ತಪ್ಪು ಮಾಡದವ್ರು ಯಾರವ್ರೆ ಗುರು…? ಅಂದ್ರು ಮನೋಹರ್ರು…

Date:

ಹಾಡಿನ ಜಾಡು ಹಿಡಿದು….

||ಸಂಗೀತಕ್ಕೆ ಮನಸೋಲದೇ ಇರೋರು ಇದ್ದಾರ? ಖಂಡಿತಾ ಇಲ್ಲ…!‌ ಕೆಲವು ಸಿನಿಮಾ ಹಾಡುಗಳನ್ನಂತು ಪದೇ ಪದೇ ಗುನುಗುತ್ತಿರುತ್ತೇವೆ. ಕೆಲವೊಂದು ಹಾಡುಗಳಿಗೆ ಕೇಳುಗರಾದ ನಾವು-ನೀವು ನಮ್ಮದೇ ಆದ ಅರ್ಥ ಕಂಡುಕೊಂಡಿರುತ್ತೇವೆ. ಆದರೆ, ಎಷ್ಟೋ ಹಾಡುಗಳ ಬಗ್ಗೆ ನಾವು ಅಂದುಕೊಂಡಿರೋದೇ ಬೇರೆ, ರಚನೆಕಾರರು ಬರೆಯುವಾಗ ಕಲ್ಪಿಸಿಕೊಂಡಿರೋದೇ ಬೇರೆ ಆಗಿರುತ್ತೆ..!
ನಾವಿಲ್ಲಿ ಕೆಲವೊಂದು ಕನ್ನಡ ಹಾಡುಗಳ ಹುಟ್ಟಿನ ಮೂಲ ಮತ್ತು ರಚನೆಗಾರರು ಯಾವ ಅರ್ಥದಲ್ಲಿ ಬರೆದಿದ್ದಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ…||

ಭಾಗ-13

 ಮಠ

‘ತಪ್ಪು ಮಾಡದವ್ರು ಯಾರವ್ರೆ… ತಪ್ಪೇ ಮಾಡದೋರ್ ಎಲ್ಲವ್ರೆ…. ವಿ.ಮನೋಹರ್ ಬರೆದಿರೋ ಅದ್ಭುತ ಸಾಲುಗಳು. ಜೊತೆಗೆ ತುಂಬಾನೆ ಫ್ಯಾಕ್ಟ್ ಕೂಡ. ಹೌದು… ನಮ್ಗೆಲ್ಲಾ ಗೊತ್ತಿರೋ ಹಾಗೆ ತುಂಬಾನೆ ಫೇಮಸ್ ಆಗಿರೋ ಹಾಡುಗಳೆಲ್ಲವೂ ಆಕಸ್ಮಿಕವಾಗಿ ಹುಟ್ಟಿರುವಂತದ್ದೇ ಆಗಿದೆ. ಜಗ್ಗೇಶ್ ಅಭಿನಯಿಸಿರೋ ಮಠ ಸಿನ್ಮಾದ ಪ್ರಿಪರೇಷನ್‍ಗಾಗಿ ಅಶ್ವಿನಿ ಸ್ಟುಡಿಯೋದಲ್ಲಿ ಮಾತುಕತೆ ನಡೀತಾ ಇತ್ತು. ಸ್ಟುಡಿಯೊದ ಕ್ಯಾಂಟೀನ್‍ನಲ್ಲಿ ಎಲ್ರೂ ಟೀ ಕುಡಿಯುವಾಗ ಅಲ್ಲಿದ್ದ ಒಬ್ಬ ಹುಡುಗ ನೀರಿನ ಗ್ಲಾಸ್‍ನ್ನ ಮನೋಹರ್ ಅವ್ರ ಮೆಲೆ ಬೀಳಿಸಿಬಿಟ್ಟ. ಯಾವಾಗ್ಲೂ ಕೂಲ್ ಆಗಿ ಇರ್ತಿದ್ದ ಮನೋಹರ್ ಅವತ್ತು ಆ ಹುಡುಗನ ಮೆಲೆ ರೇಗಾಡಿಬಿಟ್ರು. ಆ ಹುಡುಗ ತಪ್ಪಾಯ್ತು ಸರ್ ಅಂದ. ಸ್ಟುಡಿಯೋದೊಳಗೆ ಕುಳಿತಾಗ ನಿರ್ದೇಶಕ ಗುರುಪ್ರಸಾದ್ ಕತೆಯನ್ನ ವಿವರಿಸಿದ್ರು. ಮಠದಲ್ಲಿರೋ ಖೈದಿಗಳಿಗೆ ಉಪದೇಶ ಮಾಡೋಕೆ ಗುರುಗಳನ್ನ ಕರೆಸಲಾಗಿರುತ್ತೆ.

ಆದ್ರೆ ಅಸಲಿಗೆ ಅವ್ರು ಸ್ವಾಮಿಜಿಗಳೇ ಅಲ್ಲ. ಹಾಡಿನ ಮೂಲಕ ಅವ್ರು ಉಪದೇಶ ಹೇಳಬೇಕು ಅಂದ್ರಂತೆ. ಇದನ್ನೆಲ್ಲಾ ಕೇಳಿದ ಮನೋಹರ್ ಹಾಡು ಬರೆಯೋಕೆ ಕುಳಿತ್ರು ಒಂದು ಕ್ಷಣ ಕ್ಯಾಂಟೀನ್‍ನಲ್ಲಿ ನಡೆದ ಘಟನೆ ಕಣ್ ಮುಂದೆ ಬಂದು ಹೋಯಿತು. ಚೇ,,, ಸುಮ್ನೆ ಆ ಹುಡುಗನಿಗೆ ಬೈದೆ. ತಪ್ಪಾಯ್ತು ಸರ್ ಅಂದಾಗ, ತಪ್ಪು ಮಾಡದೇ ಇರೋರು ಯಾರಿದಾರೆ ಅಂದಿದ್ರೆ ಆಗಿಬಿಡೋದು ಅಂತ ಮನಸ್ಸಲ್ಲೆ ಅಂದುಕೊಂಡ್ರು. ಆಗಲೇ ಮನೋಹರ್‍ಗೆ ಹಾಡಿನ ಮೊದಲ ಸಾಲು ಸಿಕ್ಕಿದ್ದು, ತಪ್ಪು ಮಾಡದವ್ರು ಯಾರವ್ರೆ, ತಪ್ಪೇ ಮಾಡದವ್ರು ಎಲ್ಲವ್ರೆ ಅನ್ನೋ ಪದಗಳು ಸೇರಿ ಕೆಲವೇ ನಿಮಿಷಗಳಲ್ಲಿ ಹಾಡು ರೆಡಿಯಾಯ್ತು. ಇದನ್ನ ಪೋಲಿ ಹುಡುಗ್ರ ನ್ಯಾಷನಲ್ ಆಂಥಮ್ ಆಗುವಂತೆ ಹಾಡಿದ್ದು ಸಿ.ಅಶ್ವತ್. ಅಲ್ಲಿಗೆ ಮಠ ಸಿನ್ಮಾ ಹಿಟ್ ಆಗೋದು ಗ್ಯಾರಂಟಿ ಅನ್ನೋ ನಂಬಿಕೆ ಗುರುಪ್ರಸಾದ್ ಅವ್ರಿಗೂ ಬಂದುಬಿಟ್ಟಿತ್ತು.

-ಅಕ್ಷತಾ

 

 

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...