ಪರಪಂಚದಾಗೆ ಏನೇನೋ ಐಯ್ತೆ ನನಗೊಂದು ಒಳ್ಳೆ ಹುಡ್ಗಿ ಬೇಕು…!

Date:

ಸಿನಿಮಾ ಬಿಡುಗಡೆಗೆ ಮುನ್ನ ಅವುಗಳ ಹಾಡುಗಳು ಸೂಪರ್ ಹಿಟ್ ಆಗಿ, ಎಲ್ಲರ ಬಾಯಲ್ಲಿ ಗುನುಗುತ್ತಿರುತ್ತವೆ.‌ ಕೆಲವೊಂದು ಹಾಡುಗಳು ಸಾರ್ವಕಾಲಿಕ ಹಿಟ್ ಆಗುತ್ತವೆ.
ಅದೇ ರೀತಿ ಬಿಡುಗಡೆ ಸಿದ್ಧವಾಗಿರುವ ಎಂಎಂಸಿಚ್ ಸಿನಿಮಾದ ಹಾಡೊಂದು ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.‌ ಹುಡುಗರ ಇಷ್ಟದ ಹಾಡಾಗಿದೆ.
‘ಅದೃಷ್ಟಕ್ಕೊಂದು ಏಣಿ ಬೇಕು’, ಮುದ್ದಾಡಕ್ಕೊಂದು ಕೋಣೆ ಬೇಕು, ಪರಪಂಚದಾಗೆ ಏನೇನೋ ಐಯ್ತಿ ನನಗೊಂದು ಒಳ್ಳೆ ಹುಡ್ಗಿ ಬೇಕು’ ಎಂಬ ಹಾಡು ಹುಡುಗರ ಗೀತೆಯಾಗಿದೆ…! ಕೈಲಾಶ್ ಕೇರ್ ಹಾಡಿರುವ ಹಾಡು ಈಗಾಗಲೇ ಎಲ್ಲೆಡೆ ಹರಿದಾಡುತ್ತಿದೆ.

ನಟಿ ವಿನಯಾ ಪ್ರಸಾದ್ ಅವರ ಪುತ್ರಿ ಪ್ರಥಮಾ, ಪ್ರಮೀಳಾ ಜೋಷಾಯ್ ಅವರ ಪುತ್ರಿ ಮೇಘನಾ ರಾಜ್, ಸುಧಾ ಬೆಳವಾಡಿ ಅವರ ಪುತ್ರಿ ಸಂಯುಕ್ತ ಹೊರನಾಡು ಹಾಗೂ ಹಿರಿಯ ನಟಿ ಸುಮಿತ್ರಾ ಅವರ ಪುತ್ರಿ ದೀಪ್ತಿ (ನಕ್ಷತ್ರ) ನಾಯಕಿಯರಾಗಿ ನಟಿಸಿರುವ ‘ಎಂಎಂಸಿಎಚ್’ ಸಿನಿಮಾ ಶೀಘ್ರದಲ್ಲೇ ಬಿಡುಗಡೆ ಆಗಲಿದೆ.
ಮುಸ್ಸಂಜೆ ಮಹೇಶ್ ನಿರ್ದೇಶನದ ಈ ಚಿತ್ರದಲ್ಲಿ ರಾಗಿಣಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ.
ರಘುಭಟ್ ಮತ್ತು ಯುವರಾಜ್ ಚಿತ್ರದ ನಾಯಕರು. ಎಸ್ ಪುರುಷೋತ್ತಮ್ , ಜಾನಕಿ ರಾಮ್ ಮತ್ತು ಅರವಿಂದ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಈ ಸಿನಿಮಾದ ಹಾಡುಗಳು ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿವೆ.
ಮೈಸೂರಿನ ಪ್ರತಿಷ್ಠಿತ ಕಾಲೇಜ್ ವೊಂದರಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಸಿನಿಮಾ ಎಂಎಂಸಿಎಚ್. ಇದೊಂದು ಮಹಿಳಾ ಪ್ರಧಾನ ಚಿತ್ರ.


ತಾನು ಓದುತ್ತಿದ್ದ ವೇಳೆಯಲ್ಲಿ ನಡೆದ ಘಟನೆಯನ್ನು ಆಧರಿಸಿ ಮುಸ್ಸಂಜೆ ಮಹೇಶ್ ಚಿತ್ರ ಮಾಡಿದ್ದಾರೆ. ಅವರು ಹೇಳುವಂತೆ ಆಗ ನಡೆದ ಘಟನೆ ಸುದ್ದಿ ಆಗಿರಲಿಲ್ಲ.‌ಪೊಲೀಸ್ ಅಧಿಕಾರಿಗಳು ಸುದ್ದಿಯಾಗದಂತೆ ನೋಡಿಕೊಂಡಿದ್ದರಂತೆ.
ಈ ವಿಷಯ ಯಾರಿಗೂ ಗೊತ್ತಿಲ್ಲವಂತೆ. ಹೇಳಬೇಕೆಂದುಕೊಂಡಿರುವುದನ್ನು ಸಿನಿಮಾ ಮೂಲಕ ಹೇಳುತ್ತಿದ್ದಾರಂತೆ. ಎಂಎಂಸಿಎಚ್ ಅಂದರೇನು ಎಂಬುದನ್ನು ತಿಳಿಯಲು ಸಿನಿಮಾ ನೋಡಬೇಕಂತೆ.
ನನಗೊಂದು ಹುಡುಗಿ ಬೇಕು ಹಾಡನ್ನು ನೀವಿನ್ನೂ ಕೇಳದೇ ಇದ್ರೆ ….ಈಗಲೇ ಕೇಳಿ…ಖಂಡಿತಾ ನಿಮ್ಗೆ ಇಷ್ಟವಾಗುತ್ತೆ…

Share post:

Subscribe

spot_imgspot_img

Popular

More like this
Related

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್

ಮುಸ್ಲಿಮರ ಪರವಾದ ಮೃದುವಾದ ಧೋರಣೆ ಸರ್ಕಾರಕ್ಕೆ ಒಳ್ಳೆಯದಲ್ಲ: ಆರ್.ಅಶೋಕ್ ಬೆಂಗಳೂರು: ಮುಸ್ಲಿಮರ ಪರವಾದ...

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ ಉದ್ದೇಶವಾಗಿತ್ತು: ಸಿಎಂ ಸಿದ್ದರಾಮಯ್ಯ

ಕುರುಬ ಸಮಾಜದ ಮಕ್ಕಳಿಗೆ ಶಿಕ್ಷಣ, ಹಾಸ್ಟೆಲ್ ಬೇಕು ಎನ್ನುವುದು ನನ್ನ ಸ್ಪಷ್ಟ...

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ!

ನಟ ಉಪೇಂದ್ರ ದಂಪತಿ ಫೋನ್ ಹ್ಯಾಕ್ ಮಾಡಿದ್ದ ಆರೋಪಿ ಬಂಧನ! ಬೆಂಗಳೂರು: ರಿಯಲ್...

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ

ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ; ಹವಾಮಾನ ಇಲಾಖೆ ಬೆಂಗಳೂರು: ರಾಜ್ಯದ...