಷ್ಟೊಂದು ಕರುಣಾಜನಕವಾಗಿರುವಾಗ..,ಬೇರೆ ಬೇರೆ ಎಸ್ಟೇಟ್ ಗಳ ಕೆಲಸಗಾರರ ಸ್ಥಿತಿಯನ್ನೂ ಒಮ್ಮೆ ಕಲ್ಪಿಸಿಕೊಳ್ಳಿ..! ಇನ್ನೊಂದು ಅಂಶ ಗಮನಿಸಲೇ ಬೇಕು..! ಈ ಎಸ್ಟೇಟ್ ಗಳಲ್ಲಿ ಕೆಲಸ, ಅಲ್ಲಿನ ಪರಿಸ್ಥಿತಿ, ವಾತಾವರಣ ಮೊದಲಾದವುಗಳ ಚಿತ್ರೀಕರಣಕ್ಕೆ ಅವಕಾಶ ಕೊಡುವುದೇ ಇಲ್ಲ..! ಮಾಧ್ಯಮದವರನ್ನಂತೂ ಬಳಿಯೇ ಬಿಟ್ಟುಕೊಳ್ಳುವುದಿಲ್ಲ..! ಇಷ್ಟೆಲ್ಲಾ ಮಾಹಿತಿಯನ್ನು ನೀಡಿದ ಬಿಬಿಸಿ ಮತ್ತು ರೇಡಿಯೋ4 ಸಂಸ್ಥೆಯ ವರದಿಗಾರರೇ ಈ ಮಾಹಿತಿಯನ್ನೂ ತಿಳಿಸಿದ್ದಾರೆ…!
ಈಗ ನೀವೇ ಹೇಳಿ ಒಂದು ಕಪ್ ಟೀ ಗೆ ಎಷ್ಟು ರೂಪಾಯಿ ಕೊಡ್ತೀರಿ..?

After Watching Video, You will Realize The True Price Of A Cup Of Chai

Courtesy : BBC

  • ಶಶಿಧರ ಡಿ ಎಸ್ ದೋಣಿಹಕ್ಲು

POPULAR  STORIES :

ಪ್ರೀತಿ ಇದ್ರೆ ಅನುಮಾನ ಬೇಡ.. ಅನುಮಾನ ಇದ್ರೆ ಪ್ರೀತಿ ಬೇಡ್ವೇ ಬೇಡ..!

ನೂರು ವರ್ಷದಲ್ಲಿ ಭಾರತೀಯ ಮಹಿಳೆ ಹೇಗೆಲ್ಲಾ ಬದಲಾದಳು ಗೊತ್ತಾ..?

ಜೀತದಾಳಾಗಿದ್ದವ ಇವತ್ತು ಡಾಕ್ಟರ್..!

ಲೋಡ್ ಶೆಡ್ಡಿಂಗ್ ಹೊಡೆತಕ್ಕೆ ಜನಸಾಮಾನ್ಯನ ಲೈಫ್ ಚಿಂದಿ ಚಿತ್ರಾನ್ನ..! 

ಅವತ್ತು ಎಮ್ಮೆ ಕಾಯುತ್ತಿದ್ದವ ಇಂದು ಬಿಪಿಒ ಕಂಪನಿಯ ಮಾಲಿಕ..! ರಿಯಲ್ ಹೀರೋ..

ಇಟ್ ಹ್ಯಾಪನ್ಸ್ ಓನ್ಲಿ ಇನ್ ದುಬೈ..!

ಸಿಸಿಟಿವಿ ಬಯಲು ಮಾಡ್ತು ಹೆಂಡತಿಯ “ಅತ್ತೆಪ್ರೀತಿ”

ಇಡೀ ಊರನ್ನೇ ಶ್ರೀಮಂತ ಮಾಡಿದ ವ್ಯಕ್ತಿಯ ಕಥೆ..!

ಬಾರ್ ಸಪ್ಲೇಯರ್ ಈಗ ಐಪಿಎಸ್ ಆಫೀಸರ್.!

 ಅವನು ಐಎಎಸ್ ಆಫೀಸರ್…ಇವನು ಗ್ರೇಟ್ ಕ್ರಿಕೆಟರ್…!

ನಿಮ್ ಮನೇಲೂ ಕರೆಂಟಿಲ್ವಾ..? ಏನೂ ಮಾಡಕ್ಕಾಗಲ್ಲ… ಈ ವೀಡಿಯೋ ನೋಡಿ ನಕ್ಕುಬಿಡಿ..!

ಮಂಗ ಓಡಿಸೋದು ಹೇಗೆ..? ಅದ್ಭುತ ಟೆಕ್ನಾಲಜಿ..! ಈ ಕನ್ನಡದ ವೀಡಿಯೋ ಸೂಪರ್ರಪ್ಪ ಸೂಪರ್ರು..!

ಒಬ್ಬ ಶಿಕ್ಷಕನಾಗಿದ್ದವರ ಇವತ್ತಿನ ಆಸ್ತಿ ರೂ.1653686250000

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article