ತುರ್ತು ಪರಿಸ್ಥಿತಿ ನೆನಪಿಸುವಂತಿದೆ ಸುದ್ದಿ ವಾಹಿನಿ ನಿಷೇಧ: ಸಂಪಾದಕರ ಸಂಘ

0
50

ಪಠಾಣ್ ಕೋಟ್ ಮೇಲೆ ಉಗ್ರರ ದಾಳಿಯ ಸಂದರ್ಭದಲ್ಲಿ ಅತೀ ಸೂಕ್ಷ್ಮ ಪ್ರದೇಶಗಳನ್ನು ಬಿತ್ತರಿಸಿದ್ದ ಭಾರತದ ಪ್ರಮುಖ ಸುದ್ದಿ ವಾಹಿನಿಯಾದ ಎನ್‍ಡಿಟಿವಿಗೆ ಕೇಂದ್ರ ಸರ್ಕಾರ 24 ಗಂಟೆಗಳ ಕಾಲ ನಿಷೇಧ ಹೇರಿದೆ. ಇದರ ಬೆನ್ನಲ್ಲೇ ಕೇಂದ್ರದ ಈ ನಡೆಯನ್ನು ಟೀಕಿಸಿರುವ ಭಾರತೀಯ ಸಂಪಾದಕರ ಸಂಘ ಸುದ್ದಿವಾಹಿನಿಯ ಮೇಲೆ ಈ ರೀತಿಯ ನಿಷೇಧ ಹೇರಿರುವುದು ಖಂಡನೀಯ. ಕೇಂದ್ರದ ಈ ಧೋರಣೆಯಿಂದ ತುರ್ತು ಪರಿಸ್ಥಿತಿ ನೆನಪಿಸುವಂತಿದೆ ಎಂದು ಟೀಕಿಸಿದ್ದಾರೆ. ಅಲ್ಲದೇ ಸುದಿವಾಹಿನಿಯ ಮೇಲೆ ಹೇರಿರುವ ನಿಷೇಧವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಇಲ್ಲವಾದಲ್ಲಿ ಇದು ಭಾರತೀಯ ನಾಗರೀಕ ಸ್ವಾತಂತ್ರ್ಯದ ನೇರ ಉಲ್ಲಂಘನೆಯಾಗಲಿದೆ ಎಂದಿದ್ದಾರೆ. ಪ್ರಸಾರ ನಿಯಮ ಉಲ್ಲಂಘನೆಯ ಅಡಿಯಲ್ಲಿ ಭಾರತೀಯ ಸುದ್ದಿವಾಹಿನಿ ಎನ್‍ಡಿಟಿವಿ ನವೆಂಬರ್ 9ರ ಮಧ್ಯರಾತ್ರಿಯಿಂದ 10ರ ಮಧ್ಯರಾತ್ರಿವರೆಗೆ 24 ಗಂಟೆಗಳ ಕಾಲ ಯಾವುದೇ ಕಾರ್ಯಕ್ರಮ, ಸುದ್ದಿ ಪ್ರಸಾರ ಮಾಡದಂತೆ ಕೇಂದ್ರ ಆದೇಶ ನೀಡಿತ್ತು. ಸುದ್ದಿವಾಹಿನಿ ಬಿತ್ತರಿಸಿದ ಎಲ್ಲಾ ಸೂಕ್ಷ್ಮ ಪ್ರದೇಶಗಳು ಉಗ್ರರ ಕೈಗೆ ಸಿಕ್ಕರೆ ದೇಶದ ಭದ್ರತೆಯ ಜೊತೆಗೆ ನಾಗರಿಕ ಸಿಬ್ಬಂದಿ ಜೀವಕ್ಕೂ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಕೇಂದ್ರ ತಿಳಿಸಿದೆ.

Like us on Facebook  The New India Times

POPULAR  STORIES :

ಇಂಡಿಯನ್ ಸ್ಟೀಲ್ ಮ್ಯಾನ್ ಸಾಹಸ ನೋಡುದ್ರೆ ಬೆಚ್ಚಿ ಬೀಳ್ತೀರ..!

ಲವ್ ಅಟ್ ಫಸ್ಟ್ ಸೈಟ್ ಅಂದ್ರೆ ಇದೇನಾ..!

ಹಾಲಿಗಿಂತ ಬಿಯರ್ ಆರೋಗ್ಯಕ್ಕೆ ಒಳ್ಳೆಯದು…!

ಟಾಪ್-2 ನಿಂದ ಮೈಕ್ರೋಮ್ಯಾಕ್ಸ್ ಔಟ್.. ನಂ.1 ಯಾರ್ ಗೊತ್ತಾ..?

LEAVE A REPLY

Please enter your comment!
Please enter your name here