ಆಸ್ಕರ್ ಪ್ರಶಸ್ತಿ ವಿಜೇತ ನಟ ಹಾಗೂ ಗಾಯಕ ಮಾರ್ಗನ್ ಫ್ರೀಮನ್ (80) ವಿರುದ್ಧ ದುರ್ವತನೆ ಹಾಗೂ ಲೈಂಗಿಕ ಕಿರುಕುಳ ಆರೋಪ ಕೇಳಿಬಂದಿದೆ.
2015ರಲ್ಲಿ ಗೋಯಿಂಗ್ ಇನ್ ಸ್ಟೈಲ್ ಎಂಬುವ ಬ್ಯಾಂಕ್ ದರೋಡೆ ಕಥೆಯುಳ್ಳ ಕಾಮಿಡಿ ಚಿತ್ರದ ವೇಳೆ ಫ್ರೀಮನ್ ಸಹಾಯಕ ನಿರ್ಮಾಪಕಿ ಒಬ್ಬರ ದೇಹವನ್ನು ಅನವಶ್ಯಕವಾಗಿ ಟಚ್ ಮಾಡುವುದು ಅವಳ ಉಗುರು ಹಾಗೂ ಉಡುಗೆಯ ಕುರಿತು ಕಾಮೆಂಟ್ ಮಾಡಿವ ಮೂಲಕ ದುರ್ವತನೆಯಿಂದ ನಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ನನ್ನ ಸ್ಕರ್ಟ್ ಎತ್ತಲು ಪ್ರಯತ್ನಿಸುತ್ತಿದ್ದರು , ಬಳಿಕ ನೀವು ಒಳ ಉಡುಪು ಧರಿಸಲ್ವಾ? ಎಂದು ಪ್ರಶ್ನಿಸಿದ್ದರೆಂದು ಸಂತ್ರಸ್ತೆ ಆರೋಪಿಸಿದ್ದಾರೆ.