ಮನೆಯ ಸಮಸ್ಯೆಗಳು ಕೆಲವೊಮ್ಮೆ ಕೊಲೆಗಳಿಗೆ ಕಾರಣವಾಗುತ್ತವೆ. ಅಡುಗೆ ಸಮಸ್ಯೆ, ಪತ್ನಿಯ ಕಾಟ, ಹಣದ ಕೊರತೆ ಇತ್ಯಾದಿ ಇತ್ಯಾದಿ ಕಾರಣಗಳಿಂದಾಗಿ ಕೊಲೆಗಳು ನಡೆಯುತ್ತವೆ. ಆದರೆ ಮಗನ ಕಟಿಂಗ್ ಸ್ಟೈಲ್ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಕೊಲೆ ಮಾಡಿದ್ದನ್ನು ಕೇಳಿದ್ದೀರಾ..? ಬಹುಶಃ ಇಲ್ಲ ಎನ್ನಿಸುತ್ತದೆ. ಆದರೆ ಅಂಥದ್ದೊಂದು ವಿಚಿತ್ರ ಘಟನೆ ನಡೆದಿದೆ. ಕೇಳೋಕೆ ವಿಚಿತ್ರ ಎನಿಸಿದರೂ ಇದು ನಿಜವಾಗಿ ನಡೆದ ಘಟನೆ. ಮಗನ ಹೇರ್ ಸ್ಟೈಲ್ ಇಷ್ಟವಾಗಲಿಲ್ಲ ಅಂತಾ ತಂದೆಯೋರ್ವ ಹೆಂಡ್ತಿ, ಆರು ಮಕ್ಕಳು ಹಾಗೂ ತಾಯಿಯನ್ನು ಕೊಡಲಿಯಿಂದ ಕೊಚ್ಚಿ ಹಾಕಿದ್ದಾನೆ.
ರಷ್ಯಾದ ಒಲೆಗ್ ಬೆಲೊವ್ ಎಂಬ ವ್ಯಕ್ತಿ ಹೆಂಡತಿ ಮತ್ತು ಅರು ಮಕ್ಕಳೊಂದಿಗೆ ವಾಸಿಸುತ್ತಿದ್ದ. ಒಲೆಗ್ ಹೆಂಡತಿ ತನ್ನ 6 ವರ್ಷದ ಮಗನ ತಲೆಕೂದಲನ್ನು ವಿಭಿನ್ನವಾಗಿ ಕತ್ತರಿಸಿದ್ದಳು. ಇದು ಒಲೆಗ್ಗೆ ಇಷ್ಟವಾಗಿರಲಿಲ್ಲ. ಇದೇ ವಿಷಯಕ್ಕಾಗಿ ಹೆಂಡ್ತಿ ಜೊತೆ ಜಗಳ ತೆಗೆದ. ಗಂಡ ಹೆಂಡತಿ ನಡುವೆ ವಾಗ್ವಾದ ನಡೆಯಿತು. ವಾಗ್ವಾದ ನಡೆಯುವಾಗ ಒಲೆಗ್ ಇದ್ದಕ್ಕಿದ್ದಂತೆ ತನ್ನ ಗರ್ಭಿಣಿ ಪತ್ನಿಯನ್ನು ಕೊಡಲಿಯಿಂದ ಕತ್ತರಿಸಿದ್ದಾನೆ. ಈ ದೃಶ್ಯವನ್ನು ನೋಡಿದರೆಂಬ ಕಾರಣಕ್ಕೆ ತನ್ನ 6 ಮಕ್ಕಳನ್ನು ಕೂಡಾ ಕೊಡಲಿಯಿಂದ ಕೊಚ್ಚಿ ಹಾಕಿದ್ದಾನೆ.
ಇಷ್ಟಕ್ಕೆ ಸುಮ್ಮನಾಗದೇ ತನ್ನ ತಾಯಿಯ ಮನೆಗೆ ಹೋಗಿ ಆಕೆಯನ್ನು ಕೊಚ್ಚಿ ಹಾಕಿದ್ದಾನೆ. ಎಲ್ಲಾ ಮೃತ ದೇಹಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ತುರುಕಿದ್ದಾನೆ. ನಂತರ ಕೋರ್ಟ್ ಎದುರು ಶರಣಾಗಿದ್ದಾನೆ. ತಾನು ಮಾಡಿದ ಘನಂಧಾರಿ ಕೃತ್ಯವನ್ನು ವಿವರಿಸಿದ್ದಾನೆ. ಇದರಿಂದ ಈಗ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ..!
- ರಾಜಶೇಖರ ಜೆ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಒಂಟೆಗೆ ಮುತ್ತಿಕ್ಕಿದಳು ಆತ ಡೈವೋರ್ಸ್ ಕೊಟ್ಟ..! ಇದು ಒಂ(ಟೆ)ದು ಮುತ್ತಿನ ಕಥೆ..!
ಕೂಲಿಯ ಮಗ ಇವತ್ತು 100 ಕೋಟಿ ಒಡೆಯ..! ಆರನೇ ಕ್ಲಾಸ್ ಫೇಲ್ ಆಗಿದ್ದ ಹುಡುಗ ಇವತ್ತು ಕೋಟ್ಯಾಧಿಪತಿ..!
ಹುಚ್ಚು ಪರಪಂಚದಲ್ಲಿ ಹುಚ್ಚ ವೆಂಕಟ್ ಗಾನಸುಧೆ.. !
ಎಂದೂ ತೆರಿಗೆ ಕಟ್ಟದ ಗಲ್ಫ್ ಪ್ರಜೆಗಳು ಇನ್ಮುಂದೆ ತೆರಿಗೆಕಟ್ಟಲೇ ಬೇಕು..!