ಮಳೆಗಾಲ ಆರಂಭವಾಗಿಯೇಬಿಟ್ಟಿತು.ಮಳೆಗಾಲದಲ್ಲಿ ಹಚ್ಚ ಹಸಿರಾಗಿ ಕಂಗೊಳಿಸೋ ಭೂಸಿರಿ ಮನಸ್ಸಿಗೆ ಅದೆಷ್ಟು ಮುದ ನೀಡುತ್ತದೋ,ಅದರಂತೆ ಈ ಮಳೆಗಾಲದ ಜೊತೆಯಲ್ಲಿ ಹರಡೋ ಸಾಂಕ್ರಾಮಿಕ ಕಾಯಿಲೆಗಳು ನಮ್ಮ ಮನಸ್ಸಿಗೆ ಬೇಸರವನ್ನೂ ನೀಡುತ್ತದೆ.ಇದಕ್ಕಾಗಿ ಕೆಲವೊಂದು ಮುಂಜಾಗ್ರತಾ ಕ್ರಮ ವಹಿಸಿದಲ್ಲಿ ಆಗೋ ಅದೆಷ್ಟೊ ಅನಾಹುತಗಳಿಂದ ನಮ್ಮನ್ನು ನಾವು ರಕ್ಷಿಸ್ಕೊಳ್ಳಬಹುದು.
ಮೊದಲಿಗೆ ನಾವು ತಿನ್ನೋ ಕುಡ್ಯೋ ವಸ್ತುಗಳತ್ತ ಸೂಕ್ಷ್ಮ ವಾಗಿ ಗಮನ ಹರಿಸಬೇಕು.ಯಾಕಂದ್ರೆ ಮಳೆಗಾಲದಲ್ಲಿ ಹರಿಯೋ ನೀರಿನಿಂದ ಎಲ್ಲಾ ಕಡೆ ಕೊಳಕು ಸಾಗಿಸಲ್ಪಡುತ್ತದೆ,ಈ ಕೊಳಕು ನೀರಿನಲ್ಲಿ ಅನೇಕ ತರಹದ ಬ್ಯಾಕ್ಟೀರಿಯಾ ಹಾಗೂ ಸೊಳ್ಳೆಗಳು ಹುಟ್ಟುತ್ತವೆ.ಇದರ ಪರಿಣಾಮವೇ ಅನೇಕ ಇನ್ಫ಼ೆಕ್ಷನ್ ತರಹದ ಕಾಯಿಲೆಗಳು.ಎಲ್ಲೇ ನೋಡಿ ಇಂದು ವೈರಲ್ ಇನ್ಫ಼ೆಕ್ಷನ್,ವಾಟರ್ ಇನ್ಫ಼ೆಕ್ಷನ್ ಹೀಗೆ ವೈದ್ಯರ ಉತ್ತರಗಳು,ಬರೋ ಕಾಯಿಲೆಗಳಿಗೆ ತರಹೇವಾರಿ ಹೆಸರುಗಳು,
ಶೀತ,ಜ್ವರ,ಡಯರಿಯ,ಅಜೀರ್ಣ ಹೀಗೆ ಅನೇಕ.ಇದಕ್ಕೆ ನಾವೇನು ಮಾಡಬೇಕು??
ತಾಜಾವಲ್ಲದ ಆಹಾರ ತೆಗೆದುಕೊಳ್ಳಬೇಡಿ.
ಮನೆಯಲ್ಲಿರೊವ್ರಿಗೆ ಇದರ ಬಗ್ಗೆ ತಲೆಕೆಡಿಸಬೇಕಾಗಿಲ್ಲ.ಆದ್ರೆ ಹೊರಗಡೆ ಹೋಗೋವ್ರಿಗೆ ಬೇರೆನೂ ತಿಂದಿಲ್ಲಾಂದ್ರೂ ಹಣ್ಣು ತಿನ್ನೋಣ ಅನ್ಸುತ್ತೆ.ಆದ್ರೆ ನಿಜ ಹೇಳ್ಬೆಕಂದ್ರೆ ಎಲ್ಲಾಕ್ಕಿಂತಲೂ ಅಪಾಯಕಾರಿ ವಸ್ತುಗಳೆ ಇವುಗಳು.ಯಾಕಂದ್ರೆ ಎಷ್ಟೋ ಸಲ ಹಣ್ಣುಗಳನ್ನ,ಎಷ್ಟೊ ಮೊದಲೇ ಕತ್ತರಿಸಿ ಇಟ್ಟಿರ್ತಾರೆ.ಅವುಗಳಲ್ಲಿ ಅನೇಕ ಬ್ಯಾಕ್ಟೀರಿಯಾ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿರುತ್ತವೆ.ಅದಕ್ಕಾಗಿ ಮಳೆಗಾಲದಲ್ಲಿ ಹೊರಗಡೆ ಜ್ಯೂಸ್ ಹಾಗೂ ಹಣ್ಣುಗಳನ್ನು ತಿನ್ನಬೇಡಿ.ಆದಷ್ಟು ಬೆಚ್ಚಗಿರುವ ಆಹಾರಗಳನ್ನೇ ಸೇವಿಸಿ.ಇದು ಮನಸ್ಸಿಗೂ ಮುದ ಕೊಡುವುದಲ್ಲದೆ,ದೇಹಕ್ಕೂ ಹಿತ.
ಆಹಾರದಲ್ಲಿ ವಿಟಾಮಿನ್ C ಪ್ರೊಟೀನ್ ಬಗ್ಗೆ ವಿಶೇಷ ಗಮನ ಹರಿಸಿ
ಈ ಹವಾಮಾನದಲ್ಲಿ ವಿಟಾಮಿನ್ C ಹಾಗೂ ಪ್ರೊಟೀನ್ ತೀರ ಅಗತ್ಯ.ಇದ್ರಿಂದ ನಮ್ಮ ಶರೀರದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ.ಪ್ರೊಟೀನ್ ಗಾಗಿ ಬಾದಾಮ್,ಬಾಜ್ರಾ ಹಾಗೂ ವಿಟಾಮಿನ್ C ಗಾಗಿ ನಿಂಬೆ ಹಣ್ಣು ಹಾಗೂ ಕಾಳು ಮೆಣಸಿನ (ಪೆಪ್ಪರ್) ಉಪ್ಯೋಗ ಹಿತಕಾರಿ.
ಹೆಚ್ಚೆಚ್ಚು ನೀರನ್ನು ಸೇವಿಸಿ
ಈ ಹವೆಯಲ್ಲಿ ದೇಹದೊಳಗಿನ ತಾಪಮಾನದಿಂದ ಅಧಿಕ ನೀರು ನಷ್ಟವಾಗುತ್ತದೆ.ಮಳೆ ಬರುತ್ತಿದ್ದರೆ,ನಿಮ್ಮ ಕಾಲುಗಳು ಪದೇ ಪದೇ ನಿಮ್ಮನ್ನು ವಾಶ್ ರೂಂ ಕಡೆ ಕರೆದೊಯ್ಯುತ್ತದೆ.ಮಳೆ ಇಲ್ಲದಿದ್ದಲ್ಲಿ ಬೆವರಿನ ರೂಪದಲ್ಲೂ ನೀರು ನಷ್ಟವಾಗುತ್ತದೆ.ಈ ತರಹದ ವ್ಯತ್ಯಸ್ತ ತಾಪಮಾನಕ್ಕನುಗುಣವಾಗಿ ಇದು ದೇಹಕ್ಕೆ ಹಾನಿ ಮಾಡುತ್ತದೆ,ನಿರ್ಜಲೀಕರಣಕ್ಕೆ ಆಸ್ಪದ ಕೊಡದೆ,ಪದೇ ಪದೇ ತಪ್ಪದೆ ನೀರು ಸೇವಿಸಿದಲ್ಲಿ ಅನೇಕ ಚರ್ಮದ ಇನ್ಫ಼ೆಕ್ಷನ್ ಗೆ ಪರಿಹಾರ ಹಾಗೂ ನಿಮ್ಮರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.
ಆಹಾರವನ್ನು ಒಂದೇ ಕ್ರಮದಲ್ಲಿ ಸೇವಿಸದಿರಿ.
ಈ ಹವಾಮಾನದಲ್ಲಿ ಜೀರ್ಣ ಕ್ರಿಯೆ ಸ್ವಲ್ಪ ನಿಧಾನಗತಿಯಲ್ಲಿ ಸಾಗುತ್ತದೆ.ಹೊಟ್ಟೆ ಬಿರಿಯುವಂತೆ ಒಂದೆ ಸಲ ಮುಕ್ಕುವವರಿದ್ದಾರೆ.ಅಂತಹವರಿಗೊಂದು ಕಿವಿ ಮಾತು.ಒಂದೆ ಸಮನೆ ತಿನ್ನದಿರಿ,ಕೆಲವು ಗಂಟೆಗಳ ಅವಧಿಯಲ್ಲಿ ಆಹಾರ ಸ್ವಲ್ಪ ಸ್ವಲ್ಪನೇ ಪದೇ ಪದೇ ಸೇವಿಸುತ್ತಾ ಇರಿ.ಜೀರ್ಣ ಕ್ರಿಯೆ ಸರಾಗವಾಗಿ ನಡೆಯುತ್ತದೆ,ಹಾಗೂ ತನ್ನ ಬಿಡುವಿಲ್ಲದ ಕೆಲಸದಿಂದ ತುಂಬಾ ಹೊತ್ತಿನ ತನಕ ಹೊಟ್ಟೆ ಖಾಲಿಯಿಡುವವರಿಗೂ ಇದೊಂದು ಉತ್ತಮ ಪರಿಹಾರ.
ರೋಗಗಳು ಬಂದ್ಮೇಲೆ ಅನುಭವಿಸೋದು ನಮ್ಮ ಕರ್ಮ ಅನ್ನೊಕ್ಕಿಂತ ಬರದೇ ಇರೋ ತರ ಮಾಡೋಕೆ ಯಾಕೆ ನಾವು ಪ್ರಯತ್ನ ಪಡಬಾರದು???ಪ್ರಿವೆನ್ಷನ್ ಈಸ್ ಬೆಟರ್ ದ್ಯಾನ್ ಕ್ಯೂರ್ ಅಲ್ಲವೇ?????
- ಸ್ವರ್ಣಲತ ಭಟ್
POPULAR STORIES :
ಕೋಟಿ ಕೋಟಿ ಕಮಾಯಿಯ ಸುಲ್ತಾನ್‍ನ ಕೆಲವೊಂದು ಸಿಲ್ಲಿ ಮಿಸ್ಟೇಕ್ಸ್..! ನಿರ್ದೇಶಕರೇ ಎಡವಿದ್ದೀರಿ!!!!!!
ಸಲ್ಲು ವೆಡ್ಸ್ ಲೂಲಿಯಾ… ಕೊಹ್ಲಿ ವೆಡ್ಸ್ ಅನುಷ್ಕಾ….! ಇದಕ್ಕೆಲ್ಲಾ ಕಾರಣ ಸುಲ್ತಾನ್ ಚಿತ್ರ
ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??
ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!
ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?
ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?
ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!
ಎಲ್ಲರ ಮನಗೆದ್ದ ಧೋನಿಯ ಸ್ಪೂರ್ತಿದಾಯಕ ಮಾತುಗಳು..!