ಭಾರತದ ಪ್ರಮುಖ ನಗರಗಳು ಶೀಘ್ರದಲ್ಲೇ ಮುಳುಗಲಿವೆ ಎಂದು ನಾಸಾ ಎಚ್ಚರಿಸಿದೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ ಡಿಎಂಎ )ಸಿದ್ಧಪಡಿಸಿದ ನಗರ ಪ್ರವಾಹ ನಿರ್ವಹಣೆ ವರದಿ ದೇಶದ ನಗರಗಳಲ್ಲಿ ನಡೆಯುತ್ತಿರುವ ಕಾಂಕ್ರಿಟೀಕರಣದಿಂದ ಬಹುದೊಡ್ಡ ಸಮಸ್ಯೆ ಸೃಷ್ಟಿಸಲಿದೆ ಎಂದು ಈಗಾಗಲೇ ಎಚ್ಚರಿಕೆ ನೀಡಿದೆ. ಕೇಂದ್ರ ನಗರಾಭಿವೃದ್ಧಿ ಸಚಿವಾಲಯ 2050ರ ಹೊತ್ತಿಗೆ ದೇಶದ ಕನಿಷ್ಠ ಶೇ. 50 ರಷ್ಟು ಪ್ರದೇಶಗಳು ನಗರೀಕರಣಗೊಂಡಿರುತ್ತವೆ ಎಂದು ಹೇಳಿದೆ.
ಹೀಗಾದಾಗ ನೈಸರ್ಗಿಕವಾಗಿ ನೀರಿನ ಹರಿವಿಗೆ ಅವಕಾಶ ಇರಲ್ಲ. ಪರಿಣಾಮ ನಗರ ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಲಿವೆ.
ಜಾಗತಿಕ ತಾಪಮಾನ ಏರಿಕೆಯಿಂದ ಹಿಮಕರಗುತ್ತಿದ್ದು ಸಮುದ್ರದ ನೀರಿನ ಮಟ್ಟ ಈಗಾಗಲೇ ಏರಿಕೆಯಾಗಿದೆ. ಇದರಿಂದ ಸಮುದ್ರದ ದಡದಲ್ಲಿರುವ ಮಂಗಳೂರು, ಮುಂಬೈ ನಗರಗಳಿಗೆ ಅಪಾಯ ಇದೆ ಎಂದು ನಾಸಾ ಎಚ್ಚರಿಸಿದೆ.