ಕ್ರೀಡಾ ಇತಿಹಾಸದಲ್ಲಿಯೇ ಅತೀ ದುಬಾರಿ ಟಿಕೇಟ್ ಯಾವುದು ಗೊತ್ತೇ..?

0
78

ಕ್ರೀಡೆಯನ್ನು ಜನ ಇಷ್ಟಪಡ್ತಾರೆ..! ಆಟ ನೋಡ್ತಾ ನೋಡ್ತಾ ಭಾವೋದ್ರೇಕಕ್ಕೂ ಒಳಗಾಗುವವರಿದ್ದಾರೆ..! ತಮ್ಮ ನೆಚ್ಚಿನ ಆಟಗಾರ ವಿಫಲತೆಯನ್ನು ಕಂಡಾಗ ಆತನಿಗಿಂತಲೂ ಹೆಚ್ಚು ಚಡಪಡಿಸಿ ಕೋಪ, ನೋವವನ್ನು ಹೊರಹಾಕುವವರೂ ಇದ್ದಾರೆ..! ಆ ಆಟ, ಈ ಆಟ ಅಂತೆಲ್ಲಾ ಬೇಡ.. ಒಟ್ಟಾಗಿ ಕ್ರೀಡೆಯನ್ನು ತೆಗೆದುಕೊಳ್ಳಿ… ನೆಚ್ಚಿನ ಕ್ರೀಡೆಯನ್ನು ನೋಡುವುದಕ್ಕಿಂತಲೂ ನೆಚ್ಚಿನ ಆಟಗಾರನ ಆಟವನ್ನು ನೋಡಲು ಬರುವವರೇ ಬಹಳಾ ಜನ..!
ಕೆಲವೊಂದು ಪಂದ್ಯಗಳನ್ನು ನೋಡಲು ಜನ ಮುಗಿ ಬೀಳ್ತಾರೆ..! ಟಿಕೇಟ್ ಬೆಲೆ ಗಗನಕ್ಕೇರಿದ್ದರೂ ಅದಕ್ಕೆ ತಲೆಕೆಡಿಸಿಕೊಳ್ಳದೇ ಆ ದೊಡ್ಡ ಮೊತ್ತವನ್ನು ಕೊಟ್ಟು, ಟಿಕೇಟ್ ತಗೊಂಡು ಪಂದ್ಯ ನೋಡಲು ಬಂದೇ ಬರುತ್ತಾರೆ..! ಆ ಮೂಲಕ ತಮ್ಮ ಕ್ರೀಡಾಭಿಮಾನ, ಆಸಕ್ತಿಯನ್ನು ತೋರಿಸ್ತಾರೆ..! ತಮ್ಮ ನೆಚ್ಚಿನ ಕ್ರೀಡಾಪಟುಗಳನ್ನು ಹುರಿದುಂಬಿಸ್ತಾರೆ..!
ಕ್ರೀಡಾ ಇತಿಹಾಸದಲ್ಲಿಯೇ ದುಬಾರಿ ಬೆಲೆಯ ಟಿಕೇಟ್ ಗಳು ಮಾರಾಟವಾದ ಪಂದ್ಯಗಳ ಬಗ್ಗೆ ನಿಮಗೆ ಗೊತ್ತೇ..? ಅಂತಹ ದುಬಾರಿ ಪಂದ್ಯಗಳ ಪರಿಚಯ ಇಲ್ಲಿದೆ..!

1. 2013ರ ವಿಂಬಲ್ಡನ್ ಪುರುಷರ ಫೈನಲ್ ಪಂದ್ಯ :

article-2357125-1ab380d1000005dc-56_634x572_1444246937
ಇತಿಹಾಸದಲ್ಲಿಯೇ ಕ್ರೀಡೆಯೊಂದರ ಟಿಕೇಟ್ ದುಬಾರಿ ಬೆಲೆಯಲ್ಲಿ ಮಾರಾಟವಾಗಿದ್ದು 2013ರ ವಿಂಬಲ್ಡನ್ ಟೆನಿಸ್ ಟೂರ್ನಿಯ ಪುರುಷರ ಫೈನಲ್ ನಲ್ಲಿ..! ಆ ವಿಂಬಲ್ಡನ್ ಫೈನಲ್ ನಲ್ಲಿ ಬ್ರಿಟನ್ ಟೆನಿಸ್ ಆಟಗಾರ ಆ್ಯಂಡಿ ಮುರ್ರೆಯ ಎದುರಾಳಿ ಸೆರ್ಬಿಯಾದ “ನೊವಾಕ್ ಜೋಕಾವಿಕ್”..! ಇದು ಅತೀ ದುಬಾರಿ ಬೆಲೆಗೆ ಟಿಕೇಟ್ ಬಿಕರಿಯಾಗಿದ್ದ ಪಂದ್ಯವಾಗಿದೆ..! ಈ ಪಂದ್ಯ ವೀಕ್ಷಣೆಗೆ ಟಿಕೆಟ್ ಒಂದರ ಬೆಲೆ ಬರೋಬ್ಬರಿ 4213296.75 ರೂಪಾಯಿಗಳು..! ಈ ಪಂದ್ಯದಲ್ಲಿ ಮುರ್ರೆ ಗೆಲ್ಲುವ ಮೂಲಕ ವಿಂಬಲ್ಡನ್ ಪ್ರಶಸ್ತಿಗೆದ್ದ ಮೊಟ್ಟಮೊದಲ ಬ್ರಿಟೀಷ್ ಆಟಗಾರನಾಗಿ ದಾಖಲೆ ಬರೆದರು..!

2. ಎನ್.ಬಿ.ಎ ಚಾಂಪಿಯನ್ ಶಿಪ್ 2010 :

g6_minimovie_1444248195
2010ರ ಬಾಸ್ಕೆಟ್ ಬಾಲ್ ಚಾಂಪಿಯನ್ ಶಿಪ್ ನ ಫೈನಲ್ ಪಂದ್ಯದ ಟಿಕೆಟ್ ಬೆಲೆ ಕ್ರೀಡೆಯ ಇತಿಹಾಸದಲ್ಲಿ ಎರಡನೇ ದುಬಾರಿ ಬೆಲೆಯಾಗಿದೆ..! ವಿಶ್ವಶ್ರೇಷ್ಠ ಬಾಸ್ಕೆಟ್ ಬಾಲ್ ಆಟಗಾರರಾದ ಲೇಕರ್ಸ್ ಮತ್ತು ಸೆಲ್ಟಕ್ಸ್ ನಡುವಿನ ಪಂದ್ಯವದು..! ಈ ಪಂದ್ಯದ ವೀಕ್ಷಣೆಯ ಟಿಕೆಟ್ ಬೆಲೆ ಜೋಡಿಯೊಂದಕ್ಕೆ ಬರೊಬ್ಬರಿ 7454875.00 ರೂ.. ಅಂದರೆ ಒಬ್ಬರಿಗೆ 3727437.5 ರೂಪಾಯಿಗಳ ಟಿಕೇಟ್ ದರ ನಿಗಧಿ ಮಾಡಿದ್ರು..!

3. 2015ರ ಬಾಕ್ಸಿಂಗ್ ಚಾಂಪಿಯನ್ ಶಿಪ್ :

Sanneh-Pacquiao-Mayweather-Tickets-690
ದುಬಾರಿ ಬೆಲೆಯ ಟಿಕೇಟ್ ಬಿಕರಿಯಾದ ಮೂರನೇ ಸ್ಥಾನ 2015ರ ಬಾಕ್ಸಿಂಗ್ (ಲೈಟ್ ಮಿಡಲ್ ವೈಟ್) ಚಾಂಪಿಯನ್ ಶಿಪ್..! ಈ ಪಂದ್ಯದಲ್ಲಿ “ಫ್ಲಾಯ್ಡ್ ಮೇವೆದರ್” ಮತ್ತು “ಮ್ಯಾನಿ ಪ್ಯಾಕ್ವಿಯೋ” ಸೆಣೆಸಾಡಿದ್ದರು..! ಈ ಪಂದ್ಯದ ಟಿಕೇಟ್ ಬೆಲೆ 2655931.75 ರೂಪಾಯಿಗಳಾಗಿತ್ತು..!

4. 2013 ಮಾಸ್ಟರ್ಸ್ ಗಾಲ್ಫ್ ಟೂರ್ನಿಮೆಂಟ್ :

2013-master-golf-tournament-pga-tour_1444248377
2013ರ ಮಾಸ್ಟರ್ಸ್ ಗಾಲ್ಫ್ ಟೂರ್ನಿಮೆಂಟ್ ಕ್ರೀಡಾ ಇತಿಹಾಸದಲ್ಲಿ ಅತೀ ದುಬಾರಿ ಬೆಲೆಯ ಪಂದ್ಯಗಳಲ್ಲೊಂದಾಗಿದೆ..! ಇದರ ಒಂದು ಟಿಕೆಟ್ ಬೆಲೆ 291074.11 ರೂಪಾಯಿಗಳು…! ನಾಲ್ಕು ದಿನದ ಪಾಸನ್ನೂ ಅತೀ ದುಬಾರಿ ಬೆಲೆಗೆ ನೀಡಿದ್ದರು..!

5. 2012 ಲಂಡನ್ ಸಮ್ಮರ್ ಒಲಂಪಿಕ್ಸ್ ಉದ್ಘಾಟನಾ ಕಾರ್ಯಕ್ರಮ

336726-london-olympics-opening-ceremony_1444248435
2012ರ ಲಂಡನ್ ನಲ್ಲಿ ನಡೆದ ಬೇಸಿಗೆ ಒಲಂಪಿಕ್ಸ್ ನ ಉದ್ಘಾಟನಾ ಸಮಾರಂಭದ ಟಿಕೇಟ್ ಬೆಲೆಯೇ 259460.00 ರೂಪಾಯಿಗಳಾಗಿತ್ತು..!

6. 2014ರ ಪಿಫಾ ವಿಶ್ವಕಪ್ ಫೈನಲ್ :

germany-vs-argentina-world-cup-2014-final-live-highlights-13th-july-2014_1444248570
ದುಬಾರಿ ಟಿಕೆಟ್ ಗಳನ್ನು ಮಾರಾಟ ಮಾಡಿದ್ದ ಪಂದ್ಯಗಳ ಸಾಲಿನಲ್ಲಿ 2014ರ ಪಿಫಾ ವಿಶ್ವಕಪ್ ಫೈನಲ್ ಪಂದ್ಯವೂ ಒಂದಾಗಿದೆ..! ಜರ್ಮನಿ ಹಾಗೂ ಅರ್ಜೆಂಟಿನಾ ನಡುವಿನ ಆ ಪಂದ್ಯದ ಟಿಕೇಟ್ ದರ 217297.75 ರೂಪಾಯಿಗಳು…!

7. 2010 ವಿಂಟರ್ ಒಲಂಪಿಕ್ಸ್

url_1444248649
2010 ವಿಂಟರ್ ಒಲಂಪಿಕ್ಸ್ ನಲ್ಲಿನ ಕೆನಡಾ ಮತ್ತು ಯುಎಸ್ ನಡುವಿನ ಕದನದ ಟಿಕೇಟ್ ಬೆಲೆ 210908.75 ರೂಪಾಯಿ ಆಗಿತ್ತು..!

ಅಬ್ಬಬ್ಬಾ.. ಎಷ್ಟೊಂದು ದುಡ್ಡುಕೊಟ್ಟು ಇಷ್ಟದ ಆಟವನ್ನು ನೋಡ್ಬೇಕಾ..?! ಅಂತ ತಲೆಕೆಡಿಸಿಕೊಳ್ಬೇಡಿ.. ಅಷ್ಟೊಂದು ದುಡ್ಡುಕೊಟ್ಟು ನೋಡುವಷ್ಟು ತಾಕತ್ತಿರೋ ಉಳ್ಳವರು, ಆ ಪಂದ್ಯಗಳನ್ನು ನೇರವಾಗಿ ವೀಕ್ಷಿಸುವ ಮೂಲಕ ಕ್ರೀಡೆಗೆ ಪ್ರೋತ್ಸಾಹ ಕೊಡ್ತಾರೆ..! ನಾವುಗಳು ಟಿವಿಯಲ್ಲಾದರೂ ನೋಡಿ ಕ್ರೀಡಾಪಟುಗಳಿಗೆ ಪ್ರೋತ್ಸಾಹ ಕೊಡೋಣ..! ಏನಂತೀರಾ..?

  • ಶಶಿಧರ ಡಿ ಎಸ್ ದೋಣಿಹಕ್ಲು

If you Like this Story , Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : [email protected]

POPULAR  STORIES :

ಗೂಳಿಯ ಹೊಟ್ಟೆಯಲ್ಲಿತ್ತು 20 ಕೆ.ಜಿ ಪ್ಲಾಸ್ಟಿಕ್..!

ಭಾರತದ ಈ ಸಾಹಸಿ ಬೈಕಿನಲ್ಲೇ ಒಂದುವರೆ ವರ್ಷದಲ್ಲಿ 5 ಖಂಡ, 14 ದೇಶಗಳನ್ನು ಸುತ್ತಿದ..!

ಏನೇನೋ ಕಂಡುಹಿಡಿಯುವವರ ನಡುವೆ ಇನ್ನೇನೋ ಕಂಡುಹಿಡಿಯುವ ನಮ್ಮ ಹುಡುಗ..! ಇವನು ಪಕ್ಕಾ ಕನ್ನಡದ ಸೈಂಟಿಸ್ಟ್

ಬೆಂಗಳೂರಿಗೂ ಬಂತು ತ್ರಿಡಿ ಬಾಬಾ ಫೋಟೋ..! ಈ ಫೋಟೋದ ವಿಶೇಷತೆ ಏನು ಗೊತ್ತಾ..?

ಆ್ಯಪಲ್ ತಿನ್ನೋಕೆ ಮುಂಚೆ ಈ ವೀಡಿಯೋ ತಪ್ಪದೇ ನೋಡಿ..!

ದುಡ್ಡು ಮಾಡೋದು ಹೇಗೆ ಗೊತ್ತಾ..? ನೀವು ಬೇಜಾನ್ ದುಡ್ಡು ಮಾಡ್ಬೇಕೆ..? ಹಾಗಾದ್ರೆ ಈ ಸ್ಟೋರಿ ಓದಿ..!

ಈ ವ್ಯಾಪಾರಿ ಅದೆಂಥಾ “ಬುದ್ಧಿವಂತ ಮೋಸಗಾರ..”! ಇವನ ಮೋಸ ತಿಳಿಯಲು ಈ ವೀಡಿಯೋವನ್ನು ಕನಿಷ್ಟ ಎರಡೆರಡು ಸಲ ಗಮನವಿಟ್ಟು ನೋಡ್ಲೇಬೇಕು..!

ಈ ಗೂಗಲ್ ಟ್ರಿಕ್ಸ್ ಗಳು ನಿಮಗೆ ಗೊತ್ತಾ..!

10,000 ಇದ್ದ ಆದಾಯ 693ಕೋಟಿ ಹೇಗಾಯ್ತು ಗೊತ್ತಾ..?

ಭಾರತದ ಇತಿಹಾಸ ಹಾಗೂ ಅಪೂರ್ವ ಸಾಧನೆಯನ್ನು ತೋರಿಸೋ ಅದ್ಭುತ ಸ್ಯಾಂಡ್ ಆರ್ಟ್.!

ಪಳಪಳನೆ ಹೊಳೆಯುವ ಕೂದಲಿಗಾಗಿ ಕೋಕ ಕೋಲಾ ಬಳಸಿ..!

 ವಯಸ್ಸು 25, ಆಸ್ತಿ 137697000000.00 ಚಿಕ್ಕ ವಯಸ್ಸಿನಲ್ಲಿ ಅಷ್ಟು ಹಣಗಳಿಸಿದ್ದು ಹೇಗೆ ಗೊತ್ತಾ..?

ಭಾರತದಲ್ಲಿ ಭಾರತೀಯರಿಗೆ “ನೋ ಎಂಟ್ರಿ” ಭಾರತೀಯರಿಗೇ ಪ್ರವೇಶ ನೀಡದ ಭಾರತದ ಸ್ಥಳಗಳು..!

ಭಕ್ತಿ ಹೆಸರಲ್ಲಿ ಭಕ್ತರಿಂದಲೇ ಗಣೇಶನಿಗೆ ಅವಮಾನ..! ಈ ವೀಡೀಯೋ ನೋಡಿ, ಏನ್ಮಾಡ್ಬೇಕು ಅಂತ ನೀವೇ ಹೇಳಿ

LEAVE A REPLY

Please enter your comment!
Please enter your name here