ಸಿ.ಎಂ. ತವರಲ್ಲೇ ನಡೆದಿದೆ ಮರ್ಯಾದ ಹತ್ಯೆ..!

Date:

ಮೈಸೂರಿನ ಕೆ.ಆರ್ ನಗರ ತಾಲೂಕಿನ ನಾಡಪ್ಪನ ಹಳ್ಳಿಯಲ್ಲಿ ನಡೆದಿರೋ ಈ ಮರ್ಯಾದ ಹತ್ಯೆ ತಡವಾಗಿ ಬೆಳಕಿಗೆ ಬಂದಿದೆ. ಹೌದು ಸುಮಾರು ಒಂದು ವರ್ಷದ ನಂತರ ಗ್ರಾಮದ ವ್ಯಕ್ತಿಯೋರ್ವ ಬರೆದ ಮೂಕರ್ಜಿಯಿಂದ ಈ ಘಟನೆ ಬಹಿರಂಗವಾಗಿದೆ.

ಈ ಗ್ರಾಮದ 15 ವರ್ಷದ ಸುನಿತ ಬ ಬಾಲಕಿಯೇ ಮರ್ಯಾದೆ ಹತ್ಯೆಗೀಡಾದ ದುರ್ದೈವಿ. ಸುನಿತ ಗ್ರಾಮದ ಸಂಬಂಧಿಕರ ಯುವಕನೊಬ್ಬನನ್ನ ಪ್ರೀತಿಸುತ್ತಿದ್ದಳು. ಆದರೆ ಆ ಯುವಕ ಪ್ರೀತಿಯ ನಾಟಕವಾಡಿ, ಮದುವೆಗೂ ಮುಂಚೆಯೇ ಆ ಬಾಲಕಿಯನ್ನ ಗರ್ಭಿಣಿ ಮಾಡಿ ನಂಬಿಸಿ ಕೈಕೊಟ್ಟಿದ್ದ.

ಇದರಿಂದ ಮರ್ಯಾದೆಗೆ ಹೆದರಿದ ಸುನಿತಾಳ ತಂದೆ ಪುಟ್ಟರಾಜ ಶೆಟ್ಟಿ ಹಾಗೂ ತಾಯಿ ಲೀಲಮ್ಮ ಮಗಳನ್ನು ಹೊಲದ ಹತ್ತಿರ ಕರದೊಯ್ದು ಹೊಡೆದು ಸಾಯಿಸಿ, ಸತ್ತ ಮಗಳ ಶವದ ಪಕ್ಕ ವಿಷದ ಬಾಟಲಿಯಿಟ್ಟು ಮಗಳು ಹೊಟ್ಟೆ ನೋವು ಎಂದು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದೇ ಗ್ರಾಮಸ್ಥರೆಲ್ಲರಿಗೂ ಮರಳು ಮಾಡಿ ಜನವರಿ 2015 ರಂದು ಸುಟ್ಟು ಹಾಕಿದ್ದರು.

ನಾಡಪ್ಪನ ಹಳ್ಳಿಯಲ್ಲಿ ತನ್ನ ಮಗಳನ್ನೆ ಹತ್ಯೆ ಮಾಡಿದ್ದಾನೆ ಎಂದು ಮೈಸೂರಿನ ಪೋಲಿಸ್‌ ವರಿಷ್ಠಾಧಿಕಾರಿ ಕಚೇರಿಗೆ ಮೂಖರ್ಜಿಯೊಂದು ಬಂದಿತ್ತು. ಇದನ್ನ ಆಧಾರವಾಗಿಟ್ಟುಕೊಂಡು ಪೊಲೀಸ್ ವರಿಷ್ಠಾಧಿಕಾರಿ ಆದೇಶದ ಮೇರೆಗೆ ಸುನಿತಾಳ ತಂದೆ ಪುಟ್ಟರಾಜಶೆಟ್ಟಿಯನ್ನು ವಿಚಾರಣೆಗೊಳಪಡಿಸಿದಾಗ ಆಕೆಯ ತಂದೆ ಮರ್ಯಾದೆಗೆ ಹೆದರಿ ತನ್ನ ಮಗಳನ್ನ ತಾನೇ ಹತ್ಯೆ ಮಾಡಿರೋ ವಿಚಾರವನ್ನ ಬಾಯಿ ಬಿಟ್ಟಿದ್ದಾನೆ.

ಒಟ್ಟಾರೆ ಒಂದು ವರ್ಷದ ಹಿಂದೆ ಸುನಿತಾ ಶವವೊಂದಿಗೆ ಸುಟ್ಟುಹೋಗಿದ್ದ ಸತ್ಯ ಯಾರೋ ಬರೆದ ಮೂಖರ್ಜಿಯಿಂದ ಬೆಳಕಿಗೆ ಬಂದಿದೆ. ಈ ಸಂಬಂಧ ಕೆ.ಆರ್ ನಗರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

  • ಶ್ರೀ

POPULAR  STORIES :

ಜಗ್ಗುದಾದ ಮೂರು ದಿನದಲ್ಲಿ ಕೊಳ್ಳೆ ಹೊಡೆದ ಹಣವೆಷ್ಟು ಗೊತ್ತಾ..?

ದುಡ್ಡಿಲ್ಲ ಕಾಸಿಲ್ಲ ನೀವೆ ಒಂದು ಏರ್ ಕೂಲರ್‍ನ ಸಿದ್ದ ಮಾಡಬಹುದು..!!

ಕಿಸ್ಸಿಂಗ್ ಹಿಂದಿರೋ ಆರೋಗ್ಯ ರಹಸ್ಯವೇನು..????

ಕನ್ನಡದ ಖ್ಯಾತ ನಟ ಭಿಕ್ಷುಕನ ಗೆಟಪ್‍ನಲ್ಲಿ ಸಂಪಾದಿಸಿದ್ದು ಎಷ್ಟು ಗೊತ್ತಾ..?

ಎಚ್ಚರ : `ಸಿಮ್ ಕ್ಲೊನಿಂಗ್’ ನಿಮ್ಮನ್ನು ದಿವಾಳಿ ಮಾಡಬಹುದು! ಮುಂಬೈ ಮಹಿಳೆ ಕಳೆದುಕೊಂಡ ಹಣ ಎಷ್ಟು ಗೊತ್ತಾ?

ವಿರಾಟ್ ಕೊಹ್ಲಿ ವೆಡ್ಸ್ ಅನುಷ್ಕಾಶರ್ಮಾ…!

ಮೊದಲ ಪಂದ್ಯದಲ್ಲೆ ರನ್ ಹೊಳೆ ಹರಿಸಿದ ನಮ್ಮ 5 ಆಟಗಾರರಿವರು..!

181 ಸದಸ್ಯರಿರುವ ವಿಶ್ವದ ದೊಡ್ಡಕುಟುಂಬ! ಈ ಕುಟುಂಬದ ಎಲ್ಲಾ ಸದಸ್ಯರಿಗೂ ಒಂದೇ ನಿವಾಸ!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...