ರೈ… ಅನ್ ಟೋಲ್ಡ್ ಸ್ಟೋರಿಗೆ ಮುಹೂರ್ತ ಫಿಕ್ಸ್..!

Date:

ರೈ… ಕನ್ನಡದ ಬಹು ನಿರೀಕ್ಷಿತ ಚಿತ್ರ… ಸಾಕಷ್ಟು ಕೂತುಹಲವನ್ನ ಹುಟ್ಟಿಸಿರುವ ಈ ಚಿತ್ರದ ಫಸ್ಟ್ ಲುಕ್ ಇಂದು ಬಿಡುಗಡೆಯಾಗಲಿದೆ. ಮೋಸ್ಟ್ ಎಕ್ಸ್ ಪೆಕ್ಟೆಡ್ ರೈ ಚಿತ್ರದ ಫಸ್ಟ್ ಲುಕ್ ಲಾಂಚ್ ಕಾರ್ಯಕ್ರಮ ಇಂದು ಸಂಜೆ ಅದ್ದೂರಿಯಾಗಿ ನಡೆಯಲಿದೆ. ಇಷ್ಟಕ್ಕೂ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಮುತ್ತಪ್ಪ ರೈ ರವರ ಬಿಡದಿ ಮನೆಯ ಬಳಿಯಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದೆ.
ನೈಜ ಘಟನೆಗಳಾಧರಿತ ಈ ಸಿನಿಮಾದ ಅದ್ದೂರಿ ಮುಹೂರ್ತ ಸಮಾರಂಭ, ಮುತ್ತಪ್ಪ ರೈರವರ ಹುಟ್ಟುಹಬ್ಬದಂದು ಅಂದ್ರೆ ಇಂದು ಅವರ ನಿವಾಸದಲ್ಲೇ ನೆರವೇರಲಿದೆ. ಅಲ್ಲಿಗೆ ಮುತ್ತಪ್ಪ ರೈ ಅಭಿಮಾನಿಗಳಿಗೆ ಇಂದು ಡಬಲ್ ಧಮಾಕದ ಅನುಭವವಾಗಲಿದೆ.. ಒಂದುಕಡೆ ರೈರವರ ಹುಟ್ಟುಹಬ್ಬದ ಸಂಭ್ರಮವಾದರೆ ಮತ್ತೊಂದೆಡೆ ರೈ ಜೀವಾನಾಧರಿತ ಚಿತ್ರದ ಫಸ್ಟ್ ಲುಕ್ ಲಾಂಚ್.
ಇನ್ನು ತೆರೆ ಮೇಲೆ ಮುತ್ತಪ್ಪ ರೈ ಆಗಿ ರಾರಾಜಿಸುತ್ತಿರುವುದು ಬಾಲಿವುಡ್ ನಟ, ಕರ್ನಾಟಕದ ಅಳಿಯ ವಿವೇಕ್ ಓಬೆರಾಯ್. ಈ ಮೂಲಕ ಆರ್.ಜಿ.ವಿಯ ಆಲ್ ಟೈಂ ಫೇವರೇಟ್ ನಟ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ. ಇನ್ನು ಮುತ್ತಪ್ಪ ರೈ ಪಾತ್ರಕ್ಕೆ ವಿವೇಕ್ ಹೇಳಿ ಮಾಡಿಸಿದ ವ್ಯಕ್ತಿ.. ರಗಡ್ ಲುಕ್‌ನಲ್ಲಿ ಕಿಕ್ ಕೊಡುವ ಈ ಬಿಟೌನ್‌ನ ಪ್ರಿನ್ಸ್ ಮೇಲೆ ನಿರ್ದೇಶಕ ಆರ್ ಜಿ ವಿ ಗೂ ಅಷ್ಟೇ ಪ್ರೀತಿ.
ಸಾಮಾಜಿಕ ಹೋರಾಟಗಾರರೂ, ಜೈ ಕರ್ನಾಟಕ ಸಂಸ್ಥಾಪಕ ಅಧ್ಯಕ್ಷರೂ ಆಗಿರುವ ಮುತ್ತಪ್ಪ ರೈರವರ ಜೀವನ ಚರಿತ್ರೆಯ ಸಂಪೂರ್ಣ ಪರಿಚಯ, ರೈ ಚಿತ್ರದಲ್ಲಾಗಲಿದೆ. ಇದಕ್ಕೆ ಬೇಕಾದ ಸಕಲ ಸಿದ್ದತೆಗಳನ್ನ ಮಾಡಿಕೊಂಡಿರುವ ರಾಮ್ ಗೋಪಾಲ್ ವರ್ಮಾ, ಹೊಸದೊಂದು ಅಧ್ಯಾಯಕ್ಕೆ ಮುನ್ನುಡಿ ಬರೆಯಲು ಅಣಿಯಾಗ್ತಿದ್ದಾರೆ..
ಭೂಗತ ಲೋಕದ ಅಸಲಿ ಸತ್ಯವನ್ನ ಹೇಳಲು ಹೊರಟಿರುವ ಆರ್ ಜಿ ವಿ, ಮುತ್ತಪ್ಪ ರೈ ಅವರ ಬಗ್ಗೆ ಗೊತ್ತಿರದ ಅನೇಕ ಸಂಗತಿಗಳನ್ನ ಅನಾವರಣಗೊಳಿಸಲಿದ್ದಾರೆ.. ಸಂಪೂರ್ಣ ವಿಶೇಷ ಹಾಗು ವಿಶಿಷ್ಠವಾಗಿರುವ ಈ ಚಿತ್ರದಲ್ಲಿ ಇನ್ನು ಯಾರೆಲ್ಲ ಅಭಿನಯಿಸಲಿದ್ದಾರೆ ಅನ್ನೋ ಕುತೂಹಲಕ್ಕೆ ಇಂದು ತೆರೆ ಬೀಳೋ ಸಾಧ್ಯತೆ ಇದೆ. ಅಂದ ಹಾಗೇ ಈ ಚಿತ್ರ ನಾಲ್ಕು ಭಾಷೆಗಳಲ್ಲಿ ಮೂಡಿ ಬರಲಿದ್ದು ಚಿತ್ರದ ಮೇಕಿಂಗ್ ಅದ್ದೂರಿಯಾಗಿರಲಿದೆ.
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಚಿತ್ರಕ್ಕೆ ಸಿ.ಆರ್.ಮನೋಹರ್ ಬಂಡವಾಳ ಹೂಡುತ್ತಿದ್ದಾರೆ. ಸದ್ಯ ಇಂದು ಅಪೂರ್ವ ಕ್ಷಣಕ್ಕೆ, ರೈ ನಿವಾಸ ಸಜ್ಜಾಗುತ್ತಿದೆ. ಅದೇನೆ ಇದ್ದರೂ ಎಲ್ಲಾ ಭಾಷೆಯ ಕಲಾವಿದರ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಲಿರುವ ಮುತ್ತಪ್ಪ ರೈ ಅವರ ಈ ಅನ್ ಟೋಲ್ಡ್ ಸ್ಟೋರಿ ಮುಂದಿನ ದಿನಗಳಲ್ಲಿ ಭರ್ಜರಿ ಸೌಂಡ್ ಮಾಡೋದು ಗ್ಯಾರಂಟಿ.

  • ಶ್ರೀ

POPULAR  STORIES :

ಮದ್ವೆಗೂ ಮುನ್ನವೇ ಮಕ್ಕಳನ್ನು ಹೆತ್ತರು..!? ಮೊದಲು ಅಮ್ಮ ಆಗ್ತೀನಿ, ಆಮೇಲೆ ಮದ್ವೆ ಎಂದಳು ಶೃತಿ..!

ಯೂಟ್ಯೂಬ್ ನಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ ಸಿಂಹದ ರಿಯಲ್ ಸ್ಟೋರಿ..!

ಒಸಾಮಾ ಬಿನ್ ಲಾಡೆನ್ ಸತ್ತಿಲ್ಲ..!? ಅಮೆರಿಕಾ ಮುಚ್ಚಿಟ್ಟ ಘೋರ ಸತ್ಯವೇನು..?

ಲವ್ ಇನ್ ಫೇಸ್ ಬುಕ್.. ಫ್ರಾನ್ಸ್ ಹುಡುಗಿ ಪುಣೆಯ ಹುಡುಗನ ರೋಮಾಂಚಕ ಸ್ಟೋರಿ

Share post:

Subscribe

spot_imgspot_img

Popular

More like this
Related

ಸಮಾಜದಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ FIR: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ಸಮಾಜದಲ್ಲಿ ದ್ವೇಷಪೂರಿತ ಭಾಷಣ ಮಾಡುವವರ ವಿರುದ್ಧ FIR: ಸಿಎಂ ಸಿದ್ದರಾಮಯ್ಯ ಎಚ್ಚರಿಕೆ ಮಂಗಳೂರು:...

ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ ದಾಳಿ!

ನಡು ರಸ್ತೆಯಲ್ಲೇ ಹಲ್ಲೆ; ಮಾಜಿ ಶಾಸಕ ಬೆಳ್ಳಿ ಪ್ರಕಾಶ್ ಅಳಿಯನ ಮೇಲೆ...

ಕರ್ನಾಟಕದಲ್ಲಿ ವರುಣಾರ್ಭಟ: ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್​ ಘೋಷಣೆ

ಕರ್ನಾಟಕದಲ್ಲಿ ವರುಣಾರ್ಭಟ: ಉತ್ತರ ಕನ್ನಡ ಜಿಲ್ಲೆಗೆ ಆರೆಂಜ್ ಅಲರ್ಟ್​ ಘೋಷಣೆ ಬೆಂಗಳೂರು: ರಾಜ್ಯದಾದ್ಯಂತ...

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ!

ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆ 3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನ! ಬೆಂಗಳೂರು:...