ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇದ್ದು, ಅಡುಗೆ ಮಾಡಲು ಮರೆತ ತಪ್ಪಿಗೆ ಪತ್ನಿ ಪತಿಯಿಂದಲೇ ಬರ್ಬರವಾಗಿ ಹತ್ಯೆಯಾದ ಘಟನೆ ಕೋಲ್ಕಾತ್ತಾದ ಚೆಟ್ಲಾ ಪ್ರದೇಶದ ಅಲಿಪೊರೆ ರಸ್ತೆಯಲ್ಲಿ ನಡೆದಿದೆ.
ಸುರಜಿತ್ ಪಾಲ್ ಆರೋಪಿ. ಈತನ 36ವರ್ಷದ ಪತ್ನಿ ಟುಂಪಾ ಕೊಲೆಯಾದಕೆ. ಪತ್ನಿ ಟುಂಪಾ ಗೆ ಅಕ್ರಮ ಸಂಬಂಧವಿದ್ದು ಹೆಚ್ಚಿನ ಸಮಯವನ್ನು ಸೋಶಿಯಲ್ ಮೀಡಿಯಾದಲ್ಲಿ ಕಳೀತಾಳೆ ಎಂದು ಶಂಕಿಸಿ ಸುರಜಿತ್ ಪಾಲ್ ಕೊಲೆಗೈದಿದ್ದಾನೆ ಎಂದು ತಿಳಿದುಬಂದಿದೆ.
ಜನವರಿ 24 ರಂದು ಮಧ್ಯಾಹ್ನ ಸುರಜಿತ್ ಮನೆಗೆ ಊಟಕ್ಕೆ ಬಂದಾಗ ಪತ್ನಿ ಮೊಬೈಲ್ ನಲ್ಲಿ ಬ್ಯುಸಿ ಇದ್ದಳು. ಅಡುಗೆ ಮಾಡೋದನ್ನು ಮರೆತಿದ್ದಳು. ಇದರಿಂದ ಕೋಪಗೊಂಡ ಸುರಜಿತ್ ಚಾಕು ತೋರಿಸಿ ಬೆದರಿಸಿದ್ದಾನೆ. ಆದ್ರೂ ಟುಂಪಾ ಮೊಬೈಲ್ ನಲ್ಲೇ ಮುಳುಗಿದ್ದಾಗ ಮತ್ತಷ್ಟು ಕೋಪ ಬಂದು ಸುರಜಿತ್ ಟುಂಪಾಳ ತಲೆ ಇರಿದಿದ್ದಾನೆ…! ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ.
ನಂತರ ತಾನು ಮಣಿಕಟ್ಟು ಕೊಯ್ದುಕೊಂಡು ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾನೆ. ಸಾಧ್ಯಾವಗದೇ ಇದ್ದಾಗ ಬ್ಯಾಂಡೇಜ್ ಸುತ್ಕೊಂಡು ಪರಾರಿ ಆಗಲು ಯತ್ನಿಸಿದ್ದಾನೆ. ಆರೋಪಿಯನ್ನ ಪೊಲೀಸರು ಬಂಧಿಸಿದ್ದಾರೆ.