ಯುವಕರಿಬ್ಬರು ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ ಘಟನೆ ಮೈಸೂರಿನ ಪಂಚವಟಿ ವೃತ್ತದ ಬಳಿಯ ಲಾಸ್ಟ್ ಅಂಡ್ ಫೌಂಡ್ ಪಬ್ ನಲ್ಲಿ ನಡೆದಿದೆ.
ಉಮೇಶ್ ಕುಮಾರ್ ಹಾಗೂ ವಿವೇಕ್ ಆರೋಪಿಗಳು. ಇವರು ಯುವತಿಯ ಕೈ ಹಿಡಿದು ಬಟ್ಟೆ ಹಿಡಿದು ಎಳೆದಾಡಿದ್ದಾರೆ ಎನ್ನಲಾಗಿದ್ದು, ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.