ಇಲ್ಲೊಬ್ಬ ಪುಣ್ಯಾತ್ಮಾ ಒಂದಲ್ಲ 13 ಮದುವೆಯಾಗಿದ್ದಾನೆ..! 14 ನೇ ಮದುವೆ ಆಗುವ ತೆವಲಿಂದ 13ನೇ ಪತ್ನಿಯನ್ನು ಹತ್ಯೆಗೈದ ಆರೋಪದ ಮೇಲೆ ಅರೆಸ್ಟ್ ಆಗಿದ್ದಾನೆ..!
ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದ ಘಟನೆ ಇದು. ಇಲ್ಲಿನ ಅಮೇಠಿಯ ನಿವಾಸಿ ಮೊಹಮ್ಮದ್ ಮುಸ್ತಕೀಮ್ ಬಂಧಿತ. ಈತ ನಾಲ್ಕು ವರ್ಷದ ಹಿಂದೆ ಮಮ್ತಾಜ್ ಅವರನ್ನು ಮದುವೆ ಆಗಿದ್ದು, ಮೂರು ತಿಂಗಳ ಮಗು ಕೂಡ ಇದೆ. ಮುಸ್ತಕೀಮ್ ಈತನ 13ನೇ ಹೆಂಡ್ತಿಯಂತೆ..!
ಇತ್ತೀಚೆಗೆ ಹಂಡ್ತಿ ಮಮ್ತಾಜ್ ಜೊತೆ ಯಾವಾಗ್ಲೂ ಜಗಳ ಮಾಡ್ತಿದ್ದ ಮುಸ್ತಕೀಮ್ ಆಕೆಯ ತಂದೆಯನ್ನು ಭೇಟಿ ಮಾಡಿ ನಿಮ್ಮ ಮಗಳಿಗೆ ತಲಾಕ್ ಕೊಡ್ತೀನಿ ಅಂತ ಬೆದರಿಸ್ತಿದ್ನಂತೆ. ಅಷ್ಟೇಅಲ್ಲ ಮತ್ತೊಂದು ಮದುವೆಗೂ ಮಹಿಳೆಯನ್ನು ನೋಡಿಕೊಂಡಿದ್ನಂತೆ. ಆ 14 ನೇ ಮದ್ವೆಗಾಗಿ 13ನೇ ಹೆಂಡತಿಯನ್ನು ಬರ್ಬರವಾಗಿ ಹತ್ಯೆಗೈದು, ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.