ಮುಂಬೈ- 25 ವರ್ಷದ ಮಹಿಳೆ, ತನ್ನ ಪತಿಯ ಮರಣದ ನಂತರ 6ವರ್ಷದ ಮಗನ ವೆಚ್ಚ ಭರಿಸಲಾಗದೆ ಕತ್ತು ಹಿಸುಕಿ ಸಾಯಿಸಿ, ಶತಾಬ್ಧಿ ಆಸ್ಪತ್ರೆಗೆ ತನ್ನ ಮಗನಿಗೆ ಹುಶಾರಿಲ್ಲ ಎಂದು ಕರೆದೊಯ್ದಿದ್ದಾಳೆ.
ಸವಿತ್ರ ದರ್ನಲೆ ಸಿಕ್ಕಿ ಬಿದ್ದಿದ್ದು, ಅಕೆಯ ಮಗ ದೇವರಾಜ ಈಗಾಗಲೇ ಮೃತಪಟ್ಟಿದ್ದು, ಅವನ ಸಾವು ಅಸ್ವಭಾವಿಕವಾಗಿದೆ ಎಂದು ಪತ್ತೆ ಹಚ್ಚಿದ್ದಾರೆ. ಪರೀಕ್ಷೆಯ ಸಂದರ್ಭದಲ್ಲಿ ದೇವರಾಜನ ಕುತ್ತಿಗೆಯ ಭಾಗದಲ್ಲಿ ಕೈ ಬೆರಳಿನಿಂದ ಒತ್ತಿದ ಗುರುತುಗಳು ಪತ್ತೆಯಾಗಿದ್ದು, ಆರ್.ಸಿ.ಎಫ್ ಪೊಲೀಸರಿಗೆ ಮಹಿತಿ ನೀಡಿದ್ದಾರೆ. “ ವೈದ್ಯರು ನೀಡಿದ ವರದಿಯ ಪ್ರಕಾರ ಮಗುವಿನ ತಾಯಿಯನ್ನು ವಶಕ್ಕೆ ಪಡೆದಿದ್ದೇವೆ. ಆಕೆ ತನ್ನ ಮಗ ಕಳೆದೆರಡು ದಿನಗಳಿಂದ ಅಸ್ವಸ್ಥನಾಗಿದ್ದ ಎಂದು ಎಂದು ಸುಳ್ಳು ಹೇಳಿದ್ದಾಳೆ. ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ಸತ್ಯವನ್ನು ಒಪ್ಪಿಕೊಂಡಿದ್ದಾಳೆ. ಆಕೆಯನ್ನು ಕೊಲೆ ಪ್ರಕರಣದಡಿಯಲ್ಲಿ ಬಂಧಿಸಲಾಗಿದೆ ” ಎಂದು ಪೊಲೀಸ್ ಉಪ ಆಯುಕ್ತ (ಝೋನ್ 6) ರಾದ ಉಪಮ್ ಶಾಹಜಿ ತಿಳಿಸಿದ್ದಾರೆ.
“ಗುಲ್ಬರ್ಗ ಮೂಲದ ಈಕೆ, ಕೂಲಿ ಕಾರ್ಮಿಕನ್ನು ಮದುವೆಯಾಗಿದ್ದು, ಆತ 4 ವರ್ಷದ ಹಿಂದೆ ತೀರಿಕೊಂಡಿದ್ದಾನೆ. ಪತಿಯ ನಿಧನದ ನಂತರ ಮಗ ಸೆಳೆತಕ್ಕೆ ಒಳಗಾಗಿದ್ದ. ಆಗ ಉಳಿದ ಕೊಳ್ಳಲು ಸಹ ಜಾಗವಿರಲಿಲ್ಲ. ಬಾರ್ ಹುಡುಗಿಯ ಸಹಾಯದಿಂದ ಸ್ಥಳಿಯವಾಗಿ ಕೆಲಸ ಗಿಟ್ಟಿಸಿಕೊಂಡ ಆಕೆ ಚೆಂಬೂರ್ ನಲ್ಲಿ ಉಳಿದುಕೊಂಡಳು. ಮತ್ತೆರಡು ಕಡೆಗಳಲ್ಲಿ ಕೆಲಸ ಮಾಡಿ ತಿಂಗಳಿಗೆ 4ಸಾವಿರ ಗಳಿಸುತ್ತಿದ್ದಳು. ಆದರೆ ದೇವರಾಜ ಇತ್ತೀಚೆಗೆ, ಮತ್ತೆ ಸೆಳೆತಕ್ಕೆ ಒಳಗಾಗುತ್ತಿದ್ದ ಮತ್ತು ಅವನ ವೈದ್ಯಕೀಯ ಚಿಕಿತ್ಸೆಗೆ ಹಣ ಹೊಂದಿಸುವುದು ಕಷ್ಟವಾಗುತ್ತಿತ್ತು” ಎಂದು ಶಾಹಜಿ ತಿಳಿಸಿದ್ದಾರೆ.
POPULAR STORIES :
ದಿ ನ್ಯೂ ಇಂಡಿಯನ್ ಟೈಮ್ಸ್ ಮೊದಲ ವಾರ್ಷಿಕೋತ್ಸವ
ನೀವೂ ಯೂಟ್ಯೂಬ್‍ನಲ್ಲಿ ವಿಡಿಯೋ ನೋಡ್ತೀರಾ..? ಇಲ್ಲಿವೆ 15 ಯೂಟ್ಯೂಬ್ ಟ್ರಿಕ್ಸ್..!
ಮುಂಬೈನ ಮರೀನ್ ಡ್ರೈವ್‍ನಲ್ಲಿರೋ ಕಲ್ಲುಗಳೇಕೆ ಹೀಗಿವೆ ಗೊತ್ತಾ.?
ಬಟ್ಟೆ ಕಳಚಿ ಬೆತ್ತಲಾದ್ರು ಆ ದೇಶದ ಜನ.. ಬೆತ್ತಲಾಗೇ ಮಾಡಿದ್ರು ಕಚೇರಿ ಕೆಲಸ ಯಾಕೆ ಗೊತ್ತಾ..?
ನಿರ್ದೇಶಕನ ಬೆವರಿಳಿಸಿದ ಜಗ್ಗುದಾದ.. ರಾಘವೇಂದ್ರ ಹೆಗಡೆ ಮೈ ಚಳಿ ಬಿಡಿಸಿದ ದರ್ಶನ್..!