ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ಪ್ರೊಫೆಸರ್ ಶರಣಪ್ಪ ವೈಜಿನಾಥ ಹಲ್ಸೆ ಅವರನ್ನು ನೇಮಿಸಿ ರಾಜ್ಯಪಾಲರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ನೂತನ ಕುಲಪತಿಗಳಾಗಿ ನೇಮಕಗೊಂಡಿರುವ ಪ್ರೊಫೆಸರ್ ಶರಣಪ್ಪ ವೈಜಿನಾಥ ಹಲ್ಸೆ ಅವರ ಅಧಿಕಾರ ಅವಧಿ ಮೂರು ವರ್ಷಗಳು ಇರಲಿದೆ. ಪ್ರೊಫೆಸರ್ ಶರಣಪ್ಪ ವೈಜಿನಾಥ ಹಲ್ಸೆ ಅವರು ವಿಜಯಪುರದಲ್ಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಪ್ರಾಧ್ಯಾಪಕರಾಗಿದ್ದರು. ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ನೂತನ ಕುಲಪತಿಯಾಗಿ ಪ್ರೊಫೆಸರ್ ಶರಣಪ್ಪ ವೈಜಿನಾಥ ಹಲ್ಸೆ ಅವರು ಶುಕ್ರವಾರವೇ ಅಧಿಕಾರ ಸ್ವೀಕರಿಸಿದ್ದಾರೆ.