ಹೆಣ್ಣೆಂದರೇನು.. ಆಶ್ಚರ್ಯವೇನು..?

0
49

ಹೆಣ್ಣೆಂದರೇ ಅದ್ಭುತ ಸೃಷ್ಟಿ. ಅವಳು ಪದಗಳಿಗೆ ನಿಲುಕದವಳು. ಅವಳ ಮೇಲೆ ಡಿಬೇಟ್ ಮಾಡಲು ಸಾಧ್ಯವಿಲ್ಲ. ಏಕೆಂದರೇ ಅವಳ ಹೆಜ್ಜೆ ಯಾವತ್ತಿಗೂ ಅಸ್ಪಷ್ಟ. ಹೆಣ್ಣಿನಲ್ಲಿ ಹಲವು ಬಗೆ. ಅವಳಲ್ಲಿ ತಾಯಿ, ಸೋದರಿ, ಮಡದಿ, ಮಗಳು, ಪ್ರೇಯಸಿ ಹೇಗಿರುತ್ತಾಳೋ ಅವಳಲ್ಲೂ ಒಬ್ಬಳು ದುಷ್ಟೆ ಇರುತ್ತಾಳೆ. ಕ್ರೂರಿ ಎನಿಸಿಕೊಳ್ಳುತ್ತಾಳೆ. ಹೆತ್ತ ಮಕ್ಕಳಿಗಾಗಿ ಇಡೀ ಜೀವನವನ್ನೇ ಬಲಿ ಕೊಟ್ಟು ತ್ಯಾಗಮಯಿ ಎನಿಸಿಕೊಳ್ಳುವ ಅವಳೇ, ಒಂದೊಮ್ಮೆ ಮಕ್ಕಳನ್ನು ತೊಟ್ಟಿಯಲ್ಲಿ ಬಿಸಾಡಿ ಹೋಗುತ್ತಾಳೆ. ಕಿರಾತಕ ಪತಿಯನ್ನು ಸಾಯುವವರೆಗೆ ಸಹಿಸಿಕೊಳ್ಳುವ ಅವಳು, ಸೊಗಸಾದ ಗಂಡನನ್ನು ಹೀನಾಯವಾಗಿ ಕೊಲ್ಲಿಸುತ್ತಾಳೆ. ನೈತಿಕ ಸಂಬಂಧವನ್ನು ಪ್ರೀತಿಸುವವಳು ಒಂದು ಕಡೆಯಾದ್ರೇ, ಅನೈತಿಕ ಚಾಳಿಯಲ್ಲಿ ಮಿಂದೇಳುವವಳು ಮತ್ತೊಂದು ಕಡೆ. ಮೊದಲೇ ಹೇಳಿದಂತೆ ಅವಳು ಅಸ್ಪಷ್ಟ. ಅರ್ಥವಾಗದ ಸಂಗತಿ.

ಆದರೆ ಹೆಣ್ಣುಮಕ್ಕಳಲ್ಲಿ ಹೆಚ್ಚಿನವರು ಕ್ರೂರಿಗಳಲ್ಲ. ಎಲ್ಲರೂ ಪೂಲನ್ ದೇವಿ ಆಗಲು ಸಾಧ್ಯವಿಲ್ಲ. ಈಗಿನ ಬಹುತೇಕ ಹೆಣ್ಣುಮಕ್ಕಳಲ್ಲಿ ನಾವು ಮದರ್ ತೆರೆಸಾರನ್ನು ಕಾಣಬಹುದು. ರಾಜಕಾರಣದ ಬೆಂಕಿಯಲ್ಲಿ ಕಾದು ಚಿನ್ನವಾದ ಇಂದಿರಾ ಗಾಂಧಿಯನ್ನು ಕಾಣಬಹುದು. ಸಾವಿನ ಮನೆಯಲ್ಲಿದ್ದುಕೊಂಡು ಜಗತ್ತಿನ ಮುಂದೆ ಪ್ರಜ್ವಲಿಸಿದ ಮಲಾಲಳನ್ನು ಕಾಣಬಹುದು. ಉದಾಹರಿಸುತ್ತಾ ಹೋದರೆ, ಲಕ್ಷಾಂತರ ಹೆಣ್ಣುಮಕ್ಕಳು ಹೆಮ್ಮೆ ಮೂಡಿಸುತ್ತಾರೆ.

ಹೆಣ್ಣು ಕತ್ತಲಕೋಣೆಗೆ ಸೀಮಿತ ಎಂದಿದ್ದ ಕಾಲದಲ್ಲೇ ಕಿತ್ತೂರು ಚೆನ್ನಮ್ಮನಂತ ಧೀರ ವನಿತೆಯರು ಖಡ್ಗ ಹಿಡಿದು ಶತ್ರುಗಳ ವಿರುದ್ಧ ಸೆಣಸಾಡುತ್ತಿದ್ದರು. ಹೈದರ್ ಆಲಿ ಜೀವಿತದಲ್ಲೇ ಮರೆಯಲಾಗದಂತೆ ಒನಕೆ ಏಟು ಕೊಟ್ಟು ಇತಿಹಾಸವಾಗಿದ್ದು ಓಬವ್ವ. ಇವತ್ತಿಗೂ ನ್ಯಾಯಕ್ಕಾಗಿ ಹೋರಾಡುವ ಮಹಿಳೆಯರನ್ನು ಪೊಲೀಸ್, ಸೈನ್ಯ, ವಕೀಲ ವೃತ್ತಿಯಲ್ಲಿ ಕಾಣಬಹುದು. ಹೆಣ್ಣು ದೈಹಿಕವಾಗಿ ಗಂಡಿಗಿಂತ ದುರ್ಬಲಳು ನಿಜ. ಆದರೆ ಮಾನಸಿಕವಾಗಿ ಅವಳಿಗೆ ಸರಿಸಮನಾಗಿ ಗಂಡು ನಿಲ್ಲಲಾರ. ಇವತ್ತಿಗೆ ಶಿಕ್ಷಣ, ಉದ್ಯೋಗ, ಕ್ರೀಡೆ ಇನ್ನಿತರೆ ಪ್ರಕಾರಗಳಲ್ಲಿ ಗಂಡಿಗಿಂತ ಪ್ರಕಾಶಮಾನವಾಗಿ ಮಿಂಚುತ್ತಿರೋದು ಹೆಣ್ಣುಮಕ್ಕಳು.

ಹೆಣ್ಣು ಮಕ್ಕಳನ್ನು ಹೆರುವ ಯಂತ್ರ ಎಂದಿದ್ದ ಕಾಲವೆಲ್ಲ ಹೊರಟುಹೋಗಿದೆ. ಗಂಡಿಗೆ ಸಮನಾಗಿ ಅವಳು ಜಗತ್ತಿಗೆ ಅಡಿಯಿಟ್ಟಿದ್ದಾಳೆ. ಸೈಕಲ್, ಸ್ಕೂಟರ್ ಹಿಂದೆ ಕೂರುವುದಕ್ಕೆ ಅದುರುತ್ತಿದ್ದ ಅವಳು, ನಿರಾತಂಕವಾಗಿ ವಿಮಾನವನ್ನು ಓಡಿಸುವುದನ್ನು ಕಲಿತಿದ್ದಾಳೆ. ಗಂಡಸಿನ ತೋಳ್ಬಲವನ್ನು ನೋಡಿ ನಡುಗುತ್ತಿದ್ದ ಅವಳೀಗ ಕರಾಟೆಯ ಪಟ್ಟುಗಳನ್ನು ಸಲೀಸಾಗಿ ಮಾಡಬಲ್ಲಳು. ಮಕ್ಕಳಿಗೆ ಒಳ್ಳೆಯ ತಾಯಿಯಾಗಿ, ಗಂಡನಿಗೆ ಒಳ್ಳೇ ಮಡದಿಯಾಗಿ, ಸಮಾಜಕ್ಕೆ ಆದರ್ಶವಾಗಿ ಬದುಕುತ್ತಿರುವ ಹೆಣ್ಣು ಹಲವು ಬಾರಿ ಅಪರಿಪೂರ್ಣವೆನಿಸುತ್ತಾಳೆ. ಸಂಕಷ್ಟಕ್ಕೀಡಾಗುತ್ತಾಳೆ. ವೈಯುಕ್ತಿಕ ಜೀವನದಲ್ಲಿ ಅನೇಕ ಬಾರಿ ಸೋಲುತ್ತಾ ಹೋಗುತ್ತಾಳೆ. ಮನೆಯಿಂದ ಹೊರಗೆ ಕಾಲಿಟ್ಟಿದ್ದೇ ಅವಳಿಗೆ ಶಾಪವಾಯ್ತಾ ಎಂಬುವಷ್ಟರ ಮಟ್ಟಿಗೆ ಹೆಣ್ಣಿನ ಜೀವನದಲ್ಲಿ ದುರಂತಗಳು ಘಟಿಸುತ್ತಿವೆ. ಒಮ್ಮೊಮ್ಮೆ ಕೆಲವೊಂದು ಅವಳ ಸ್ವಯಂಕೃತಪರಾಧವೆನಿಸಿದರೂ, ಹಲವು ಬಾರಿ ವ್ಯವಸ್ಥೆಯ ಮುಂದೆ ಅವಳು ಶರಣಾಗತಳು ಎನಿಸುತ್ತಾಳೆ.

ಇವತ್ತಿಗೆ ಹಲವು ಕ್ಷೇತ್ರಗಳಲ್ಲಿ ಚಾಪು ಮೂಡಿಸಿರುವ ಹೆಣ್ಣು ಎಲ್ಲೋ ಒಂದು ಕಡೆ ಸ್ವೇಚ್ಛಾಚಾರ, ಅಹಂಕಾರ, ಉಢಾಫೆಗಳಿಂದ ಬಲಿಯಾಗುತ್ತಿದ್ದಾಳಾ..? ಎಂಬ ಅನುಮಾನ ಬರುತ್ತದೆ. ಏಕೆಂದರೇ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳು ಇಂತಹ ಶಂಕೆಯನ್ನು ಪುಷ್ಠೀಕರಿಸಿದೆ. ಸಬಲಳಾದ ಹೆಣ್ಣು ಅದ್ಯಾಕೆ ಈಗಲು ದುರ್ಬಲಳೆನಿಸುತ್ತಾಳೆ ಎಂಬ ಪ್ರಶ್ನೆ ಮೂಡಲು ಕಾರಣ; ಇತ್ತೀಚೆಗೆ ನಡೆಯುತ್ತಿರುವ ಹಲವು ಅಪರಾಧ ಪ್ರಕರಣಗಳು. ದುರಂತವೆಂದರೇ ಏನೂ ಅರಿಯದ ಹೆಣ್ಣು ಹಸುಗೂಸುಗಳ ಮೇಲೆಯೇ ವಿಕೃತ ದೌರ್ಜನ್ಯಗಳು ನಡೆಯುತ್ತಿವೆ. ಸಬಲಳಾದ ಹೆಣ್ಣಿಂದ ಇಂತಹ ಮೃಗೀಯ ಸಮಸ್ಯೆಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ.

ಇಡೀ ಮೈಯ್ಯನ್ನು ಮುಖ ಹೊರತುಪಡಿಸಿ ಮುಚ್ಚಿಕೊಳ್ಳುತ್ತಿದ್ದ ಕಾಲ ಹೊರಟುಹೋಗಿದೆ. ಹೆಣ್ಣು ಒಂಟಿಯಾಗಿ ಮನೆಯ ಅಂಗಳಕ್ಕೆ ಬರಲು ಹೆದರುತ್ತಿದ್ದ ಕಾಲವೂ ಇದಲ್ಲ. ಇವತ್ತಿಗೆ ಹಲವು ಹೆಣ್ಣುಮಕ್ಕಳು ಒಂಟಿಯಾಗಿ ಪಬ್ಗಳಲ್ಲಿ ಮೈಮರೆತು ಕುಣಿಯುತ್ತಾರೆ. ರಸ್ತೆ ಮದ್ಯೆ ಕುಡಿದು ತೂರಾಡುತ್ತಾರೆ. ಲೀವ್ ಇನ್ ರಿಲೇಶನ್ಶಿಪ್ ಹೆಸರಿನಲ್ಲಿ ಪ್ರಿಯಕರ ಎನಿಸಿಕೊಂಡವನ ಜೊತೆ ವಾಸಮಾಡತೊಡಗುತ್ತಾಳೆ. ಪ್ರೆಗ್ನೆನ್ಸಿ ಫ್ಯಾಶನ್ ಆಗಿದೆ. ಬಾಯ್ಫ್ರೆಂಡ್ಗಳನ್ನು ಬಟ್ಟೆ ಕಳಚಿದಷ್ಟೇ ಸೋಬಿಯಾಗಿ ಬದಲಾಯಿಸುತ್ತಾರೆ. ವಿವಾಹ ಸಂಬಂಧವೂ ಅಷ್ಟೆ..! ಗಂಡ ಏನಾದ್ರೂ ನಕರಾ ಮಾಡಿದ್ರೇ ಡಿವೋಸರ್್ ಪೇಪರ್ ಮುಲಾಜಿಲ್ಲದೇ ಅವನಿಗೆ ಕೊರಿಯರ್ ಆಗುತ್ತೆ. ಎಲ್ಲೋ ಒಂದು ಕಡೆ ಅತಿಯಾದ ಸ್ವತಂತ್ರ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗುತ್ತಿದೆಯಾ..? ಎಂಬ ಅನುಮಾನ ಮೂಡುತ್ತದೆ.

ಈಗ್ಗೆ ಮೂವತ್ತು ನಲವತ್ತು ವರ್ಷಗಳ ಆಚೆಗೂ ಹಾಗೂ ಇತ್ತೀಚೆಗೂ ಹೆಣ್ಣುಮಕ್ಕಳ ಮೇಲಾಗುತ್ತಿರುವ ಅಪರಾಧ ಪ್ರಕರಣ, ದೌರ್ಜನ್ಯಗಳ ಬಗ್ಗೆ ಸೂಕ್ಷ್ಮವಾಗಿ ಅವಲೋಕಿಸಿ ನೋಡಿ. ಆಗ ಪಕ್ಕದ ಮನೆಯ ಹೆಣ್ಣುಮಕ್ಕಳು ಕಣ್ಣಿಗೆ ಬಿದ್ದರೇ ಪೂರ್ವಜನ್ಮದ ಪುಣ್ಯವೆಂಬಂತೆ ಭಾಸವಾಗುತ್ತಿದ್ದರು. ಹಾಗಾಗಿಯೇ ಅಪರೂಪಕ್ಕೊಮ್ಮೆ ಸಲೀಂ ಅನಾರ್ಕಲಿ ಪ್ರೇಮ್ ಕಹಾನಿ, ತೀರಾ ವಿರಳ ಎಂಬಂತೆ ಅತ್ಯಾಚಾರ, ಕೊಲೆಯಂತ ಪ್ರಕರಣಗಳು ಘಟಿಸುತ್ತಿದ್ದವು. ಎಷ್ಟು ವಿರಳವಾಗಿ ಇಂತಹ ಪ್ರಕರಣಗಳು ನಡೆಯುತ್ತಿದ್ದವೆಂದರೇ, ಕೌಂಟ್ಡೌನ್ ಮಾಡಿದ್ರೂ ಐದು, ಹತ್ತು ವರ್ಷಕ್ಕೆ ಲೆಕ್ಕಾಚಾರ ಮುಕ್ತಾಯವಾಗುತ್ತಿತ್ತು. ಅದೇ ಇವತ್ತು ನೋಡಿ, ಅಕ್ಕದ ಗಲ್ಲಿಯಲ್ಲಿ ಯುವತಿಯ ಮೇಲೆ ರೇಪ್ ಆಯ್ತಂತೆ ಎಂದು ಮಾತಾಡಿಕೊಳ್ಳುವಷ್ಟರಲ್ಲಿ, ಪಕ್ಕದ ಗಲ್ಲಿಯಲ್ಲಿ ಹೆಣ್ಣು ಹಸುಗೂಸಿನ ಮೇಲೆ ದೌರ್ಜನ್ಯ ನಡೆದಿರುತ್ತದೆ. ಇದೇನಪ್ಪಾ ಹಿಂಗಾಯ್ತು.. ಎನ್ನುವಷ್ಟರಲ್ಲಿ ಅಲ್ಲೆಲ್ಲೋ ಸಾಮೂಹಿಕ ಅತ್ಯಾಚಾರ ನಡೆಯಿತು ಎಂಬ ಸುದ್ದಿ. ಇನ್ನು ಒಂಟಿ ಮಹಿಳೆಯರ ಕೊಲೆ, ಸಿಟಿ ಕ್ಯಾಬ್ಗಳಲ್ಲಿ ರೇಪ್ ಅಂಡ್ ಮರ್ಡರ್, ಮಿಡ್ನೈಟ್ನಲ್ಲಿ ಕಾರನ್ನು ಅಡ್ಡಗಟ್ಟಿ ಮಹಿಳೆಯ ಮೇಲೆ ಅತ್ಯಾಚಾರಕ್ಕೆ ಯತ್ನ- ಹೀಗೆ ಹಲವಾರು ಬೆಚ್ಚಿಬೀಳಿಸುವ ಸುದ್ದಿಗಳು ಪ್ರತಿದಿನ ಕಿವಿಗೆ ಅಪ್ಪಳಿಸುತ್ತಿವೆ.

ಹೆಣ್ಣು ಯಾವಾಗ ಸುಲಭವಾಗಿ ಕೈಗೆಟುಕತೊಡಗಿದಳೋ ಅವತ್ತಿನಿಂದ ಇಂತಹ ಕೃತ್ಯಗಳು ಮಾಮೂಲು ಎಂಬಂತಾಗಿದೆ. ಇವುಗಳ ಜೊತೆಗೆ ಅನೈತಿಕ ಚಾಳಿಗಳು ಕೂಡ ತೀರಾ ಸಹಜವೆನಿಸತೊಡಗಿದೆ. ಆ ಕಾಲದಲ್ಲಿ ಡಿವೋಸರ್್ ಎಂಬ ಶಬ್ಧ ಕಿವಿಗೆ ಬಿದ್ದರೇ ಊರಿಗೆ ಊರೇ ಮಾತಾಡಿಕೊಳ್ಳುತ್ತಿತ್ತು. ಇವತ್ತಿಗೂ ಡಿವೋಸರ್್, ಟೀ ಕುಡಿದು ಎದ್ದುಹೋಗುವಷ್ಟರ ಮಟ್ಟಿಗೆ ಸಾಮಾನ್ಯವೆನಿಸಿದೆ. ಅಂದರೆ ಇಲ್ಲಿ ಹೆಣ್ಣು ತನ್ನ ಸ್ವತಂತ್ರವನ್ನು ದುರುಪಯೋಗಪಡಿಸಿಕೊಂಡಿದ್ದೇ ಇಷ್ಟೆಲ್ಲಾ ಅನಾಹುತಕ್ಕೆ ಕಾರಣ ಎನ್ನಬಹುದು..? ಹಾಗಂತ ಈ ಮಾತುಗಳು ಎಲ್ಲಾ ಹೆಣ್ಣುಮಕ್ಕಳಿಗೂ ಅನ್ವಯಿಸುವುದಿಲ್ಲ.

ಹೆಣ್ಣು ಸಮಾಜದಲ್ಲಿ ಯಾವತ್ತಿಗೂ ಮುಂಚೂಣಿಯಲ್ಲಿರಬೇಕು. ಹಾಗಿದ್ದಾಗ ಮಾತ್ರ ಅವಳು ಪುರುಷ ಪ್ರಧಾನ ಸಮಾಜದಲ್ಲಿ ಗಂಡಿಗೆ ಸಮಾನಾಗಿ ನಿಲ್ಲುತ್ತಾಳೆ. ಆದರೆ ಅವಳಿಗೆ ಸಿಕ್ಕ ಸ್ವತಂತ್ರವನ್ನು ಮಿಸ್ಯೂಸ್ ಮಾಡಿಕೊಂಡರೇ ಮಾತ್ರ ಅನಾಹುತ ಕಟ್ಟಿಟ್ಟಬುತ್ತಿ. ಏಕೆಂದರೇ ಅವಳು ಸ್ವತಂತ್ರಳಾದಷ್ಟು ಅತಂತ್ರಳಾಗುತ್ತಿದ್ದಾಳೆ. ಅವಳ ಸ್ವತಂತ್ರವೇ ಅವಳ ಬದುಕನ್ನು ದುರಂತಕ್ಕೆ ಕೊಂಡೊಯ್ಯುತ್ತಿದೆ. ಒಟ್ಟಾರೆಯಾಗಿ ಬದುಕಿನ ಮಹತ್ವ, ಲೈನ್ ಆಫ್ ಕಂಟ್ರೋಲ್ ಅರಿವಿರುವ ಹೆಣ್ಣುಮಕ್ಕಳು ಮಾತ್ರ, ಪುರುಷಪ್ರಧಾನ ಸಮಾಜದಲ್ಲಿ ತಲೆ ಎತ್ತಿ ನಡೆಯುತ್ತಾಳೆ. ಸಮುದ್ರಕ್ಕೆ ವಿರುದ್ಧವಾಗಿ ಈಜಿ ಜಯಿಸುತ್ತಾಳೆ.

  • ರಾ ಚಿಂತನ್ .

POPULAR  STORIES :

ಪಾಕಿಸ್ತಾನಕ್ಕಾಗಿ ಖಂಡೀಲ್ ಬಲೋಚ್ ಬೆತ್ತಳಾಗುತ್ತಾಳಂತೆ..!? #Video

`ಆ್ಯಮ್ ಸಾರೀ ಗೇಲ್’ ಅಂದ ಬಿಗ್ಬಿ ಅಮಿತಾಬ್..!? ಅಮಿತಾಬ್ ಮಾಡಿದ ತಪ್ಪೇನು..?

ಇಸ್ಲಾಂ ಮಹಾನ್ ಧರ್ಮ ಎಂದ ನಮೋ..!? ಪಾಕಿಸ್ತಾನ ಮನಃಸ್ಥಿತಿ, ಭಾರತ ಯಥಾಸ್ಥಿತಿ..!?

ಪ್ರೀತಿಗೆ ಬೆಂಕಿಯಿಟ್ಟ ಪಾಗಲ್ ಪ್ರೇಮಿ..! ಪ್ರೀತಿ `ಬೆಂಕಿ’ ಹುಷಾರು..!?

ಪಾಕ್ ನಲ್ಲೂ ಹೋಳಿ, ದೀಪಾವಳಿಗೆ ಸಾರ್ವತ್ರಿಕ ರಜೆ..!

ಸ್ವಲ್ಪ ನಿದ್ರೆಭಾಗ್ಯವನ್ನೂ ಕರುಣಿಸಿ, ಪ್ಲೀಸ್…!

ಥರ್ಡ್ ವರ್ಲ್ಡ್ ವಾರ್ ಗೆ ಕೊರಿಯ ಫೌಂಡೇಶನ್..!?

ಬೆತ್ತಲಾದ ಓವೈಸಿ.. ಬಟ್ಟೆ ಮುಚ್ಚಿಕೊಂಡ ಅಫ್ರಿದಿ..!!

ಪೆಟ್ರೋಲ್ ರೇಟು.. ಮೋದಿ ಏಟು..!? ಒಂದು ಲೀಟರ್ ಪೆಟ್ರೋಲ್ಗೆ ಹನ್ನೆರಡು ರೂಪಾಯಿ..?!!

ಅಬ್ಬಾ ಜಸ್ಟ್ ಮಿಸ್..! ಈ ಮಹಿಳೆಯರ ಅದೃಷ್ಟ ನೆಟ್ಟಗಿತ್ತು..! ಇಲ್ದೇ ಹೋಗಿದ್ರೆ?

LEAVE A REPLY

Please enter your comment!
Please enter your name here