ಇಲ್ಲಿದ್ದಾಳೆ ನೋಡಿ ಮಹಿಳಾ ಐನ್ ಸ್ಟೀನ್! ಈಕೆಯ ಮುಂದಿನ ಟಾರ್ಗೇಟ್ ಏನು ಗೊತ್ತಾ?

Date:

ಮನಸ್ಸು ಮಾಡಿದ್ರೆ ಆಕಾಶಕ್ಕೆ ಏಣಿ ಹಾಕಬಹುದಂತೆ. ಸೆಬ್ರಿನಾ ಗೋಂಝಾಲೆಜ್ ಫಾಸ್ಟರ್ಸ್ಕಿ ಎಂಬ ಯುವತಿ ಆ ಮಾತನ್ನು ಅಕ್ಷರಶಃ ಸತ್ಯವಾಗಿಸಿದ್ದಾಳೆ. ಈಕೆಗೆ ಕಾರು ಓಡಿಸೋಕು ಬರುವುದಿಲ್ಲ. ಆದರೂ ವಿಮಾನಗಳನ್ನ ಹಾರಿಸುತ್ತಾಳೆ! ಈಗ ವಿಮಾನವನ್ನೇ ತಯಾರಿಸುವ ಕೆಲಸಕ್ಕೆ ಕೈಹಾಕಿದ್ದಾಳೆ.
ಯೆಸ್.. ಅಮೆರಿಕಾ ಮೂಲದ ಸೆಬ್ರಿನಾ ಗೋಂಝಾಲೆಜ್ ಫಾಸ್ಟರ್ಸ್ಕಿ 1993ರಲ್ಲಿ ಚಿಕಾಗೋದಲ್ಲಿ ಜನಿಸಿದಳು. ತನ್ನ 22ರ ಈ ಚೆಲುವೆ ಎಂಐಟಿ ಪದವಿ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಪಿ.ಎಚ್.ಡಿ ಮುಗಿಸಿದ್ದಾಳೆ. ವಿಶೇಷ ಅಂದ್ರೆ ಸೆಬ್ರೀನಾಗೆ ವಿಮಾನ ಹಾಗೂ ಅದರ ತಂತ್ರಜ್ಞಾನದ ಬಗ್ಗೆ ಇನ್ನಿಲ್ಲದ ಆಸಕ್ತಿ ಇದೆ. ಆದ್ದರಿಂದ ವಿಮಾನಗಳನ್ನ ಹಾರಿಸುವುದರಲ್ಲೂ ವಿಶೇಷ ಪರಿಣತಿ ಸಾಧಿಸಿದ್ದಾಳೆ. 2003 ರಿಂದ 2006ರ ನಡುವೆ ಹಲವು ಬಾರಿ ಹಾರಾಟ ನಡೆಸಿದ್ದಾಳೆ.
ಈಕೆಗೆ ವಿಮಾನದ ಮೇಲಿನ ಪ್ರೀತಿ ಎಷ್ಟಿದೆ ಎಂದರೆ ಇದೀಗ ಮೊದಲ ಕೈಟ್ ವಿಮಾನವನ್ನ ನಿರ್ಮಿಸುವ ಸಾಹಸಕ್ಕೆ ಮುಂದಾಗಿದ್ದಾಳೆ. ಈಕೆ ಮೊದಲ ಬಾರಿ ವಿಮಾನ ತಯಾರಿಸುವ ಬಗ್ಗೆ ಯೋಚಿಸಿದ್ದು ಹಾಗೂ ಯೋಜಿಸಿದ್ದು ಕೇವಲ 14ನೇ ವರ್ಷದಲ್ಲಿ..! ಇನ್ನು ಸೆಬ್ರೀನಾ ತಯಾರಿಸಲು ಇಚ್ಛಿಸಿರುವ ವಿಮಾನದ ಮಾದರಿ ಹಾಗೂ ಅದರ ಲಕ್ಷಣಗಳನ್ನ ಈಗಾಗಲೇ ಯೂಟ್ಯೂಬ್ ನಲ್ಲಿ ಹರಿಬಿಟ್ಟಿದ್ದಾಳೆ.
ಇನ್ನು ಸೆಬ್ರಿನಾಳ ಸಾಧನೆ ಇಲ್ಲಿಗೆ ಮುಗಿಯುವುದಿಲ್ಲ. ಅಮೆರಿಕಾದ ಫಿಸಿಕ್ಸ್ ತಂಡಕ್ಕೆ ನೇಮಕವಾಗಿರುವ 23 ಮಂದಿಯಲ್ಲಿ ಈಕೆಯೂ ಸೇರಿದ್ದಾಳೆ. ಹೀಗೆ ಕೇವಲ 14 ವರ್ಷಗಳಲ್ಲೇ ವಿಮಾನ ಹಾಗೂ ಅದರ ತಂತ್ರಜ್ಞಾನದಲ್ಲಿ ನೈಪುಣ್ಯತೆ ತೋರಿಸಿರುವ ಸೆಬ್ರಿನಾ ಭವಿಷ್ಯದ ಐನ್ ಸ್ಟೀನ್ ಅನ್ನೋದ್ರಲ್ಲಿ ಅನುಮಾನವಿಲ್ಲ.

Sabrina Gonzalez Pasterski was only 14 years old when she stepped foot into MIT’s campus offices seeking approval one morning for the single-engine plane she built.

  • ರಾಜಶೇಖರ ಜೆ

POPULAR  STORIES :

ಪಾಕಿಸ್ತಾನಕ್ಕಾಗಿ ಖಂಡೀಲ್ ಬಲೋಚ್ ಬೆತ್ತಳಾಗುತ್ತಾಳಂತೆ..!? #Video

`ಆ್ಯಮ್ ಸಾರೀ ಗೇಲ್’ ಅಂದ ಬಿಗ್ಬಿ ಅಮಿತಾಬ್..!? ಅಮಿತಾಬ್ ಮಾಡಿದ ತಪ್ಪೇನು..?

ಇಸ್ಲಾಂ ಮಹಾನ್ ಧರ್ಮ ಎಂದ ನಮೋ..!? ಪಾಕಿಸ್ತಾನ ಮನಃಸ್ಥಿತಿ, ಭಾರತ ಯಥಾಸ್ಥಿತಿ..!?

ಪ್ರೀತಿಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿ..! ಪ್ರೀತಿ `ಬೆಂಕಿ’ ಹುಷಾರು..!?

ಪಾಕ್ ನಲ್ಲೂ ಹೋಳಿ, ದೀಪಾವಳಿಗೆ ಸಾರ್ವತ್ರಿಕ ರಜೆ..!

ಸ್ವಲ್ಪ ನಿದ್ರೆಭಾಗ್ಯವನ್ನೂ ಕರುಣಿಸಿ, ಪ್ಲೀಸ್…!

ಥರ್ಡ್ ವರ್ಲ್ಡ್ ವಾರ್ ಗೆ ಕೊರಿಯ ಫೌಂಡೇಶನ್..!?

ಬೆತ್ತಲಾದ ಓವೈಸಿ.. ಬಟ್ಟೆ ಮುಚ್ಚಿಕೊಂಡ ಅಫ್ರಿದಿ..!!

ಪೆಟ್ರೋಲ್ ರೇಟು.. ಮೋದಿ ಏಟು..!? ಒಂದು ಲೀಟರ್ ಪೆಟ್ರೋಲ್ಗೆ ಹನ್ನೆರಡು ರೂಪಾಯಿ..?!!

ಅಬ್ಬಾ ಜಸ್ಟ್ ಮಿಸ್..! ಈ ಮಹಿಳೆಯರ ಅದೃಷ್ಟ ನೆಟ್ಟಗಿತ್ತು..! ಇಲ್ದೇ ಹೋಗಿದ್ರೆ?

Share post:

Subscribe

spot_imgspot_img

Popular

More like this
Related

ಹಾನಗಲ್ ಗ್ಯಾಂಗ್ ರೇಪ್ ಆರೋಪಿಗಳ ಗಡಿಪಾರು

ಹಾನಗಲ್ ಗ್ಯಾಂಗ್ ರೇಪ್ ಆರೋಪಿಗಳ ಗಡಿಪಾರು 2024ರ ಜನವರಿಯಲ್ಲಿ ಹಾವೇರಿ ಜಿಲ್ಲೆಯ ಹಾನಗಲ್...

ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ – ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ

ರಾಜ್ಯದಲ್ಲಿ ಸೀಸನಲ್ ಫ್ಲೂ ಭೀತಿ – ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಕರ್ನಾಟಕದಲ್ಲಿ...

ಮಾಂತ್ರಿಕ ನಾಣ್ಯದ ಹೆಸರಲ್ಲಿ ಮೋಸ: ನಾಗಮಂಗಲದಲ್ಲಿ ವಂಚಕನಿಗೆ ಗೂಸಾ!

ಮಾಂತ್ರಿಕ ನಾಣ್ಯದ ಹೆಸರಲ್ಲಿ ಮೋಸ: ನಾಗಮಂಗಲದಲ್ಲಿ ವಂಚಕನಿಗೆ ಗೂಸಾ! ಮಂಡ್ಯ: ಮಾಂತ್ರಿಕ ಶಕ್ತಿಯುಳ್ಳ...

T20 World Cup: ಟಿ20 ವಿಶ್ವಕಪ್‌ʼಗೆ ಭಾರತ ತಂಡ ಪ್ರಕಟ: ಉಪನಾಯಕನ ಬದಲಾವಣೆ! 

T20 World Cup: ಟಿ20 ವಿಶ್ವಕಪ್‌ʼಗೆ ಭಾರತ ತಂಡ ಪ್ರಕಟ: ಉಪನಾಯಕನ...