ಉಗ್ರಂ, ರಥಾವರ ಹಿಟ್ ಸಿನಿಮಾಗಳ ಮೂಲಕ ಸ್ಯಾಂಡಲ್‍ವುಡ್‍ನಲ್ಲಿ ಮಿಂಚಿದ ರೋರಿಂಗ್ ಶ್ರೀಮುರಳಿ ಮತ್ತೊಂದು ಸಿನಿಮಾ ಬಿಡುಗಡೆ ಮಾಡಲು ಸಿದ್ಧವಾಗಿದ್ದಾರೆ. ಮಫ್ತಿ ಸಿನಿಮಾದ ಮೂಲಕ ಮತ್ತೆ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳಲಿರೋ ಶ್ರೀಮುರಳಿಗೆ ಹ್ಯಾಟ್ರಿಕ್ ಹೀರೋ ಶಿವಣ್ಣ ಕೂಡ ಸಾಥ್ ನೀಡಿದ್ದಾರೆ.! ಇನ್ನು ಸೆಂಚುರಿ ಸ್ಟಾರ್- ರೋರಿಂಗ್ ಸ್ಟಾರ್ ಕಾಂಬಿನೇಷನ್‍ನಲ್ಲಿ ರೆಡಿಯಾಗ್ತಿರೋ ಮಫ್ತಿ ಸಿನಿಮಾ ಟೀಸರ್ ಶ್ರೀಮುರಳಿ ಬರ್ತ್‍ಡೇ ಗಿಫ್ಟಾಗಿ ನಿನ್ನೆ ರಾತ್ರಿ ಯೂಟ್ಯೂಬ್ ರಿಲೀಸ್ ಆಗಿದೆ. ಇಂದು ಮುರಳಿ ಜನ್ಮದಿನ. ಹೀಗಾಗಿ ಅಭಿಮಾನಿಗಳಿಗೆ ಮಫ್ತಿ ಟೀಸರ್ ಮೂಲಕ ದೊಡ್ಡ ಉಡುಗೊರೆಯನ್ನು ನೀಡಿದ್ದಾರೆ. ಈಗಾಗ್ಲೇ ಮಫ್ತಿ ಸಿನಿಮಾ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದು, ದೇಶದಲ್ಲೇ ಹೊಸ ಟ್ರೆಂಡ್ ಮೂಡ್ಸಿದೆ.(ದೇಶದಲ್ಲೇ ಮಫ್ತಿ ಟೀಸರ್‍ಗೆ 8ನೇ ಸ್ಥಾನ) ಕೇವಲ ಸಿನಿಮಾ ಟೀಸರ್ ಇಷ್ಟೊಂದು ಹವಾ ಎಬ್ಬಿಸಿದ್ದು ಮಫ್ತಿ ಸಿನಿಮಾ ಯಾವಾಗ ತೆರೆ ಕಾಣುತ್ತೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು. ಇನ್ನು ಈ ಸಿನಿಮಾಗೆ ನರ್ತನ್ ಆಕ್ಷನ್ ಕಟ್ ಹೇಳಿದ್ದು, ಜಯಣ್ಣ-ಭೋಗೇಂದ್ರ ನಿರ್ಮಾಣದಲ್ಲಿ ಮೂಡಿಬರ್ತಾ ಇದೆ ಮಫ್ತಿ. ಶ್ರೀಮುರಳಿಗೆ ಜೊತೆಯಾಗಿ ಶಾನಿ ಶ್ರೀವಾತ್ಸವ ಕಾಣಿಸಿಕೊಂಡಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಆರ್‍ಟಿಇ ಪ್ರವೇಶ: ಜನವರಿ 15ರಿಂದ ಅರ್ಜಿ ಸ್ವೀಕೃತಿ, ಆಧಾರ್ ಕಡ್ಡಾಯ
ಬಿಗ್‍ಬಾಸ್ ಮನೆಯಲ್ಲಿ ಸಖತ್ ವಾಕ್ಸಮರ..! Kirik vs Pratham
ದರ್ಶನ್‍ರನ್ನು ಬಿಗ್‍ಬಾಸ್ ವೇದಿಕೆಗೆ ಕರ್ದಿದೀರಾ ಎಂಬ ಅಭಿಮಾನಿಯ ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರವೇನು..?
ಗುಡ್ ನ್ಯೂಸ್: ಚಿನ್ನದ ಬೆಲೆ 3000ರೂ ಇಳಿಕೆ..!
ನೀವು ಸ್ಮಾರ್ಟ್ ಫೋನ್ ಯೂಸ್ ಮಾಡ್ತೀರಾ..? ಹಾಗಾದ್ರೆ ಈ ಸ್ಟೋರಿ ಓದಿ..!
ಕುಡುಕರಿಗೆ ಶಾಕ್ ಕೊಟ್ಟ ಸುಪ್ರೀಂ: ದೇಶದ ಎಲ್ಲಾ ಹೆದ್ದಾರಿಗಳಲ್ಲಿನ ಬಾರ್, ವೈನ್ ಶಾಪ್ ಬಂದ್…!