ಕಪ್ಪು ಕುಳಗಳಿಗೆ ಕೇಂದ್ರ ಸರ್ಕಾರ ಶಾಕ್ ಮೇಲೆ ಶಾಕ್ ನೀಡ್ತಾ ಬಂದಿದ್ದು ಇದೀಗ ಬ್ಯಾಂಕ್ ಡೆಪಾಸಿಟ್ ಪ್ರಮಾಣ ಹೇರಿಕೆ ಮಾಡಿ ಮತ್ತೊಂದು ಶಾಕ್ ನೀಡ್ತಾ ಇದೆ..! ಹೊಸ ಅಧಿಸೂಚನೆ ಪ್ರಕಾರ 5 ಸಾವಿರಕ್ಕೂ ಅಧಿಕ ಮೊತ್ತವನ್ನು ತಿಂಗಳಿಗೆ ಒಂದು ಬಾರಿ ಮಾತ್ರ ಠೇವಣಿ ಮಾಡ್ಬೇಕು ಅಂತ ಹೇಳಿದೆ. ಇದರೊಂದಿಗೆ ನಿಧಾನಗತಿಯಲ್ಲಿ ಠೇವಣಿ ಮಾಡುವ ಯೋಜನೆ ಹೊಂದಿದವರಿಗೆ ಭಾರಿ ಪೆಟ್ಟು ಬಿದ್ದಂತಾಗಿದೆ..! ಕೇಂದ್ರ ಹಣಕಾಸು ಇಲಾಖೆ ಡಿಸೆಂಬರ್ 30.ರವರೆಗೆ ಒಂದು ಬಾರಿ ಮಾತ್ರ ಠೇವಣಿ ಮಾಡಲು ಅವಕಾಶ ನೀಡಿದ್ದು, ಈ ನಿಯಮ ಉಳಿತಾಯ ಖಾತೆ ಸೇರಿದಂತೆ ಎಲ್ಲಾ ಖಾತೆಗೂ ಅನ್ವಯವಾಗಲಿದೆ. ಕೆವೈಸಿ ಇದ್ದರೆ ಮಾತ್ರ ಎರಡು ಲಕ್ಷದವರೆಗೆ ಮಾತ್ರ ಠೇವಣಿ ಇಡಲು ಅವಕಾಶವಿದೆ. ಅಲ್ಲದೆ 5000. ವರೆಗೆ ಮಾತ್ರ ಹಣ ಠೇವಣಿ ಇಡೋಕೆ ಅವಕಾಶವಿದೆ. ಡಿ.17ರಂದು ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿದ ಹೊಸ ಆದೇಶದಲ್ಲಿ ಪ್ರಧಾನ್ ಮಂತ್ರಿ ಗರೀಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಕಪ್ಪು ಹಣ ಬಹಿರಂಗಪಡಿಸಿಕೊಳ್ಳಲು ಠೇವಣಿ ಮೊತ್ತದ ಮೇಲೆ ಯಾವುದೇ ನಿರ್ಬಂಧವಿಲ್ಲ ಎಂದು ತಿಳಿಸಿತ್ತು. ಆದರೆ ಈಗ 5000ರೂ.ಗಿಂತ ಅಧಿಕ ಮೊತ್ತದ ಹಳೆ ನೋಟುಗಳನ್ನು ಜಮಾವಣೆ ಮೇಲೆ ಕೇಂದ್ರ ಸರ್ಕಾರ ಮಿತಿ ಹೇರಿದ್ದು, 5000ಕ್ಕಿಂತ ಕಡಿಮೆ ಮೊತ್ತ ಹಣವನ್ನು ಜಮೆ ಮಾಡಲು ಅವಕಾಶವಿದೆ ಎಂದು ತಿಳಿಸಿದೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಎಟಿಎಂ ಮುಂದೆ ಕ್ಯೂ ನಿಲ್ಲೊರ್ಗೆ ಇಲ್ಲಿದೆ ಸಂತಸದ ಸುದ್ದಿ
ಕೆಪಿಎಸ್‍ಸಿ: 1203 ಹುದ್ದೆಗೆ ಅರ್ಜಿ ಆಹ್ವಾನ
ಮನೆಯಲ್ಲೇ ನಕಲಿ ನೋಟು ತಯಾರಿಸುತ್ತಿದ್ದ ಡಾಕ್ಟರ್..!
ಕೆಲವೇ ದಿನಗಳಲ್ಲಿ ಬೆಂಗಳೂರಲ್ಲೂ ಸಂಚರಿಸಲಿದೆ ಸಬ್ ಅರ್ಬನ್ ರೈಲು..!
ನಿಮ್ಮ ಖಾತೆಯಲ್ಲಿ 2 ಲಕ್ಷ ರೂ. ಜಮಾ ಆಗಿದ್ಯಾ..? ಹಾಗಾದ್ರೆ ನಿಮ್ಗೆ ಕಾದಿದೆ ಗಂಡಾಂತರ..!