ಜೀವನದಲ್ಲೊಮ್ಮೆಯಾದರೂ ಭಾರತದ ಆಸ್ಕರ್ ಎಂದೇ ಕರೆಯಲಾಗುವ ಫಿಲ್ಮ್ ಫೇರ್ ಪಡೆಯಬೇಕು ಎಂಬುದು ಪ್ರತಿಯೊಬ್ಬ ನಟ-ನಟಿಯ ಕನಸು. ಅದಕ್ಕಾಗಿಯೇ ಫಿಲ್ಮ್ ಫೇರ್ ನ್ನು ಅದ್ಭುತ ನಟ-ನಟಿಮಣಿಯರಿಗೆ ನೀಡಲಾಗುತ್ತದೆ. ಇನ್ನು ಕೆಲ ಸ್ಟಾರ್ ಗಳು ಅಪಾರ ಅಭಿಮಾನಿಗಳನ್ನು ಹೊಂದಿದ್ದರೂ, ಉತ್ತಮ ಚಿತ್ರಗಳನ್ನು ನೀಡಿದರೂ ಕೂಡಾ ಫಿಲ್ಮ್ ಫೇರ್ ಒಲಿದಿಲ್ಲ. ಅದರಲ್ಲೂ ಈ ಹತ್ತು ಸ್ಟಾರ್ಗಳಿಗೆ ಫಿಲ್ಮ್ ಫೇರ್ ಸಿಕ್ಕಿಲ್ಲ ಎಂದರೆ ಪ್ರತಿಯೊಬ್ಬರೂ ಕೂಡಾ ಅಚ್ಚರಿಯಾಗುತ್ತಾರೆ. ಇಷ್ಟಕ್ಕೂ ಆ ನತದೃಷ್ಟ ಸ್ಟಾರ್ ಗಳು ಇವರೇ ನೋಡಿ.
ಸೋನಮ್ ಕಪೂರ್
ಅನಿಲ್ ಕಪೂರ್ ಪುತ್ರಿ ಎಂಬ ಕಾರಣಕ್ಕೆ ಬಾಲಿವುಡ್ ನಲ್ಲಿ ಸೋನಮ್ಗೆ ಭರ್ಜರಿ ಸ್ವಾಗತ ಸಿಕ್ಕಿತ್ತು. ಸೋನಮ್ ನಟಿಸಿದ ಮೊದಲ ಚಿತ್ರ `ಸಾವರಿಯಾ’ಕ್ಕೆ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು. ಅಲ್ಲದೇ ಬಾಲಿವುಡ್ ಮಂದಿ ಸೋನಮ್ ಬಗ್ಗೆ ಮಾತನಾಡುವಂತೆ ಮಾಡಿತ್ತು. ತಮಿಳ್ ಸೂಪರ್ ಸ್ಟಾರ್ ಧನುಷ್ ಜೊತೆ ನಟಿಸಿದ ರಾಂಝಾನಾ ಕೂಡಾ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿತ್ತು. ಅದರಲ್ಲಿನ ಸೋನಮ್ ಪಾತ್ರಕ್ಕೆ ಪ್ರಶಂಸೆಯೂ ಲಭಿಸಿತ್ತು. ಆದರೆ ಭಾಗ್ ಮಿಲ್ಖಾ ಭಾಗ್, ದೆಹಲಿ 6, ಮೌಸಮ್ನಂತಹ ಹಿಟ್ ಗಳನ್ನು ನೀಡಿದರೂ ಕೂಡಾ ಸೋನಮ್ ಗೆ ಫಿಲ್ಮ್ಫೇರ್ ಲಭಿಸಲಿಲ್ಲ.
ಇಮ್ರಾನ್ ಹಶ್ಮಿ
ಬಾಲಿವುಡ್ ನ ಕಿಸ್ಸರ್ ಬಾಯ್ ಇಮ್ರಾನ್ ಹಶ್ಮೀಗೂ ಕೂಡಾ ಫಿಲ್ಮ್ ಫೇರ್ ಒಲಿದಿಲ್ಲ. ಫುಟ್ ಪಾತ್ ಎಂಬ ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಈ ಸ್ಟಾರ್, ಮುಂದೆ ಮರ್ಡರ್, ಗ್ಯಾಂಗ್ಸ್ಟರ್, ಆವಾರಪನ್, ಜನ್ನತ್ ಸಿರೀಸ್ ಗಳು, ರಾಝ್ ಸಿರೀಸ್ ಗಳು, ಡರ್ಟಿ ಪಿಕ್ಚರ್ಗಳಲ್ಲಿ ಅದ್ಭುತ ಅಭಿನಯ ನೀಡಿದರು. ಒಮ್ಮೆ ಫಿಲ್ಮ್ ಫೇರ್ ಗೆ ನಾಮಿನೇಷನ್ ಆದರೂ ಕೂಡಾ ಅವರಿಗೆ ಫಿಲ್ಮ್ಫೇರ್ ಲಭಿಸಲಿಲ್ಲ.
ಅಕ್ಷಯ್ ಕುಮಾರ್
ಯೆಸ್.. ಅಕ್ಷಯ್ ಕುಮಾರ್ ಗೂ ಫಿಲ್ಮ್ ಫೇರ್ ಲಭಿಸಿಲ್ಲ..! ಬಾಲಿವುಡ್ ಪಾಲಿನ ಅಕ್ಕಿ ಎಂದೇ ಗುರುತಿಸಿಕೊಂಡಿರುವ ಅಕ್ಷಯ್ ಕುಮಾರ್, ತನ್ನ ಚಿತ್ರಕ್ಕಾಗಿ ಎಂಥದ್ದೇ ರಿಸ್ಕನ್ನೂ ತೆಗೆದುಕೊಳ್ಳುತ್ತಾರೆ. ಆದರೆ ಇಲ್ಲಿಯವರೆಗೂ ಕೂಡಾ ಅಕ್ಷಯ್ ಕುಮಾರ್ ಗೆ ಫಿಲ್ಮ್ ಫೇರ್ ಪ್ರಶಸ್ತಿ ಒಲಿದು ಬಂದಿಲ್ಲ. ಮೊಹ್ರಾ, ಹೇರಾ ಫೇರಿ, ಕಿಲಾಡಿ, ಐತ್ರಾಜ್, ಸಿಂಗ್ ಈಸ್ ಕಿಂಗ್, ಹೌಸ್ ಫುಲ್, ಇನ್ಸಾಫ್, ಝುಲ್ಮೀ, ಸ್ಪೆಷಲ್ 26ನಂತಹ ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳನ್ನು ನೀಡಿದರೂ ಕೂಡಾ ಅಕ್ಷಯ್ ಕುಮಾರ್ ಫಿಲ್ಮ್ ಫೇರ್ ಪ್ರಶಸ್ತಿ ಆಯ್ಕೆದಾರರಿಗೆ ಇಷ್ಟವಾಗಲಿಲ್ಲ.
ಕತ್ರಿನಾ ಕೈಫ್
ಬಾಲಿವುಡ್ ನ ಬ್ಯೂಟಿ ಕ್ವೀನ್ ಕತ್ರಿನಾ ಕೈಫ್ ಗೆ ಇಲ್ಲಿಯವರೆಗೂ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿಲ್ಲ ಎಂದರೆ ನೀವು ನಂಬಲೇಬೇಕು. ಒಮ್ಮೆ ಫಿಲ್ಮ್ ಫೇರ್ ಪ್ರಶಸ್ತಿಗಾಗಿ ನ್ಯೂಯಾರ್ಕ್ ನಾಮ ನಿರ್ದೇಶನಗೊಂಡರೂ ಕೂಡಾ ಪ್ರಶಸ್ತಿ ಕನಸು ಮಾತ್ರ ಕನಸಾಗೆ ಉಳಿಯಿತು. ಆದರೆ ಭವಿಷ್ಯದಲ್ಲಿ ಕತ್ರಿನಾಗೆ ಫಿಲ್ಮ್ ಫೇರ್ ದಕ್ಕೇ ದಕ್ಕುತ್ತೆ ಎಂಬ ವಿಶ್ವಾಸ ಅವರ ಅಭಿಮಾನಿಗಳಲ್ಲಿದೆ.
ಜಾನ್ ಅಬ್ರಹಾಂ
ಬಾಲಿವುಡ್ ನ ಹ್ಯಾಂಡ್ಸಮ್ ಹೀರೋ ಜಾನ್ ಅಬ್ರಹಾಂ. ಬಾಲಿವುಡ್ ನ ಹಂಕ್ ಎಂದೇ ಕರೆಸಿಕೊಳ್ಳುವ ಜಾನ್ ಗೂ ಕೂಡಾ ಒಂದೂ ಫಿಲ್ಮ್ ಫೇರ್ ಪ್ರಶಸ್ತಿ ಸಿಕ್ಕಿಲ್ಲ. ಮದ್ರಾಸ್ ಕೆಫೆ, ಫೋರ್ಸ್, ಶೂಟೌಟ್ ಎಟ್ ವಡಾಲಾ ಸೇರಿದಂತೆ ಕೆಲ ಪ್ರಯೋಗಾತ್ಮಕ ಚಿತ್ರಗಳಲ್ಲಿ ನಟಿಸಿದರೂ ಕೂಡಾ ಫಿಲ್ಮ್ ಫೇರ್ ಪ್ರಶಸ್ತಿ ದೂರವೇ ಉಳಿದುಕೊಂಡಿದೆ.
ಗೋವಿಂದಾ
90ರ ದಶಕದಲ್ಲಿ ಬಾಲಿವುಡ್ ನಲ್ಲಿ ನಗೆಯ ಹೊಳೆಯನ್ನೇ ಹರಿಸಿದ ನಟ ಗೋವಿಂದಾ. ಈತ ನಟಿಸಿದ ಚಿತ್ರಗಳಲ್ಲಿ ಕಾಮಿಡಿ, ಕಾಮಿಡಿ ಮಿಶ್ರಿತ ಡ್ಯಾನ್ಸ್ ಮೂವ್ ಗಳೇ ಹೈಲೈಟ್. ಆದರೆ ಇಂಥಹ ಅನುಭವಿ ನಟನಿಗೂ ಕೂಡಾ ಫಿಲ್ಮ್ ಫೇರ್ ಪ್ರಶಸ್ತಿ ದಕ್ಕಿಲ್ಲ. ವಿಚಿತ್ರವೆಂದರೆ ಗೋವಿಂದಾ ನಟಿಸಿದ 12 ಚಿತ್ರಗಳು ಫಿಲ್ಮ್ ಫೇರ್ ನಾಮನಿರ್ದೇಶನಗೊಂಡಿದ್ದವು. ದುರಾದೃಷ್ಟಕ್ಕೆ ಒಂದೂ ಚಿತ್ರಕ್ಕೂ ಕೂಡಾ ಪ್ರಶಸ್ತಿ ಒಲಿದು ಬರಲಿಲ್ಲ.
ಧರ್ಮೇಂದ್ರ
ಒಂದು ಕಾಲದಲ್ಲಿ ಬಾಲಿವುಡ್ಡನ್ನು ಆಳಿದ ನಟ ಧರ್ಮೇಂದ್ರ. ಇವರು ನಾಯಕ ನಟನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದರು. ಸುಮಾರು 288 ಚಿತ್ರಗಳಲ್ಲಿ ನಟಿಸಿದ್ದ ಧರ್ಮೇಂದ್ರರಿಗೆ ಒಂದೂ ಫಿಲ್ಮ್ ಫೇರ್ ಪ್ರಶಸ್ತಿ ಒಲಿದುಬರಲಿಲ್ಲ. ಗರಮ್, ಫೂಲ್ ಔರ್ ಪತ್ಥರ್, ಜುಗ್ನು, ರಾಜಾರಾಣಿ, ಲೋಫರ್ ಗಳಂತಹ ಹಿಟ್ಗಳನ್ನು ಕೊಟ್ಟರೂ ಫಿಲ್ಮ್ಫೇರ್ ಪ್ರಶಸ್ತಿ ದೂರವಾಗಿಯೇ ಉಳಿಯಿತು.
ಜೀತೇಂದ್ರ
ಬಾಲಿವುಡ್ ನ ರೊಮ್ಯಾಂಟಿಕ್ ಸ್ಟಾರ್ ಎಂದೇ ಹೆಸರು ಮಾಡಿದ್ದ ಜೀತೇಂದ್ರಗೂ ಕೂಡಾ ಫಿಲ್ಮ್ ಫೇರ್ ಪ್ರಶಸ್ತಿ ಮರಿಚಿಕೆಯಾಗಿ ಉಳಿಯಿತು. ಜಸ್ಟಿಸ್ ಚೌಧರಿ, ಹಿಮ್ಮತ್ವಾಲಾ, ತೊಹ್ಫಾ, ಜಾನಿ ದುಶ್ಮನ್, ಮವ್ವಾಲಿಗಂತಹ ಹಿಟ್ ಗಳ ಮೇಲೆ ಹಿಟ್ ಕೊಟ್ಟರೂ ಕೂಡಾ ಜೀತೇಂದ್ರ ಹೆಸರು ಒಮ್ಮೆಯೂ ಫಿಲ್ಮ್ಫೇರ್ ಕಣದಲ್ಲಿ ಕಾಣಿಸಿಕೊಳ್ಳಲಿಲ್ಲ.
ಅಜಯ್ ದೇವಗನ್
ಅಜಯ್ ದೇವಗನ್ ಬಾಲಿವುಡ್ನ ಪ್ರತಿಭಾವಂತ ನಟ. ಎರಡು ಬಾರಿ ರಾಷ್ಟ್ರೀಯ ಪ್ರಶಸ್ತಿ ಗೆದ್ದ ಸ್ಟಾರ್. ಆದರೆ ಸಿಂಗಂ, ದಿಲ್ವಾಲೆ, ಸನ್ ಆಫ್ ಸರ್ದಾರ್, ಗಂಗಾಜಲ್, ಖಯಾಮತ್, ಇಷ್ಕ್, ದೀವಾನೆ, ಹಕ್ಕೀಕತ್ ಗಳಂತಹ ಸೂಪರ್ ಹಿಟ್ಗಳನ್ನು ನೀಡಿದರೂ ಕೂಡಾ ಅಜಯ್ ದೇವಗನ್ ಗೆ ಫಿಲ್ಮ್ ಫೇರ್ ಪ್ರಶಸ್ತಿ ಒಲಿಯಲಿಲ್ಲ ಎಂದರೆ ನೀವು ನಂಬಲೇಬೇಕು.
ಸಲ್ಮಾನ್ ಖಾನ್
ಈ ಲಿಸ್ಟ್ ನಲ್ಲಿರುವ ಅಚ್ಚರಿಯ ಹೆಸರುಗಳಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವಂತಹ ಹೆಸರಿದು. ಬಾಲಿವುಡ್ ನಲ್ಲಿ ತಮ್ಮ ಅಭಿನಯದ ಮೂಲಕವೇ ಅಪಾರ ಅಭಿಮಾನಿ ವಲಯವನ್ನು ಗಳಿಸಿಕೊಂಡ ನಟ ಸಲ್ಮಾನ್ ಖಾನ್. ಅಪಾರ ಅಭಿಮಾನಿಗಳಿಂದ ಸಲ್ಲು ಭಾಯ್ ಎಂದು ಕರೆಸಿಕೊಳ್ಳುವ ಈ ನಟ ಏಕ್ ಥಾ ಟೈಗರ್, ಮೈನೆ ಪ್ಯಾರ್ ಕಿಯಾ, ರೆಡಿ, ತೇರೆ ನಾಮ್, ದಬಾಂಗ್, ಹಮ್ ಆಪ್ ಕೆ ಹೈ ಕೌನ್, ಕರಣ್ ಅರ್ಜುನ್, ಬಾಡಿಗಾರ್ಡ್ ಗಳಂತಹ ಎಂದೂ ಮರೆಯದ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. ಆದರೆ ಬಾಲಿವುಡ್ ನ ಈ ಬ್ಯಾಡ್ ಬಾಯ್ ಕಿರೀಟಕ್ಕೆ ಇನ್ನೂ ಒಂದು ಗರಿ ದಕ್ಕಿಲ್ಲ. ಅದೇ ಫಿಲ್ಮ್ ಫೇರ್ . ಯೆಸ್ ಸಲ್ಮಾನ್ ಖಾನ್ ಗೂ ಕೂಡಾ ಇಲ್ಲಿಯವರೆಗೆ ಒಂದೂ ಫಿಲ್ಮ್ಫೇರ್ ಲಭಿಸಿಲ್ಲ..!
- ರಾಜಶೇಖರ ಜೆ
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com